
ಕೊಡಗು (ಅ.12): 'ಏಯ್ ಕರಿ ಟೋಪಿ ಬಾ ಇಲ್ಲಿ' ಎಂದ ಡಿಸಿಎಂ ಡಿಕೆ ಶಿವಕುಮಾರ ಅವರ ಹೇಳಿಕೆಯನ್ನು ನಾನು ವೈಯಕ್ತಿಕವಾಗಿ ಶ್ಲಾಘಿಸುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ತಿಳಿಸಿದರು.
ಶಾಸಕ ಮುನಿರತ್ನ ಅವರನ್ನುದ್ದೇಶಿಸಿ 'ಏಯ್ ಕರಿ ಟೋಪಿ ಬಾ ಇಲ್ಲಿ' ಎಂದು ಕರೆದಿರುವ ಡಿಸಿಎಂ ಡಿಕೆ ಶಿವಕುಮಾರ ಹೇಳಿಕೆ ವಿಚಾರವಾಗಿ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಎಂ ಲಕ್ಷ್ಮಣ್, ಈ ಅರೆಸ್ಸೆಸ್ ಮಹಾತ್ಮ ಗಾಂಧಿಯವರನ್ನ ಕೊಂದ ಸಂಘ, ಇಡೀ ದೇಶದಲ್ಲಿ ಕೋಮುಗಲಭೆ ಹರಡಿಸುತ್ತಿರುವ ಸಂಘ ಅದು ತೀವ್ರವಾಗಿ ಟೀಕಿಸಿದರು.
ನಮ್ಮ ಸರ್ಕಾರ ಬಂದ್ರೆ ಆರೆಸ್ಸೆಸ್ ಬ್ಯಾನ್ ಮಾಡೇ ಮಾಡ್ತೀವಿ:
ಆ ಸಂಸ್ಥೆಯನ್ನ ಬ್ಯಾನ್ ಮಾಡುವ ಕೆಲಸ ಆಗಬೇಕಾಗಿತ್ತು. ಈಗಿರುವ ಕೇಂದ್ರ ಸರ್ಕಾರ ಅರೆಸ್ಸೆಸ್‌ನದೇ ಇನ್ನೊಂದು ಮುಖ. ಆದರೆ ಮುಂದೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದಾಗ ನೂರಕ್ಕೆ ನೂರರಷ್ಟು ಆರೆಸ್ಸೆಸ್ ಸಂಘವನ್ನು ಬ್ಯಾನ್ ಮಾಡೇ ಮಾಡುತ್ತೇವೆ ಎಂದು ಘೋಷಿಸಿದರು.
ದೇಶದಲ್ಲಿ ವೋಟ್ ಚೋರಿ ಮೂಲಕ ಚುನಾವಣೆ ಗೆಲ್ಲುವಂತಹ ಕೆಲಸ ಮಾಡುತ್ತಿರುವುದೇ ಆರ್ ಎಸ್ ಎಸ್. ಹೀಗಾಗಿ ಆರೆಸ್ಸೆಸ್ ಕರಿಟೋಪಿ, ಕಳ್ಳ ಅಂತಾ ಕರೆದರೂ ನಾನು ಒಪ್ಪಿಕೊಳ್ಳುತ್ತೇನೆ. ಇಡೀ ದೇಶವನ್ನು ಹಾಳುಮಾಡುತ್ತಿರುವುದೇ ಆರೆಸ್ಸೆಸ್. ಡಿಕೆ ಶಿವಕುಮಾರ ಅವರು ಹಾಗೆ ಕರೆದಿದ್ದರೆ, ನಾನು ವೈಯಕ್ತಿಕವಾಗಿ ಶ್ಲಾಘಿಸುತ್ತೇನೆ ಎಂದರು.
ಶಾಸಕ ಮುನಿರತ್ನ ವಿರುದ್ಧ ಎಂ ಲಕ್ಷ್ಮಣ್ ಕಿಡಿ:
ಮುನಿರತ್ನ ವ್ಯಾಪಾರಕ್ಕೋಸ್ಕರ ಬಿಜೆಪಿಗೆ ಸೇರಿಕೊಂಡರು. ಅಲ್ಲಿಗೆ ಹೋಗಿ ಚಡ್ಡಿ ಹಾಕಿಕೊಂಡು ಕರಿಟೊಪ್ಪಿ ಹಾಕಿಕೊಂಡು ಸುತ್ತುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯ ಹಲವು ಮುಖಂಡರಿಗೆ ಏಡ್ಸ್ ಇಂಜೆಕ್ಷನ್ ಕೊಡುವ ಕೆಲಸ ಮಾಡುತ್ತಿದ್ದಾರೆ. ಅವರ ನಾಯಕರು, ಹೆಣ್ಣುಮಕ್ಕಳೇ ಬಂದು ದೂರು ಕೊಟ್ಟಿದ್ದಾರೆ. ಅದರ ವಿರುದ್ಧ ಈಗಲೂ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಮುನಿರತ್ನನ ವಿಚಾರವನ್ನು ನಾವು ಮಾತನಾಡಬೇಕಾಗಿಲ್ಲ ಎಂದು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ