ಕರ್ನಾಟಕದಲ್ಲಿ ಹೊಸದಾಗಿ ಸೈಬರ್‌ ಪಾಲಿಸಿ ಜಾರಿಗೆ ಸಿದ್ಧತೆ: ಸಿಎಂ ಬೊಮ್ಮಾಯಿ

By Govindaraj S  |  First Published Sep 7, 2022, 8:22 AM IST

ರಾಜ್ಯದ ಬ್ಯಾಂಕಿಂಗ್‌ ವ್ಯವಸ್ಥೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಸೈಬರ್‌ ಸೆಕ್ಯೂರಿಟಿ ಹೊಂದುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರವೇ ಹೊಸದಾಗಿ ಸೈಬರ್‌ ಪಾಲಿಸಿಯೊಂದನ್ನು ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 


ಮೈಸೂರು (ಸೆ.07): ರಾಜ್ಯದ ಬ್ಯಾಂಕಿಂಗ್‌ ವ್ಯವಸ್ಥೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಸೈಬರ್‌ ಸೆಕ್ಯೂರಿಟಿ ಹೊಂದುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರವೇ ಹೊಸದಾಗಿ ಸೈಬರ್‌ ಪಾಲಿಸಿಯೊಂದನ್ನು ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಜಾಗತಿಕ ಸ್ಪರ್ಧಾತ್ಮಕತೆ ಮತ್ತು ಜಾಗತಿಕ ಮಟ್ಟದಲ್ಲಿ ಹಾಗೂ ರಾಜ್ಯದಲ್ಲಿ ಸೈಬರ್‌ ಭದ್ರತಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ಮೈಸೂರಿನ ಇಲವಾಲದ ಮೈರಾ ಸ್ಕೂಲ್‌ ಆಫ್‌ ಬಿಸಿನೆಸ್‌ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸೈಬರ್‌ವರ್ಸ್‌ ಲ್ಯಾಬ್‌ ಉದ್ಘಾಟನೆ ಹಾಗೂ ಕಾಪ್‌ ಕನೆಕ್ಟ್ ಅಪ್ಲಿಕೇಶನ್‌ ಮತ್ತು ಸೈಬರ್‌ ಹೈಜೀನ್‌ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

ಧಾರವಾಡದಲ್ಲಿ ಎನ್‌ಡಿಎ ಮಾದರಿಯ ತರಬೇತಿ ಕೇಂದ್ರ: ಸಿಎಂ ಬೊಮ್ಮಾಯಿ

ಸರ್ಕಾರ ಸೈಬರ್‌ ಸೆಕ್ಯೂರಿಟಿಗೆ ಹೆಚ್ಚು ಒತ್ತು ನೀಡುತ್ತಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ನಿತ್ಯವೂ ಸಂಭವಿಸುತ್ತಿರುವ ಸೈಬರ್‌ ಅಪರಾಧವನ್ನು ಗಮನಿಸಿದರೆ ಇದರ ಅನಿವಾರ್ಯತೆ ತಿಳಿಯುತ್ತದೆ. ಮಾತ್ರವಲ್ಲದೇ ಪ್ರತಿಯೊಂದು ಇಲಾಖೆಯೂ ಮಾಹಿತಿ ಗೌಪ್ಯತೆ, ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಸೈಬರ್‌ ಸೆಕ್ಯೂರಿಟಿ ಹೊಂದಬೇಕಿದೆ. ಇದಕ್ಕಾಗಿ ಹೊಸದಾಗಿ ಸೈಬರ್‌ ಪಾಲಿಸಿಯೊಂದನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು. 

ಕರ್ನಾಟಕ ಸೆಮಿಕಂಡಕ್ಟರ್‌ ತಯಾರಿಕೆ, ಏರೋ ಸ್ಪೇಸ್‌, ಅಭಿವೃದ್ಧಿ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಕಾಯಿದೆಗಳನ್ನು ರೂಪಿಸುವಲ್ಲಿ ಮೊದಲ ಸ್ಥಾನದಲ್ಲಿದ್ದು, ಅತ್ಯಂತ ತುರ್ತಾಗಿ ಉತ್ತಮವಾದ ಸೈಬರ್‌ ಪಾಲಿಸಿಯನ್ನು ಹೊರ ತರುತ್ತೇವೆ. ಇದಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಆರಂಭಿಸಿರುವ ಸೈಬರ್‌ ಸೆಕ್ಯೂರಿಟಿ ಸೊಸೈಟಿ ಸಹಕಾರವನ್ನೂ ಪಡೆಯಲಾಗುವುದು ಎಂದು ಅವರು ಹೇಳಿದರು.

2025ರ ವೇಳೆಗೆ ಕರ್ನಾಟಕದ ಸೂಪರ್‌-30 ಕಾರ್ಯಕ್ರಮದ ಭಾಗವಾಗಿ ಪ್ರಮುಖ ತಾಂತ್ರಿಕ ಸಂಸ್ಥೆಗಳಲ್ಲಿ ಸೈಬರ್‌ ಲ್ಯಾಬ್‌ ಸ್ಥಾಪಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ 1 ಲಕ್ಷಕ್ಕೂ ಹೆಚ್ಚು ತರಬೇತಿ ಪಡೆದ ಉದ್ಯೋಗಿಗಳ ಸಂಪರ್ಕವನ್ನು ಒಳಗೊಂಡ ವೇದಿಕೆಯನ್ನು ಸೃಷ್ಟಿಸಲಾಗಿದೆ ಎಂದರು.

ಕರ್ನಾಟಕ ಪೊಲೀಸ್‌ ಸೈಬರ್‌ ಅಪರಾಧವನ್ನು ತಡೆಗಟ್ಟುವ ಅತ್ಯುತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಅಲ್ಲದೇ ನಮ್ಮ ಪೊಲೀಸ್‌ ವ್ಯವಸ್ಥೆ ಬ್ಯಾಂಕಿಂಗ್‌ ವ್ಯವಸ್ಥೆ ಹ್ಯಾಕಿಂಗ್‌ಗೆ ಒಳಗಾಗದಂತೆ ಎಚ್ಚರಿಕೆ ವಹಿಸುವ ಹಾಗೂ ಆ ರೀತಿಯ ಪ್ರಕರಣಗಳಾದಾಗ ಅದನ್ನು ಸಮರ್ಥವಾಗಿ ಎದುರಿಸುವ ಚಾಕಚಕತ್ಯತೆ ಹೊಂದಿದೆ. ಸೈಬರ್‌ ಸೆಕ್ಯೂರಿಟಿ ನೀಡುವುದು ಉತ್ತಮ ಕಾರ್ಯವಾಗಿದೆ ಎಂದು ಅವರು ಶ್ಲಾಘಿಸಿದರು.

ಕರ್ನಾಟಕದಲ್ಲಿ 6 ಹೊಸ ನಗರ ನಿರ್ಮಾಣಕ್ಕೆ ತೀರ್ಮಾನ: ಸಿಎಂ ಬೊಮ್ಮಾಯಿ

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌, ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ, ಸೈಬರ್‌ವರ್ಸ್‌ ಫೌಂಡೇಷನ್‌ ಸಲಹಾ ಮಂಡಳಿ ಅಧ್ಯಕ್ಷರಾದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಅಧ್ಯಕ್ಷೆ ತ್ರಿಷಿಕಾ ಕುಮಾರಿ ಒಡೆಯರ್‌ ಇದ್ದರು.

click me!