ಹಾಫ್ ಚಡ್ಡಿ ಫುಲ್ ಚಡ್ಡಿ ಮಾಡಿದ್ದೇ ಸಾಧನೆ, RSS ನಿಷೇಧಕ್ಕೆ ಸಿಎಂಗೆ ಪತ್ರ ಬರೆದ ಪ್ರಿಯಾಂಕ್ ಖರ್ಗೆ

Published : Oct 12, 2025, 02:41 PM IST
Priyank Kharge

ಸಾರಾಂಶ

ಹಾಫ್ ಚಡ್ಡಿ ಫುಲ್ ಚಡ್ಡಿ ಮಾಡಿದ್ದೇ ಸಾಧನೆ, ಆರ್‌ಎಸ್ಎಸ್ ನಿಷೇಧಕ್ಕೆ ಸಿಎಂಗೆ ಪತ್ರ ಬರೆದ ಪ್ರಿಯಾಂಕ್ ಖರ್ಗೆ, ವಿಷ ಬೀಜ ಬಿತ್ತುವ ಕೆಲಸವನ್ನು ಆರ್‌ಎಸ್ಎಸ್ ಮಾಡುತ್ತಿದೆ. ಆರ್‌ಎಸ್ಎಸ್ ಸಂಘಟನೆಯನ್ನು ತಾಲೀಬಾನ್‌ಗ ಹೋಲಿಕೆ ಮಾಡಿದ್ದಾರೆ.

ಬೆಂಗಳೂರು (ಅ.12) ಆರ್‌ಎಸ್ಎಸ್ ನವರು ಹಾಫ್ ಚಡ್ಡಿಯನ್ನು ಫುಲ್ ಚಡ್ಡಿ ಮಾಡಿದ್ದೇ ಸಾಧನೆ. ಧರ್ಮದ ಹೆಸರಿನಲ್ಲಿ, ಗೋ ರಕ್ಷಣೆ ಹೆಸರಿನಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡಿರುವ ಆರ್‌ಎಸ್ಎಸ್ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ್ದಾರೆ ಎಂದು ಕಾಂಗ್ರೆಸ್ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್ಎಸ್ ವಿರುದ್ದ ಹರಿಹಾಯುತ್ತಿರುವುದು ಇದೇ ಮೊದಲಲ್ಲ. ಆರ್‌ಎಸ್ಎಸ್ ನಿಷೇಧ ಮಾಡುವ ಕುರಿತು ಹಲವು ಬಾರಿ ಹೇಳಿಕೆ ನೀಡಿದ್ದಾರೆ. ಇದೀಗ ಆರ್‌ಎಸ್ಎಸ್ ಚುಟವಟಿಕೆಗಳನ್ನು ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಆರ್‌ಎಸ್ಎಸ್ ಬ್ಯಾನ್ ಆಗ್ಬೇಕ್

ಆರ್‌ಎಸ್ಎಸ್ ಸಂಘಟನೆ ಬ್ಯಾನ್ ಅಗ್ಬೇಕ್ ಎಂದು ಹಲವು ಬಾರಿ ಹೇಳಿರುವ ಪ್ರಿಯಾಂಕ ಖರ್ಗೆ, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಮುಖ್ಯಮಂತ್ರಿಗೆ ಪತ್ರ ಬರೆದು ಚಟುವಟಿಕೆ ನಿಷೇಧಕ್ಕೆ ಆಗ್ರಹಿಸಿದ್ದಾರೆ. ನನ್ನ ಕೈಯಲ್ಲಿ ಅಧಿಕಾರ ಇದ್ದರೆ ಆರ್‌ಎಸ್ಎಸ್ ಸಂಘಟನೆಯನ್ನು ಸಂಪೂರ್ಣ ಬ್ಯಾನ್ ಮಾಡುತ್ತಿದ್ದೆ‌, ಆದರೆ ಆಗಲ್ಲ ಅದಕ್ಕೆ ಪತ್ರ ಬರೆದಿದ್ದೇನೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಆರ್‌ಎಸ್ಎಸ್ ಸಂಘಟನೆಯನ್ನು ತಾಲೀಬಾನ್‌ಗೆ ಹೋಲಿಸಿದ ಖರ್ಗೆ

100 ವರ್ಷಗಳಿಂದ ಭಾರತದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರ, ವಿಪತ್ತು, ಪರಿಹಾರ ಸೇರಿದಂತೆ ಹಲವು ರೀತಿಯಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿರುವ ಆರ್‌ಎಸ್ಎಸ್ ಸಂಘಟನೆಯನ್ನು ತಾಲೀಬಾನ್‌ಗೆ ಹೋಲಿಸಿ ಮಾತನಾಡಿದ್ದಾರೆ. ಆರ್ ಎಸ್ ಎಸ್ ಗೂ ತಾಲಿಬಾನ್ ಗೂ ಏನೂ ವ್ಯತ್ಯಾಸ ಇಲ್ಲ. ಡಿಕೆ ಶಿವಕುಮಾರ್ ಸದನದಲ್ಲಿ ವ್ಯಂಗ್ಯ ಮಾಡಿದ್ದು ಅದನ್ನು ಭೆರೆ ರೀತಿಯಲ್ಲಿ ತಿರುಚಿ ಹಾಕಿದ್ದರು ಎಂದು ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.

ಆರ್‌ಎಸ್ಎಸ್ ತತ್ವ ಸಿದ್ಧಾಂತಗಳು ಬಡವರ ಮಕ್ಕಳಿಗೆ ಯಾಕೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಇತ್ತೀಚೆಗೆ ದೊಡ್ಡ ನಾಯಕರು ಗಣ ವೇಷ ಹಾಕುತ್ತಿದ್ದಾರೆ. ಮೊದಲೆಲ್ಲಾ ಹಾಕುತ್ತಿರಲಿಲ್ಲ ಅವರ ಮಕ್ಕಳು ಎಲ್ಲಿದ್ದಾರೆ ಅವರು ಯಾಕೆ ಗಣವೇಶ ಹಾಕಲ್ಲ.

ಈ ಸಿದ್ದಾಂತ ಬರಿ ಬಡವರಿಗೆ ಹಿಂದುಳಿದವರಿಗೆ ಮಾತ್ರ ಹೆಚ್ಚು ಮಕ್ಕಳು ಹುಟ್ಟಿಸಬೇಕು ಎಂದವರು ಇವರು ಯಾಕೆ ಹ್ಮಚಾರಿಗಳಾಗಿದ್ದಾರೆ. ಅವರ ಮಕ್ಕಳಿಗೆ ಯಾಕೆ ತ್ರಿಶೂಲ್ ದೀಕ್ಷೆ ಇಲ್ಲ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ವೀರ ಸಾವರ್ಕರ್ ಗೆ ವೀರ ಬಿರಿದ್ದು ಕೊಟ್ಟವರು ಯಾರು..?

ಸರ್ಕಾರಿ ಶಾಲೆಗಳಲ್ಲಿ, ಮೈದಾನಗಳಲ್ಲಿ ಸಂಘದ ಬೈಠಕ್ ಆಗಬಾರದು. ನಮ್ಮದು ಬಸವ ತತ್ವದ ಮೇಲೆ ನಡೆಯುವ ಸರ್ಕಾರ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಸಾಂವಿಧಾನ ಬೇಡ ಮನುಸ್ಮೃತಿ ಬೇಕು ಅಂದವರು ಯಾರು...? ವೀರ ಸಾವರ್ಕರ್ ಗೆ ವೀರ ಬಿರಿದ್ದು ಕೊಟ್ಟವರು ಯಾರು..? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಮೋಹನ್ ಭಾಗವತ್ ಯಾರು...?

ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಯಾರು? ಅವರಿಗೆ ಯಾಕೆ ಅಷ್ಟು ಸೆಕ್ಯೂರಿಟಿ , 70-80% ಹಿಂದೂ ರಾಷ್ಟ್ರದಲ್ಲಿ ಯಾಕೆ ಅಷ್ಟು ಸಕ್ಯೂರಿಟಿ..? ಅಷ್ಟು ಅಭದ್ರತೆ ಇದೆಯಾ...? ಕೇಂದ್ರ ಗೃಹ ಸಚಿವರ ಬಗ್ಗೆ ನಂಬಿಕೆ ಇಲ್ವಾ..? ಆಫ್ ಚಡ್ಡಿಯನ್ನ ಫುಲ್ ಚಡ್ಡಿ ಮಾಡಿದ್ದು ಸಾಧನೆ ಅಂತ ಪಿಎಂ ಹೇಳ್ತಾರೆ. ಪಥ ಸಂಚಲನ ಒಂದು ಸಾಧನೆ ಅಂತೆ ಎಂದು ಪ್ರಿಯಾಂಕ ಖರ್ಗೆ ಬುಸುಗುಟ್ಟಿದ್ದಾರೆ.

ಎಲ್ಲೇ ವೈಪರೀತ್ಯ ಆದರೂ ಹೋಗ್ತಾರಂತೆ ಎಲ್ಲಿಗೆ ಹೋಗಿದ್ದಾರೆ..? ಒಂದು ಫೋಟೋ ಇಲ್ಲ ಏನಿಲ್ಲಾ ಎಂದು ಆರ್‌ಎಸ್ಎಸ್ ಸಂಘಟನೆ ವಿರುದ್ಧ ಪ್ರಿಯಾಂಕ ಖರ್ಗೆ ಹರಿಹಾಯ್ದಿದ್ದಾರೆ. ಪ್ರಿಯಾಂಕ ಖರ್ಗೆ ಮಾತಿಗೆ ಭಾರಿ ವಿರೋಧಗಳು ವ್ಯಕ್ತವಾಗುತ್ತಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!