ಹಿಂದೂ ವಿರೋಧಿ ಸರ್ಕಾರಕ್ಕೆ ಹೆದರಬೇಡಿ; ಡಿಜೆ ಹಚ್ಚಿಯೇ ಗಣೇಶೋತ್ಸವ ಮಾಡಿ; ಯುವಕ ಮಂಡಳಿತಗೆ ಮುತಾಲಿಕ್ ಕರೆ

By Ravi Janekal  |  First Published Sep 8, 2024, 4:41 PM IST

ಡಿಜೆ ಸಂಬಂಧ ಸುಪ್ರೀಂ ಕೋರ್ಟ ಆದೇಶ ಇದೆ ಎಂದು ಹೇಳುತ್ತಾರೆ. ಆದರೆ ಮಸೀದಿಗಳ ಮೈಕ್‌ಗಳಿಗೂ ಸುಪ್ರೀಂ ಕೋರ್ಟ್ ಆದೇಶವಿದೆ. ಮಸೀದಿಯ ಮೈಕ್‌ಗಳಿಂದ ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದೇವೆ. ಈ ಬಗ್ಗೆ ಪೊಲೀಸರು ಮಾತನಾಡದೇ ಡಿಜೆ ಬಗ್ಗೆ ಮಾತನಾಡುವುದು ಏಕೆ? ಇದಕ್ಕೆ ಪೊಲೀಸರು ಉತ್ತರಿಸಲಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರಶ್ನಿಸಿದರು.


ಚಿಕ್ಕೋಡಿ (ಸೆ.8): ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಹಚ್ಚಲು ಸರ್ಕಾರ ಹಾಗೂ ಪೊಲೀಸರು ತೊಂದರೆ ಕೊಡುತ್ತಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.

ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಮುತಾಲಿಕ್ ಅವರು, ವರ್ಷಕ್ಕೊಮ್ಮೆ ನಾವು ಡಿಜೆ ಮೂಲಕ ಗಣೇಶ ಉತ್ಸವ ಆಚರಣೆ ಮಾಡುತ್ತೇವೆ. ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಪೊಲೀಸರ ಮೂಲಕ ತೊಂದರೆ ಕೊಡುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳಿಗೆ ಸರ್ಕಾರ ತೊಂದರೆ ನೀಡುತ್ತಿದೆ. ಅದೇನೆ ಆಗಲಿ ಡಿಜೆ ಹಚ್ಚುವುದನ್ನ ನಿಲ್ಲಿಸಬೇಡಿ ಡಿಜಿ ಹಚ್ಚಿಯೇ ಗಣೇಶೋತ್ಸವ ಆಚರಿಸುವಂತೆ ಯುವಕ ಮಂಡಳಿಗೆ ಕರೆ ನೀಡಿದರು.

Tap to resize

Latest Videos

undefined

ನೇಹಾ ಹಿರೇಮಠ ಕೊಲೆ ಪ್ರಕರಣ ಬಳಿಕವೂ ಎಚ್ಚೆತ್ತುಕೊಳ್ತಿಲ್ಲಂದ್ರೆ ಏನು ಹೇಳಬೇಕು? ಯುವತಿಯರ ಬಗ್ಗೆ ಪ್ರಮೋದ ಮುತಾಲಿಕ್ ಬೇಸರ

ಡಿಜೆ ಸಂಬಂಧ ಸುಪ್ರೀಂ ಕೋರ್ಟ ಆದೇಶ ಇದೆ ಎಂದು ಹೇಳುತ್ತಾರೆ. ಆದರೆ ಮಸೀದಿಗಳ ಮೈಕ್‌ಗಳಿಗೂ ಸುಪ್ರೀಂ ಕೋರ್ಟ್ ಆದೇಶವಿದೆ. ಮಸೀದಿಯ ಮೈಕ್‌ಗಳಿಂದ ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದೇವೆ. ಈ ಬಗ್ಗೆ ಪೊಲೀಸರು ಮಾತನಾಡದೇ ಡಿಜೆ ಬಗ್ಗೆ ಮಾತನಾಡುವುದು ಏಕೆ? ಮಸೀದಿಯಲ್ಲಿ ಮೈಕ್ ತೆಗೆಸಲು ಪೊಲೀಸರೂ ಹೆದರಿಕೊಳ್ತಾರೆ. ಹಿಂದೂಗಳು ಮೃದು ಸ್ವಭಾವದವರು ಹೀಗಾಗಿ ಹಿಂದೂ ಆಚರಣೆಗಳಿಗೆ ಮಾತ್ರ ತೊಂದರೆ ಕೊಡುತ್ತಾರೆ. ಆದರೆ ನಾನು ಈ ತಾರತಮ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.  ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಮಾತಾಡೋದಾದ್ರೆ ಮಸೀದಿಯ ಮೈಕ್ ಸಹ ತೆಗೆಸಿ ಎಂದು ಸವಾಲು ಹಾಕಿದರು. ಯಾವುದನ್ನೂ ಲೆಕ್ಕಿಸದೇ ಡಿಜೆ ಹಚ್ಚಿ ಕಾರ್ಯಕ್ರಮ ಮಾಡುವಂತೆ ಹಿಂದೂ ಸಂಘಟನೆಗಳಿಗೆ ಕರೆ ನೀಡಿದರು. ಪೊಲೀಸರು ಕಿರುಕುಳ, ತೊಂದರೆ ಕೊಟ್ಟರೆ ತುಮಕೂರು ಜಿಲ್ಲಾಧ್ಯಕ್ಷರನ್ನು ಸಂಪರ್ಕಿಸುವಂತೆ ತಿಳಿಸಿದರು.

click me!