ಜನ್ಮ ಜನ್ಮಕ್ಕೂ ಮರೀದೆ ಇರೋ ತೀರ್ಪು ನಾವು ಕೋಡೋಣ : ಪ್ರಕಾಶ್ ರಾಜ್

Published : Nov 13, 2019, 12:47 PM ISTUpdated : Nov 13, 2019, 02:52 PM IST
ಜನ್ಮ ಜನ್ಮಕ್ಕೂ ಮರೀದೆ ಇರೋ ತೀರ್ಪು ನಾವು ಕೋಡೋಣ : ಪ್ರಕಾಶ್ ರಾಜ್

ಸಾರಾಂಶ

ಅನರ್ಹ ಶಾಸಕರ ಅರ್ಜಿ ತೀರ್ಪು ಕೊನೆಗೂ ಸುಪ್ರೀಂ ಕೋರ್ಟಿಂದ ಪ್ರಕಟವಾಗಿದೆ. ಅನರ್ಹತೆ ಎತ್ತಿ ಹಿಡಿದಿದ್ದು, ಚುನಾವಣೆ ಸ್ಪರ್ಧೆ ಅವಕಾಶ ನೀಡಿದೆ. ಈ ಬಗ್ಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ ಹೀಗಿದೆ. 

ಬೆಂಗಳೂರು [ನ.13]:  ರಾಜ್ಯ ವಿಧಾನಸಭೆಯಿಂದ ಅಂದಿನ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅನರ್ಹ ಮಾಡಿದ್ದ 17 ಶಾಸಕರ ತೀರ್ಪು ಪ್ರಕಟವಾಗಿದೆ. ಸ್ಪೀಕರ್ ಆದೇಶ ಎತ್ತಿಹಿಡಿದು ಅವರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. 

ಸುಪ್ರೀಂ ಕೋರ್ಟಲ್ಲಿ ಹಾವು ಸಯ್ಬಾರ್ದು ಕೋಲು ಮುರಿಬಾರ್ದು ಎನ್ನುವ ರೀತಿಯ ತೀರ್ಪು ಸುಪ್ರೀಂ ಕೋರ್ಟಿಂದ ಪ್ರಕಟವಾಗಿದೆ ಎಂದು ನಟ ಪ್ರಕಾಶ್ ರಾಜ್ ಸುಪ್ರೀಂ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 

ಹಾವೂ ಸಾಯ್ಬಾರ್ದು..ಕೋಲೂ ಮುರೀಬಾರ್ದು  ಎನ್ನುವ ತೀರ್ಪಿನ ಆಶೀರ್ವಾದ ಪಡಕೊಂಡು “ತ್ರಪ್ತ”ಶಾಸಕರು ..ಕೊಂಕಣ ಸುತ್ಕೊಂಡು ಮೈಲಾರಕ್ ಬಂದವೆ ..ಓಳ್ಳೇದೆ ಆಯ್ತು ..ಸ್ವಾಭಿಮಾನಿ ಕನ್ನಡಿಗರೆ .. ಇವುಗಳು ..ಜನ್ಮ ಜನ್ಮಕ್ಕೂ ಮರೀದೆ ಇರೋ ತೀರ್ಪು ಕೊಡೋದು ಈಗ ನಮ್ಮ ಜವಾಬ್ದಾರಿ  ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. 

 

17 ಶಾಸಕರ ಅನರ್ಹತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ : ಕೊಂಚ ರಿಲೀಫ್...

ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. 

ರಾಜ್ಯದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧರಾಗಿರುವ ಇವರಿಗೆ ಜನ್ಮ ಜನ್ಮಕ್ಕೂ ಮರೆಯದೇ ಇರುವ ರೀತಿಯಲ್ಲಿ ತೀರ್ಪು ಕೊಡುವುದು ನಮ್ಮ ಜವಾಬ್ದಾರಿ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. 

ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!