Bagalkote: ಹಳ್ಳಿ ಹುಡುಗನ ಮದುವೆಗೆ ಬಂತು ದೇಶದ ರಾಷ್ಟ್ರಪತಿ & ಪ್ರಧಾನಿ ಶುಭಾಶಯ ಪತ್ರ!

Published : May 07, 2025, 06:13 AM IST
Bagalkote: ಹಳ್ಳಿ ಹುಡುಗನ ಮದುವೆಗೆ ಬಂತು ದೇಶದ ರಾಷ್ಟ್ರಪತಿ & ಪ್ರಧಾನಿ ಶುಭಾಶಯ ಪತ್ರ!

ಸಾರಾಂಶ

ಸಾಮಾನ್ಯವಾಗಿ ಯುವಕರು  ಮದುವೆಯಾಗೋವಾಗ ತಮ್ಮ ಆತ್ಮೀಯ ಬಂಧು ಬಳಗಕ್ಕೆ, ಸ್ಮೇಹಿತರ ಬಳಗಕ್ಕೆ ಆಮಂತ್ರಿಸೋದು ಕಾಮನ್ ಆದ್ರೆ ಇಲ್ಲೊಬ್ಬ ಗ್ರಾಮದ ಯುವಕ ದೇಶದ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ಮದುವೆ ಆಮಂತ್ರಣ ಕಳಿಸಿ ಅವರಿಂದ ಶುಭಾಶಯ ಪತ್ರ ಪಡೆಯುವ ಮೂಲಕ ಗಮನ ಸೆಳೆದಿರೋ ಘಟನೆ ನಡೆದಿದೆ. 

ವರದಿ: ಮಲ್ಲಿಕಾರ್ಜುನ ಹೊಸಮನಿ‌, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.

ಬಾಗಲಕೋಟೆ (ಮೇ.07): ಸಾಮಾನ್ಯವಾಗಿ ಯುವಕರು  ಮದುವೆಯಾಗೋವಾಗ ತಮ್ಮ ಆತ್ಮೀಯ ಬಂಧು ಬಳಗಕ್ಕೆ, ಸ್ಮೇಹಿತರ ಬಳಗಕ್ಕೆ ಆಮಂತ್ರಿಸೋದು ಕಾಮನ್ ಆದ್ರೆ ಇಲ್ಲೊಬ್ಬ ಗ್ರಾಮದ ಯುವಕ ದೇಶದ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ಮದುವೆ ಆಮಂತ್ರಣ ಕಳಿಸಿ ಅವರಿಂದ ಶುಭಾಶಯ ಪತ್ರ ಪಡೆಯುವ ಮೂಲಕ ಗಮನ ಸೆಳೆದಿರೋ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ನವ ದಂಪತಿಗಳಿಗೆ ಶುಭಾಶಯ ಪತ್ರ ಬರೆಯುವ ಮೂಲಕ ಅವರ ಬದುಕಿನ ಮದುವೆಯ ಸಂಭ್ರಮವನ್ನ ನೂರ್ಮಡಿಗೊಳಿಸಿದ್ದಾರೆ.

ಹೌದು, ಇಂತಹವೊಂದು ಅಪರೂಪದ ಶುಭಾಶಯಕ್ಕೆ ಪಾತ್ರವಾಗಿರೋದು ಬಾಗಲಕೋಟೆ ಜಿಲ್ಲೆಯ ಸೂಳಿಭಾವಿ ಗ್ರಾಮದ ಕಡೂರ ಕುಟುಂಬದ ಪ್ರಕಾಶ್ ಮತ್ತು ಕವಿತಾ ದಂಪತಿಗಳು, ಅಂದಹಾಗೆ ಪ್ರಕಾಶ್ ಖಾಸಗಿ ಬ್ಯಾಂಕ ವೊಂದರಲ್ಲಿ ಮ್ಯಾನೇಜರ್ ಕಾರ್ಯ ನಿರ್ವಹಿಸುತ್ತಿದ್ದ,  ಇವುಗಳ ಮಧ್ಯೆ ಮನೆಯಲ್ಲಿ ಕೆರೂರ ಪಟ್ಟಣದ ಕೌಶಿದ್ದನವರ ಕುಟುಂಬದ ಪುತ್ರಿ ಕವಿತಾಳ ಜೊತೆ 2025 ಏಪ್ರಿಲ್ 20 ರಂದು ಪ್ರಕಾಶ್ ಮದುವೆ ನಿಶ್ಚಯವಾಗಿತ್ತು. ಆದ್ರೆ ಮದುವೆ ಆಮಂತ್ರಣಗಳನ್ನ ಕೇವಲ ಸಂಭಂದಿಗಳಿಗೆ ಮಾತ್ರವಲ್ಲದೆ ದೇಶದ ಪ್ರಮುಖರಿಗೂ ಕಳಿಸಿದ್ದು ಒಂದೆಡೆಯಾದ್ರೆ, ಮತ್ತೊಂದೆಡೆ ಅವರಿಂದ ಶುಭಾಶಯ ಪತ್ರ ಪಡೆದಿದ್ದು ಆತನ ವಿಶೇಷವಾಗಿತ್ತು.

ಪಹಲ್ಗಾಂ ದಾಳಿ ಪ್ರಧಾನಿ ಮೋದಿಗೆ ಮೊದಲೇ ಗೊತ್ತಿತ್ತು: ಮಲ್ಲಿಕಾರ್ಜುನ ಖರ್ಗೆ

ದೇಶದ ರಾಷ್ಟ್ರಪತಿ & ಪ್ರಧಾನಿಗಳಿಗೂ ಮದುವೆ ಆಮಂತ್ರಣ: ಬದುಕಿನಲ್ಲಿ ಸದಾ ಒಂದಿಲ್ಲೊಂದು ಹೊಸತನ ಬಯಸುವ ಪ್ರಕಾಶ್ ತನ್ನ ಮದುವೆಯ ಆಮಂತ್ರಣವನ್ನ ಕೇವಲ ತಮ್ಮೂರು ಬಂಧು ಬಳಗ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿರೋ ಸ್ನೇಹಿತರಿಗಷ್ಟೇ ಅಲ್ಲದೆ ದೇಶದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಡಾ.ವೀರೇಂದ್ರ ಹೆಗ್ಗಡೆ, ಸುಧಾಮೂರ್ತಿ ಸೇರಿದಂತೆ ಅನೇಕ ಗಣ್ಯರಿಗೆ ಆಮಂತ್ರಣವನ್ನ ಕಳಿಸಿದ್ದಾನೆ. 

ಪತ್ರ & ಈ ಮೇಲ್ ಮೂಲಕ ಶುಭ ಕೋರಿದ ಪ್ರಧಾನಿ & ರಾಷ್ಟ್ರಪತಿಗಳು: 2025 ಏಪ್ರಿಲ್ 20ರಂದು ನಡೆದಿರೋ ಪ್ರಕಾಶ್ ಮತ್ತು ಕವಿತಾ ಮದುವೆಗೆ ಈ ಮೇಲ್ ಮೂಲಕ ಶುಭ ಕೋರಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ನಿಮ್ಮ ಮದುವೆ ಆಮಂತ್ರಣ ಬಂದು ತಲುಪಿದೆ, ದಂಪತಿಗಳಿಗೆ ಶುಭವಾಗಲಿ ಎಂದು ಹಾರೈಸಿದ್ದರೆ, ಇತ್ತ ಪತ್ರ ಬರೆದು ಶುಭಾಶಯ ಹೇಳಿರೋ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು, ದಂಪತಿಗಳಿಗೆ  ಶುಭಾಶಯಗಳು, ನೂರುಕಾಲ ಚೆನ್ನಾಗಿ ಬಾಳಿ ಬದುಕಿ, ಶುಭವಾಗಲಿ ಎಂದು ಆಶಿಸಿದ್ದಾರೆ.

ಡಿಸೆಂಬರ್‌ಗೆ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿವ ನೀರು: ಡಿಸಿಎಂ ಡಿಕೆಶಿ

ರಾಷ್ಟ್ರಪತಿ & ಪ್ರಧಾನಿಗಳ ಶುಭಾಶಯದಿಂದ ಸಂತಸಗೊಂಡಿರೋ ಪ್ರಕಾಶ್ ಕಡೂರ್ ಕುಟುಂಬ: ಇನ್ನು ಖಾಸಗಿ ಬ್ಯಾಂಕ್ ನ ಉದ್ಯೋಗಿಯಾಗಿರೋ ಪ್ರಕಾಶ್ ಕಡೂರ ಮತ್ತು ಆತನ ಕುಟುಂಬ ದೇಶದ ಪ್ರಧಾನಿ ಮತ್ತು ರಾಷ್ಟ್ರಪತಿಗಳ ಶುಭಾಶಯ ಪತ್ರ ನೋಡಿ ಫುಲ್ ಖುಷ್ ಆಗಿದ್ದಾರೆ. ಇನ್ನು ಈ ಹಿಂದೆ ಐಹೊಳೆ ಸ್ಥಳಾಂತರ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಗಮನ ಸೆಳೆದಿದ್ದ ಪ್ರಕಾಶ್ ಸಧ್ಯ ತಮ್ಮ ಮದುವೆ ಆಮಂತ್ರಣ ಪತ್ರ ಕಳಿಸಿ ದೇಶದ ಪ್ರಧಾನಿಗಳ ಶುಭಾಶಯಗಳನ್ನ ಪಡೆದು ಸಂತಸಗೊಂಡಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಆರ್‌ಒ ಪ್ಲ್ಯಾಂಟ್‌ಗಳ ನಿರ್ವಹಣೆಯೇ ಸರ್ಕಾರಕ್ಕೆ ಸವಾಲು: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?