
ಬೆಂಗಳೂರು (ಮೇ.07): ಕೇಂದ್ರ ಗೃಹ ಸಚಿವಾಲಯದ ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯ ದಲ್ಲಿ 4 ಕಡೆ ತುರ್ತು ಸಂದರ್ಭದಲ್ಲಿ ನಾಗರಿಕರ ಸುರಕ್ಷತಾ ಕವಾಯತಿನ ಅಣುಕು ಪ್ರದರ್ಶನಕ್ಕೆ (ಮಾಕ್ ಡ್ರಿಲ್) ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ ಸಿದ್ಧತೆ ನಡೆಸಿದೆ. ಮೊದಲ ಹಂತದಲ್ಲಿ ಬುಧವಾರ ಬೆಂಗಳೂರಿನ 2 ಕಡೆ 'ಆಪರೇಷನ್ ಅಭ್ಯಾಸ್' (ಮಾಕ್ ಡ್ರಿಲ್) ಅಣುಕು ಪ್ರದರ್ಶನ ನಡೆಯಲಿದ್ದು, 2ನೇ ಹಂತದಲ್ಲಿ ಮೈಸೂರು, ಮಂಡ್ಯ, ರಾಯಚೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆಯಲಿದೆ.
ಪಹಾಂ ದಾಳಿ ನಂತರ ಪಾಕಿಸ್ತಾನದ ಜತೆಗೆ ಸಮರೊತ್ಸಾಹ ಹೆಚ್ಚಾಗಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ನಾಗರಿಕರ ರಕ್ಷಣಾ ತಾಲೀಮು ನಡೆಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿತ್ತು. ಅಂತೆಯೇ ರಾಜ್ಯದಲ್ಲಿ ಸಿದ್ಧತೆ ನಡೆದಿದೆ. ಬೆಂಗಳೂರಿನ ಹಲಸೂರು ಕೆರೆ ಸಮೀಪದ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಕೇಂದ್ರ ಕಚೇರಿಯ ಮೈದಾನ ಹಾಗೂ ಡೈರಿ ವೃತ್ತದ ಅಗ್ನಿಶಾಮಕ ದಳದ ತರಬೇತಿ ಕೇಂದ್ರದ ಮೈದಾನದಲ್ಲಿ ಅಣುಕು ಪ್ರದರ್ಶನ ನಡೆಯಲಿದೆ. ಈ ಅಣುಕು ಪ್ರದರ್ಶನ ಕುರಿತು ಅಗ್ನಿಶಾಮಕದ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ನೇತೃತ್ವದಲ್ಲಿ ಮಂಗಳವಾರ ಪೂರ್ವ ಸಿದ್ಧತಾ ಸಭೆ ನಡೆಯಿತು.
ದೇಶದ ವ್ಯಾಪ್ತಿಯ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಉತ್ತರ ಕನ್ನಡಜಿಲ್ಲೆಯ ಮಲ್ಲಪುರ, ರಾಯಚೂರು ಜಿಲ್ಲೆಯ ಶಕ್ತಿನಗರ ಹಾಗೂ ಬೆಂಗಳೂರು ಅಣುಕು ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಆಪರೇಷನ್ ಅಭ್ಯಾಸ ಹೆಸರಿನಲ್ಲಿ ಈ ಮಾಕ್ ಡ್ರಿಲ್ ನಡೆಯಲಿದೆ.ಮೊದಲ ಅಭ್ಯಾಸ ಬೆಂಗಳೂರಿನ ಹಲಸೂರು ಕೆರೆ ಸಮೀಪದ ರಾಜ್ಯ ಅಗ್ನಿಶಾಮಕ ದಳದ ಕೇಂದ್ರ ಕಚೇರಿಯ ಮೈದಾನದಲ್ಲಿ ಬುಧವಾರ ಮಧ್ಯಾಹ್ನ 3ಕ್ಕೆ ನಡೆಯಲಿದೆ. ಮುಂದಿನ ಹಂತದಲ್ಲಿ ಆಯಾ ಜಿಲ್ಲಾಡಳಿತಗಳ ಸಹಕಾರದಲ್ಲಿ ಮೈಸೂರು, ರಾಯ ಚೂರು, ಉತ್ತರ ಕನ್ನಡ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತದೆ ಎಂದು ಡಿಜಿಪಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಫೇಲ್ ಆದವರಿಂದ ಪತ್ರ ವಿಶ್ಲೇಷಣೆ ಅಸಾಧ್ಯ: ಛಲವಾದಿ ನಾರಾಯಣಸ್ವಾಮಿ
ಸೈರನ್‌ಗಳ ಪರಿಶೀಲನೆ: ಪ್ರಾಕೃತಿಕ ವಿಕೋಪ ಹಾಗೂ ಅಪರಾಧ ಘಟನೆಗಳು ಸೇರಿ ತುರ್ತು ಸಂದರ್ಧದಲ್ಲಿ ಜನರಿಗೆ ಎಚ್ಚರಿಕೆ ನೀಡಲು ಪೊಲೀಸ್ ಹಾಗೂ ಅಗ್ನಿಶಾಮಕ ಠಾಣೆಗಳಲ್ಲಿ ಅಳವಡಿಸಿರುವ ಸೈರನ್‌ಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಅಲ್ಲದೆ, ರಕ್ಷಣಾ ಸಂಶೋಧನಾ ಕಚೇರಿ (ಡಿಆರ್‌ಡಿಓ) ಸೇರಿ ಪ್ರಮುಖ ಕಚೇರಿಗಳ ಕಟ್ಟಡಗಳಲ್ಲಿರುವ ಸೈರನ್‌ಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ