
ಬೆಂಗಳೂರು (ಜೂ.30): ತಜ್ಞರ ಪ್ರಕಾರ ರಾಜ್ಯದಲ್ಲಿ ಅಕ್ಟೋಬರ್ ವೇಳೆಗೆ 3ನೇ ಅಲೆ ಬರಬಹುದು. ಹೀಗಾಗಿ 12 ವರ್ಷ ಮೇಲ್ಪಟ್ಟಮಕ್ಕಳಿಗೆ ಸೇರಿ ಮುಂದಿನ 3 ತಿಂಗಳಲ್ಲಿ ಎಲ್ಲರಿಗೂ ಲಸಿಕೆ ನೀಡಬೇಕು. ಅಗತ್ಯವಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರನೇ ಅಲೆ ಈಗಾಗಲೇ ಬಂದಿದೆ ಎಂಬ ಬಗ್ಗೆ ಖಚಿತತೆ ದೊರೆತಿಲ್ಲ. ತಜ್ಞರ ಪ್ರಕಾರ ಅಕ್ಟೋಬರ್ ವೇಳೆಗೆ ಬರಬಹುದು. ಪ್ರಸ್ತುತ ಮಕ್ಕಳಿಗೆ ಲಸಿಕೆ ಹಾಕಿಲ್ಲವಾದ್ದರಿಂದ 3ನೇ ಅಲೆ ಮಕ್ಕಳನ್ನು ಬಾಧಿಸಬಹುದು ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಸರ್ಕಾರ ಕೂಡಲೇ ಅಗತ್ಯ ಸಿದ್ಧತೆ ಆರಂಭಿಸಬೇಕು ಎಂದು ಹೇಳಿದರು. ರಾಜ್ಯ ಸರ್ಕಾರಕ್ಕೆ ಮೂರು ತಿಂಗಳ ಸಮಯಾವಕಾಶ ಸಿಕ್ಕಿದೆ. ಎರಡನೇ ಅಲೆಯಲ್ಲಿ ಮಾಡಿದ್ದ ನಿರ್ಲಕ್ಷ್ಯವನ್ನು ಪುನರಾವರ್ತನೆ ಮಾಡಬಾರದು ಎಂದರು.
ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಕೂಗು, ಟಕ್ಕರ್ ಕೊಡಲು ಸಿದ್ದರಾಮಯ್ಯ ಅಹಿಂದ ಪ್ಲ್ಯಾನ್ ..
ಲಸಿಕೆ ಕೊರತೆಯನ್ನು ನೀಗಿಸಿ ಶೀಘ್ರವಾಗಿ ಲಸಿಕೆ ಹಾಕುವತ್ತ ಸರ್ಕಾರ ಗಮನ ಹರಿಸಬೇಕು. 12 ವರ್ಷದ ಮೇಲ್ಪಟ್ಟವರು, ಗರ್ಭಿಣಿಯರಿಗೂ ಲಸಿಕೆ ಹಾಕಬಹುದು. ಹೀಗಾಗಿ ಇವರೆಲ್ಲರಿಗೂ ಲಸಿಕೆ ನೀಡಿ ಎಂದು ಒತ್ತಾಯಿಸಿದರು.
ಇನ್ನು ಚಿಕಿತ್ಸೆಯಲ್ಲಿ ಕೊರತೆ ಆಗದಂತೆ ಬೆಡ್, ಆಕ್ಸಿಜನ್, ವೆಂಟಿಲೇಟರ್ ಎಲ್ಲವನ್ನೂ ಸಿದ್ಧಪಡಿಸಿಕೊಳ್ಳಬೇಕು. ಅಗತ್ಯ ಔಷಧದ ಸಂಗ್ರಹ ಹೊಂದಿರಬೇಕು ಸಲಹೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ