
ಬೆಂಗಳೂರು : ಮತ್ತೊಂದು ಪ್ರಕರಣದಲ್ಲಿ ‘ಪುಲ್ವಾಮಾದಲ್ಲಿ ನಡೆದಿರುವುದು ಸಣ್ಣ ಟ್ರೇಲರ್, ಪಿಕ್ಚರ್ ಅಭಿ ಬಾಕಿ ಹೈ’ ಎಂದು ಸ್ಟೇಟಸ್ ಹಾಕಿದ್ದ ಕಮ್ಮನಹಳ್ಳಿ ಎಚ್‌ಬಿಎಸ್ ಲೇಔಟ್ ನಿವಾಸಿ ಫೈಜ್ ರಶೀದ್ (20 ) ಎಂಬಾತ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿ ಖಾಸಗಿ ಕಾಲೇಜಿನಲ್ಲಿ ಕಂಪ್ಯೂ ಟರ್ ಸೈನ್ಸ್‌ಗೆ ದಾಖಲಾತಿ ಪಡೆದಿದ್ದ. ವಿದ್ಯಾ ಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಆರೋಪಿ ಸೂಕ್ತ ಕೆಲಸಕ್ಕಾಗಿ ಹುಡುಕಾಟ ನಡೆ ಸಿದ್ದ. ಈತ ‘ಸಮೂಹ ಹತ್ಯೆಗಳು, ರಾಮ ಮಂದಿರ, 2002ರ ಘಟನೆಗೆ ಪುಲ್ವಾಮಾದಲ್ಲಿ ನಡೆದದ್ದು ಸಣ್ಣ ಪ್ರತೀಕಾರ ಮಾತ್ರ’ ಎಂದು ಹೇಳುವ ಮೂಲಕ ಭಾರತೀಯ ಸೈನಿಕರನ್ನು ಅವಮಾನ ಮಾಡಿದ್ದ.
ಆರೋಪಿಯ ಸ್ಟೇಟಸನ್ನು ಸಾಮಾಜಿಕ ತಾಣದಲ್ಲಿರುವ ಈತನ ಸ್ನೇಹಿತರೇ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಖಾತೆಗೆ ಟ್ಯಾಗ್ ಮಾಡಿದ್ದರು. ಆರೋಪಿ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಫೋಟೋ ಹಾಕಿರಲಿಲ್ಲ.
ವಿಳಾಸವನ್ನೂ ಹಾಕಿರಲಿಲ್ಲ. ಆಕ್ಷೇಪಾರ್ಹ ಬರಹ ಹಾಕುವ ಉದ್ದೇಶ ದಿಂದಲೇ ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ