
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಸೆ.22): ಸಿನಿಮಾ, ಮಾರುಕಟ್ಟೆ, ಜನನಿಬಿಡ ಪ್ರದೇಶದಲ್ಲಿ ಅವಸರವಾಗಿ ಎಲ್ಲೆಂದರಲ್ಲಿ ಬೈಕ್ ನಿಲ್ಲಿಸುವವರೇ ಎಚ್ಚರ. ಯಾಕಂದ್ರೇ, ಬೈಕ್ ಬಿಡೋದನ್ನೇ ಕಾಯ್ತಿರೋ ಈ ಖದೀಮರು ಕೆಲ ಕ್ಷಣದಲ್ಲಿಯೇ ನಿಮ್ಮ ಬೈಕನ್ನು ಮಂಗಮಾಯ ಮಾಡಿ ಬಿಡುತ್ತಾರೆ.
ಆಂಧ್ರ ಮೂಲದ ಈ ನಾಲ್ವರು ಖದೀಮರ ಕೇವಲ ಎರಡು ಮೂರು ತಿಂಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಬೈಕ್ ಕದ್ದಿದ್ರು. ಆದ್ರೇ, ಒಂದೇ ವಾರದಲ್ಲಿ ಕಳ್ಳರ ಹೆಡೆಮುರಿ ಕಟ್ಟಿರೋ ಬಳ್ಳಾರಿ ಪೊಲೀಸರು 43 ಲಕ್ಷ ಮೌಲ್ಯದ 62 ಬೈಕ್ ಗಳನ್ನು ಜಪ್ತಿ ಮಾಡೋ ಮೂಲಕ ದಾಖಲೆ ಬರೆದಿದ್ದಾರೆ.
21 ದ್ವಿಚಕ್ರ ವಾಹನ ಕಳವು ಮಾಡಿದ್ದ 4 ಮಂದಿ ಆರೋಪಿಗಳ ಬಂಧನ
ಆಂಧ್ರ ಮೂಲದ ಕಳ್ಳರ ಹಡೆಮುರಿಕಟ್ಟಿದ ಬಳ್ಳಾರಿ ಪೊಲೀಸರು.
ಕಳೆದ ನಾಲ್ಕೈದು ತಿಂಗಳಿಂದ ಬಳ್ಳಾರಿ, ಕುರುಗೋಡು ಸೇರಿದಂತೆ ಜಿಲ್ಲೆಯಲ್ಲಿ ನೂರಾರು ಬೈಕ್ ಗಳ ಕಳ್ಳತನ.. ಪ್ರತ್ಯೇಕ ತಂಡ ರಚನೆ ಮಾಡೋ ಮೂಲಕ ಕಳ್ಳರ ಹಡೆಮುರಿ ಕಟ್ಟಿದ ಬಳ್ಳಾರಿ ಪೊಲೀಸರು. ಹೌದು, ಆಂಧ್ರದ ಗಡಿಭಾಗವಾಗಿರೋ ಹಿನ್ನೆಲೆ ಬಳ್ಳಾರಿಯಲ್ಲಿ ಆಂಧ್ರ ಮೂಲದವರು ಬರೋದು ಹೋಗೋದು, ವಾಸ ಮಾಡೋದು ಸಾಮಾನ್ಯ. ಆದ್ರೇ, ಹೀಗೆ ಬಂದವರಲ್ಲಿ ಕೆಲವರು ಕಳ್ಳತನ ದಂಧೆ ಮಾಡೋದು ಇತ್ತೀಚೆಗೆ ಬೆಳಕಿಗೆ ಬಂದಿದೆ.
ಜನನಿಬಿಡ ಪ್ರದೇಶ, ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶದಲ್ಲಿ ನಿಂತಿರೋ ಬೈಕ್ ಗಳನ್ನು ಪಾರ್ಕ್ ಮಾಡೋದನ್ನು ಗಮನಿಸೋ ಈ ಖಧೀಮರು ಬರೋಬ್ಬರಿ ನೂರಕ್ಕೂ ಹೆಚ್ಚು ಬೈಕ್ ಗಳನ್ನು ಕಳ್ಳತನ ಮಾಡಿದ್ಧಾರೆ. ಪದೇ ಪದೇ ಬೈಕ್ ಕಳ್ಳತನವಾಗೋದನ್ನು ಗಮನಿದ ಪೊಲೀಸರು ಬೈಕ್ ಕಳ್ಳರ ಗ್ಯಾಂಗ್ ಪತ್ತೆ ಹಚ್ಚಲೆಂದೇ ಬಳ್ಳಾರಿ ಡಿವೈಎಸ್ಪಿ ಶೇಖರಪ್ಪ ಮತ್ತು ಸಿಪಿಐ ಸುಭಾಷ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ರು. ಈ ವಿಶೇಷ ತಂಡ ಒಂದೇ ವಾರದಲ್ಲಿ 43 ಲಕ್ಷದ 62 ಬೈಕ್ ಜೊತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಾಲ್ಕು ಖದೀಮರಿಂದ 62 ಬೈಕ್ ಒಂದು ದೊಡ್ಡ ಆಟೋ ಜಪ್ತಿ
ಮೂಲತಃ ಆಂಧ್ರದವರಾದ ಎಸ್.ರಫೀಕ್, ಮಹಮ್ಮದ್ ವಾಸಿಂ, ಅಬುಬಕರ್ ಬಾಬು ಮತ್ತು ನಜೀರ್ ಬಳ್ಳಾರಿಯ ವಿವಿಧ ಬಡವಾಣೆಗಳಲ್ಲಿ ವಾಸ ಮಾಡುತ್ತಿದ್ರು. ಅವಸರದಲ್ಲಿ ಬಿಟ್ಟ ಬೈಕ್ ಗಳನ್ನು, ಹ್ಯಾಂಡಲ್ ಲಾಕ್ ಮಾಡದ ಬೈಕ್ ಗಳನ್ನು ಟಾರ್ಗೆಟ್ ಮಾಡುತ್ತಿದ್ರು.
ಬೈಕ್ ಗಳನ್ನು ನಿರಂತರವಾಗಿ ಅಬ್ಸರ್ ಮಾಡೋ ಮೂಲಕ ಬೈಕ್ ಗಳನ್ನು ಕಳ್ಳತನ ಮಾಡಿ ಬೇರೆ ಕಡೆ ಮಾರಾಟ ಮಾಡುತ್ತಿದ್ರು. ವಿಶೇಷವೆಂದ್ರೆ ಇದರಲ್ಲಿದ್ದ ಓರ್ವ ಆರೋಪಿ ಕೀ ಓಪನ್ ಮಾಡೋದ್ರಲ್ಲಿ ಎಕ್ಸ್ ಪರ್ಟ್ ಇದ್ದನಂತೆ. ಹೀಗಾಗಿ ಸುಲಭವಾಗಿ ಕಳ್ಳತನ ಮಾಡುತ್ತಿದ್ರು ಎನ್ನಲಾಗುತ್ತಿದೆ. ವಿಶೇಷವೆಂದ್ರೆ, ಕದ್ದ ಬೈಕ್ ಗಳನ್ನು ಒಂದೇಡೆ ನಿಲ್ಲಿಸಿ ಅವುಗಳನ್ನು ಆಟೋ ಮೂಲಕ ಬೇರೆಡೆ ಸಾಗಿಸುತ್ತಿದ್ರು. ಇದೀಗ ಆ ಆಟೋವನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ.
ಹಣಕ್ಕಾಗಿ ಬೈಕ್ ಕಳ್ಳರಾಗಿದ್ದ 17ಮಂದಿ ಅರೆಸ್ಟ್, ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಂದ ಪಾಪಿ!
ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡೋರೇ ಎಚ್ಚರವಾಗಿರಿ
ಸದ್ಯ 62 ಬೈಕ್ ಗಳನ್ನು ಜಪ್ತಿ ಮಾಡಿಕೊಂಡಿರೋ ಪೊಲೀಸರು ಆರೋಪಿಗಳ ವಿಚಾರಣೆ ಮುಂದುವರೆಸಿದ್ದು ಮತ್ತಷ್ಟು ಬೈಕ್ ರಿಕವರಿ ಮಾಡುವ ಸಾಧ್ಯತೆ ಇದೆ. ಸದ್ಯ ಪೊಲೀಸರು ಜಪ್ತಿ ಮಾಡಿರೋ ಬೈಕ್ ಅವರ ಮಾಲೀಕರಿಗೆ ನೀಡೋ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೇ, ಬೈಕ್ ಪಾರ್ಕಿಂಗ್ ಮಾಡೋ ಜನರು ಕೂಡ ಒಂದಷ್ಟು ಎಚ್ಚರದಿಂದ ಇರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ