ಮೇ 3 ಕ್ಕೆ ಎರಡನೇ ಹಂತದ ಲಾಕ್‌ಡೌನ್ ಅಂತ್ಯ; ಮುಂದೇನು?

By Kannadaprabha News  |  First Published May 1, 2020, 1:54 PM IST

ಮೇ 3ಕ್ಕೆ ಎರಡನೇ ಹಂತದ ಲಾಕ್‌ಡೌನ್‌ ಏನೋ ಮುಗಿಯುತ್ತಿದೆ. ಆದರೆ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಬಹುತೇಕ ಮೋದಿ ಸಾಹೇಬರಿಗೆ ಮಾತ್ರ ಗೊತ್ತು. 


ಮೇ 3 ಕ್ಕೆ ಎರಡನೇ ಹಂತದ ಲಾಕ್‌ಡೌನ್‌ ಏನೋ ಮುಗಿಯುತ್ತಿದೆ. ಆದರೆ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಬಹುತೇಕ ಮೋದಿ ಸಾಹೇಬರಿಗೆ ಮಾತ್ರ ಗೊತ್ತು. ಕೊರೋನಾ ದಿಂದ ಜೀವ ಉಳಿಸುವುದು ಮುಖ್ಯ ಎಂದು ವೈದ್ಯರು ಸರ್ಕಾರಕ್ಕೆ ಹೇಳುತ್ತಿದ್ದರೆ, ವೈರಸ್‌ ಬಂದರೆ ಬರಲಿ ಜೀವನ ನಿಲ್ಲಿಸಿ ಮನೆಯಲ್ಲಿ ಕೂತರೆ ಎಲ್ಲ ಮುಗಿದೇ ಹೋದೀತು ಎಂದು ಉದ್ಯಮಿಗಳು ಸರ್ಕಾರಕ್ಕೆ ಕಿವಿ ಊದುತ್ತಿದ್ದಾರೆ.

3 ನೇ ಹಂತದ ಲಾಕ್‌ಡೌನ್‌ ರೂಪುರೇಷೆ ನಿರ್ಧಾರಕ್ಕೆ ಪ್ರಧಾನಿ ಮೋದಿ ಮುಖ್ಯಮಂತ್ರಿಗಳ ಸಭೆ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕೇಂದ್ರ ಮಂತ್ರಿಗಳ ಸಭೆ ಮತ್ತು ಪ್ರಧಾನಿ ಕಾರ್ಯದರ್ಶಿ ಪಿ.ಕೆ ಮಿಶ್ರಾ ಹಿರಿಯ ಅಧಿಕಾರಿಗಳ ಜೊತೆಗೆ ಸುದೀರ್ಘ ಚರ್ಚೆ ನಡೆಸಿದರೂ ಇದುವರೆಗಂತೂ ಸರ್ಕಾರ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

Tap to resize

Latest Videos

ಕಳಚಿ ಬೀಳುತ್ತಿರುವ ಚೀನಾ ಮುಖವಾಡ; ಆದ್ರೂ ಬಿಟ್ಟಿಲ್ಲ ಆಟಾಟೋಪ

ಬಹುತೇಕ ಮೇ 2ರ ಬೆಳಿಗ್ಗೆ ಪ್ರಧಾನಿ ಮತ್ತೊಮ್ಮೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಅಲ್ಲಿಯವರೆಗೆ ಮುಂದೆ ಏನು ಎಂಬ ಪ್ರಶ್ನೆಯ ಉತ್ತರಕ್ಕಾಗಿ ಕಾಯಲೇಬೇಕು. ಬಹುತೇಕ ಎಲ್ಲರ ಅಭಿಪ್ರಾಯ ಇಷ್ಟೇ; ಮದ್ದು ರೋಗದಿಂದ ಮುಕ್ತಿ ಕೊಡಿಸಬೇಕೇ ಹೊರತು, ರೋಗಕ್ಕಿಂತ ಅಪಾಯಕಾರಿ ಆಗಲು ಕೂಡದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!