ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಹಗರಣ: ಎಸ್‌ಐಟಿಗೆ ಡಿಕೆಶಿ ಹೆಸರು ಹೇಳದಂತೆ ಒತ್ತಡ, ವಕೀಲನ ಆಡಿಯೋ ಬಾಂಬ್..!

By Kannadaprabha NewsFirst Published May 11, 2024, 9:37 AM IST
Highlights

ತಮ್ಮ ಜತೆ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮಾತನಾಡಿದ್ದಾರೆ ಎನ್ನಲಾದ 1.08 ನಿಮಿಷದ ಆಡಿಯೋವೊಂದನ್ನು ಅಜ್ಞಾತ ಸ್ಥಳದಿಂದ ಶುಕ್ರವಾರ ದೇವರಾಜೇಗೌಡ ಬಿಡುಗಡೆಗೊಳಿಸಿದ ದೇವರಾಜೇಗೌಡ

ಬೆಂಗಳೂರು(ಮೇ.11):  ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಹಗರಣ ಸಂಬಂಧ ವಿಶೇಷ ತನಿಖಾ ದಳದ ಮುಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳದಂತೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಅವರಿಗೆ ಕಾಂಗ್ರೆಸ್ ಮುಖಂಡರೊಬ್ಬರು ತಾಕೀತು ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ತಮ್ಮ ಜತೆ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮಾತನಾಡಿದ್ದಾರೆ ಎನ್ನಲಾದ 1.08 ನಿಮಿಷದ ಆಡಿಯೋವೊಂದನ್ನು ಅಜ್ಞಾತ ಸ್ಥಳದಿಂದ ಶುಕ್ರವಾರ ದೇವರಾಜೇಗೌಡ ಬಿಡುಗಡೆಗೊಳಿಸಿದ್ದಾರೆ.

Latest Videos

ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ನಿರಂತರ ಅತ್ಯಾಚಾರ ಕೇಸ್‌

ಆದರೆ ಇದರಲ್ಲಿರುವ ಧ್ವನಿ ನಿಜಕ್ಕೂ ಯಾರದು ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಆಡಿಯೋದಲ್ಲೇನಿದೆ?: 'ನಾನು ಡಿಕೆ ಅವರಿಗೆ ಕರೆ ಮಾಡಿದ್ದೆ. ನಾನು ಪೋನ್ ಮಾಡಿದ್ದೆ, ಭೇಟಿಯಾಗಿದ್ದೆ ಅಂತ ಎಲ್ಲೋ ದೇವರಾಜೇಗೌಡ ಹೇಳಿದ್ದಾನೆ ಅಂದ್ರು. ನಿನಗೆ ಪ್ರಕರಣದ ವಿಚಾರಣೆಗೆ ಎಸ್‌ಐಟಿ ನೋಟಿಸ್ ನೀಡುತ್ತದೆ. ಆಗ ನೀನು (ದೇವರಾಜೇಗೌಡ) ಎಸ್ ಐಟಿ ಮುಂದೆ ಡಿಕೆ ಹೆಸರು ಪ್ರಸ್ತಾಪಿಸಬಾರದು. ನಾನು ಹಲವು ವರ್ಷಗಳಿಂದ ಅವರ ಕುಟುಂಬದ (ಮಾಜಿ ಸಚಿವ ಎಚ್.ಡಿ.ರೇವಣ್ಣ) ವಿರುದ್ಧ ಹೋರಾಟ ಮಾಡಿ ಕೊಂಡು ಬಂದಿದ್ದೇನೆ ಎಂದು ಹೇಳಿಕೆ ಕೊಡುವಂತೆ ಸೂಚಿಸಿದ್ದಾರೆ' ಎಂದು ಶಿವರಾಮೇಗೌಡ ಸೂಚನೆ ನೀಡಿದ್ದಾರೆ ಎನ್ನಲಾದ ಧ್ವನಿ ಆಡಿಯೋದಲ್ಲಿದೆ.

click me!