ಜೈಲು ಸೇರಿ ಎರಡೂವರೆ ವರ್ಷ, ಮನೆಯೂಟ ಸಿಗದೆ ಸಣ್ಣಗಾದ ಪ್ರಜ್ವಲ್‌ ರೇವಣ್ಣ, ಎಷ್ಟು ಕೆಜಿ ತೂಕ ಇಳಿದಿದೆ? ಪೊಲೀಸರ ಮುಂದೆ ಹೇಳಿದ್ದೇನು?

Kannadaprabha News   | Kannada Prabha
Published : Sep 18, 2026, 06:58 AM IST
Prajwal Revanna

ಸಾರಾಂಶ

ಅತ್ಯಾ೧ಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ದೇಹದ ತೂಕ 7 ಕೆ.ಜಿ.ಯಷ್ಟು ಇಳಿಕೆಯಾಗಿದೆ. ಜೈಲಿನ ವಾತಾವರಣ ಒಗ್ಗುತ್ತಿಲ್ಲ ಹಾಗೂ ಮೊಬೈಲ್ ಬಳಸಿಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಅವರು ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು (ಸೆ.18): ಜೈಲು ವಾಸದ ಪರಿಣಾಮ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅತ್ಯಾ೧ಚಾರ ಪ್ರಕರಣದ ಸಜಾ ಕೈದಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ದೇಹದ ತೂಕ ಸುಮಾರು ಏಳು ಕೆ.ಜಿ.ಯಷ್ಟು ಇಳಿಕೆಯಾಗಿದೆ.

ತಾವು ಜೈಲಿನಲ್ಲಿ ತೂಕ ಇಳಿಸಿಕೊಂಡಿರುವ ಸಂಗತಿ ಪೊಲೀಸರಿಗೆ ಖುದ್ದು ಪ್ರಜ್ವಲ್ ಅವರೇ ಹೇಳಿದ್ದಾರೆ. ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣದ ಸಂಬಂಧ ಅವರನ್ನು ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದರು. ಆ ವೇಳೆ ತಮ್ಮ ಜೈಲು ವಾಸದ ಸಂಕಷ್ಟದ ಬಗ್ಗೆ ಅಲವತ್ತುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನನಗೆ ಜೈಲು ವಾಸ ಅಸಹನೀಯವಾಗ್ತಿದೆ

ನನಗೆ ಜೈಲಿನ ವಾತಾವರಣ ಒಗ್ಗುತ್ತಿಲ್ಲ. ಇತ್ತೀಚೆಗೆ ಸಲ್ಲದ ಆರೋಪ ಮಾಡಿ ಬ್ಯಾರೆಕ್‌ ಬದಲಾವಣೆ ಮಾಡಿದ ಬಳಿಕ ನನಗೆ ಅಸಹನೀಯವಾಗಿದೆ. ಎರಡೂವರೆ ವರ್ಷಗಳಲ್ಲಿ ಏಳೆಂಟು ಕೆಜಿ ದೇಹ ತೂಕ ಸಹ ಇಳಿದಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಮೊಬೈಲ್ ಸಹ ಬಳಸಿಲ್ಲ ಎಂದು ಮಾಜಿ ಸಂಸದ ಪ್ರಜ್ವಲ್‌ ಹೇಳಿರುವುದಾಗಿ ಮೂಲಗಳು ಹೇಳಿವೆ.

ಪ್ರಜ್ವಲ್ ದೇಹದ ತೂಕದಲ್ಲಿ ಇಳಿಕೆ

ಅತ್ಯಾ೧ಚಾರ ಪ್ರಕರಣದಲ್ಲಿ ಬಂಧನವಾಗಿ ಜೈಲು ಸೇರಿದ ಅವರಿಗೆ ಬಳಿಕ ಆ ಕೃತ್ಯದಲ್ಲಿ ಶಿಕ್ಷೆ ಸಹ ಆಗಿದೆ. ಅತ್ಯಾ೧ಚಾರ ಪ್ರಕರಣಗಳಲ್ಲಿ ಜಾಮೀನು ಸಿಗದ ಪರಿಣಾಮ ಅವರು ಹೊರಗೆ ಬರಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಅವರಿಗೆ ಸಜೆಯಾದ ನಂತರ ಮನೆಯೂಟ ಪೂರೈಕೆ ಸಹ ಸ್ತಬ್ಧವಾಗಿದೆ. ಇದರ ಪರಿಣಾಮ ಪ್ರಜ್ವಲ್‌ರ ದೇಹದ ತೂಕದ ಕಡಿಮೆಯಾಗಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಮಂಡ್ಯದ ಮಣ್ಣಿನ ಮಗಳಿಂದ? ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿ, ಈ ಕನ್ನಡತಿ ಯಾರು ಗೊತ್ತಾ?
ತುಮಕೂರು-ದಾವಣಗೆರೆ ಹೊಸ ರೈಲ್ವೆ ಮಾರ್ಗ ಕಾಮಗಾರಿ: ನೈಋತ್ಯ ರೈಲ್ವೆಯಿಂದ ಹಲವು ರೈಲುಗಳ ಸಂಚಾರ ರದ್ದು!