ಮದರಸಾಗಳು ಭಯೋತ್ಪಾದಕರನ್ನು ತಯಾರು ಮಾಡುವ ಕಾರ್ಖಾನೆಗಳು ಆಗಿವೆ. ಈ ದೇಶದಲ್ಲಿ ಮದರಸಾದಿಂದ ಬಂದವರೇ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ ಎಂದು ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆ (ಮಾ.10): ಮದರಸಾಗಳು ಭಯೋತ್ಪಾದಕರನ್ನು ತಯಾರು ಮಾಡುವ ಕಾರ್ಖಾನೆಗಳು ಆಗಿವೆ. ಈ ದೇಶದಲ್ಲಿ ಮದರಸಾದಿಂದ ಬಂದವರೇ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ ಎಂದು ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ವಿಚಾರ ಸಂಬಂಧ ಬಾಗಲಕೋಟೆಯ ಕಲಾದಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಪ್ಪಾಣಿ ಬಾರ್ಡರ್ ನಲ್ಲಿ ಸಾವಿರಾರು ಜನರಿಗೆ ಭಯೋತ್ಪಾದನೆ ತರಬೇತಿ ನೀಡ್ತಿರೋ ಮದರಸಾ ಇದೆ. ಹೀಗಾಗಿ ನಿಪ್ಪಾಣಿ ಶ್ರೀರಾಮ ಮಂದಿರ ಸ್ಫೋಟ ಮಾಡುತ್ತೇವೆ ಎಂದು ಬೆದರಿಕೆ ಪತ್ರಗಳು ಬಂದಿವೆ. ಬಾಂಬ್ ಬ್ಲಾಸ್ಟ್‌ನಿಂದ ಮಂದಿರದ ಒಂದು ಕಲ್ಲು ಕೂಡ ಅಲುಗಾಡಿಸೋಕೆ ಆಗೊಲ್ಲ. ನಿಮ್ಮ ನಾಟಕ ನಡೆಯೋದಿಲ್ಲ. ಈ ರೀತಿ ಬೆದರಿಸೋದು ಬಿಡಿ, ಎದುರು ಬಂದು ಧೈರ್ಯ ತೋರಿಸಿ ಎಂದು ಸವಾಲು ಹಾಕಿದರು.
ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕದ ನಂ.1 ಸಂಸದ ಅಂದ್ರೆ ಪ್ರತಾಪ ಸಿಂಹ ಪ್ರಮೋದ್ ಮುತಾಲಿಕ್
ಕೇಂದ್ರದಲ್ಲಿ ಸಶಕ್ತ ನಾಯಕತ್ವ ಇದೆ. ಮದರಸಾಗಳನ್ನು ಬ್ಯಾನ್ ಮಾಡಬೇಕು. ಮದರಸಾಗಳಲ್ಲಿ ಕುರಾನ್ ಅರೆದು ಕುಡಿಸ್ತಾರೆ. ಕುರಾನ್‌ನಲ್ಲಿ ಹಿಂದೂ ವಿರೋಧಿ ಇದೆ. ಹೀಗಾಗಿ ಮದರಸಾಗಳಿಂದ ಬರುವ ಹುಡುಗ ದೇಶದ್ರೋಹಿನೇ ಆಗ್ತಾನೆ ಎಂದರು.
ಇಡೀ ಕರ್ನಾಟಕದಲ್ಲಿ ಕಾಂಗ್ರೆಸ್, ಮುಂಚಿನ ಸರ್ಕಾರ ಇದ್ದಾಗಲೂ ಇವರೆಲ್ಲರೂ ಅಧಿಕಾರದಾಹಿಗಳು ಬರೀ ಬೂಟಾಟಿಕೆ ಮಾಡ್ತಾರೆ ಅಷ್ಟೇ, ಇವರಿಗೆ ಸಮಾಜ, ದೇಶ, ಧರ್ಮದ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಅಧಿಕಾರಕ್ಕಾಗಿ ಮುಸ್ಲಿಮರ ಓಲೈಕೆ ಮಾಡುವುದು ಕೆಲಸವಾಗಿದೆ ಈ ಮುಸ್ಲಿಂ ತುಷ್ಟೀಕರಣದಿಂದ ಭಯೋತ್ಪಾದನೆ ಹೆಚ್ಚಾಗ್ತಿದೆ. ಕಲಬುರಗಿ, ಬಳ್ಳಾರಿ ಜೊತೆಗೆ ಭಟ್ಕಳದ ಲಿಂಕ್ ಇದೆ. ಬಾಂಬ್ ಸ್ಫೋಟದ ಆರೋಪಿಗಳೂ ಭಟ್ಕಳದಲ್ಲಿಯೇ ಅಡಗಿರಬಹುದು ಎಂಬುದು ಸುದ್ದಿ ಹೊರಬಂದಿದೆ. ಏಕೆಂದರೆ ಭಟ್ಕಳ ನೇರವಾಗಿ ಪಾಕಿಸ್ತಾನ ಜೊತೆಗೆ ಲಿಂಕ್ ಇದೆ. ಇಷ್ಟೆಲ್ಲ ಗೊತ್ತಿದ್ರೂ ಸರ್ಕಾರ ಯಾಕೆ ಬಾಯಿ ಮುಚ್ಕೊಂಡು ಕೂತಿದೆ. ದೇಶದ ಸುರಕ್ಷತೆ ಬಗ್ಗೆ ನಿಮಗೆ ಕಾಳಜಿ ಇದಿಯಾ? ಬರೀ ಬೂಟಾಟಿಕೆ ಮಾತನಾಡ್ತಿರಾ ಬಳ್ಳಾರಿಯೂ ಕೂಡಾ ಸ್ಲಿಪರ್ ಸೆಲ್ ಆಗಿ ಬೆಳೆಯುತ್ತಿದೆ. ಹುಬ್ಬಳ್ಳಿ, ಕಲಬುರಗಿ ಸೇರಿ ಬೇರೆ ಬೇರೆ ಕಡೆ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ. ಇದರ ಜೊತೆಗೆ ನಮ್ಮ ಕಾನೂನು ಕೂಡಾ ದುರ್ಬಲವಾಗಿದೆ. ಕಾನೂನು ಬಿಗಿಯಾಗಿಲ್ಲ. ದೇಶದ್ರೋಹಿ ಹೇಳಿಕೆ ಕೊಟ್ಟವರು ಹೊರಗಡೆ ಇದ್ದಾರೆ ಎಂದು ಕಿಡಿಕಾರಿದರು.
ಪಾಕಿಸ್ತಾನ್ ಜಿಂದಾಬಾದ್ ಒಂದು ವೈರಸ್ ಇದ್ದಹಾಗೆ. ಇದಕ್ಕೆ ಯಾವ ಮುಲಾಮು ಹಚ್ಚೋಕೆ ಆಗೊಲ್ಲ. ಶೂಟ್ ಆ್ಯಂಡ್ ಸೈಟ್ ಮಾಡಬೇಕು ಅಷ್ಟೇ. ಗುಂಡಿಟ್ಟು ಹೊಡೆಯಿರಿ ಆವಾಗ ಯಾರೂ ಪಾಕಿಸ್ತಾನ ಜಿಂದಾಬಾದ್ ಅಂತಾರೆ ನೋಡೋಣ ಎಂದರು.