
ಬೆಂಗಳೂರು (ಅ.28): ದಾರಿಯಲ್ಲಿ ಹೋಗುವಾಗ ಯಾವುದೋ ವ್ಯಕ್ತಿಯ ಜೇಬಿನಿಂದ ನೂರರ ನೋಟು ಕೆಳಗೆ ಬಿದ್ರೆ ಥಟ್ಟನೆ ಅದನ್ನೆತ್ತಿ ತಮ್ಮ ಜೇಬಿನಲ್ಲಿಟ್ಟುಕೊಂಡು ಬಿಡೋ ಜನಗಳೇ ಹೆಚ್ಚು. ಇನ್ನು ಐಫೋನ್ ದಾರಿಯಲ್ಲಿ ಸಿಕ್ಕರೆ ಅದನ್ನ ಕಳೆದುಕೊಂಡ ವ್ಯಕ್ತಿಗೆ ತಲುಪಿಸ್ತಾರಾ? ನೆವರ್, ಹಾಗೆ ತಲುಪಿಸಿ ಪ್ರಾಮಾಣಿಕತೆ ಮೆರೆಯುವವರು ಸಿಗೋದು ಈ ಕಾಲದಲ್ಲಿ ಅಪರೂಪವೇ ಸರಿ. ಅಂತಹ ಅಪರೂಪದ ವ್ಯಕ್ತಿ ನಮ್ಮ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿದ್ದಾರೆ ನೋಡಿ.
ಪೊಲೀಸರೆಂದರೆ ದೋಚುವವರು, ಪುಡಿಗಾಸಿಗೆ ಕೈಯೊಡ್ಡುವವರು ಅವರಲ್ಲಿ ಪ್ರಾಮಾಣಿಕತೆಯೆಂಬುದು ಎಳ್ಳುಕಾಳಷ್ಟು ಇಲ್ಲ ಎಂದು ವಿನಾಕಾರಣ ಅರೋಪಿಸಲಾಗುತ್ತಿದೆ. ಆದರೆ ಪೊಲೀಸ್ ಸಿಬ್ಬಂದಿಯಲ್ಲೂ ಒಳ್ಳೆಯವರಿದ್ದಾರೆ, ಜೀವಪರರು ಪ್ರಾಮಾಣಿಕರಿದ್ದಾರೆ ಎಂಬುದಕ್ಕೆ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿಯಾಗಿರುವ ಕೃಷ್ಣ ಅವರೇ ಸಾಕ್ಷಿ
ಅಂಕೋಲಾ: ಮಾಂಗಲ್ಯ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ.
ಮನೆಯಿಂದ ನಗರ ಆಯುಕ್ತರ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಲು ಬರುತ್ತಿದ್ದ ವೇಳೆ ಬಾಲ್ಡ್‌ವಿನ್ ಸ್ಕೂಲ್ ಬಳಿ ರಸ್ತೆಯಲ್ಲಿ ಐಫೋನ್ ಬಿದ್ದಿರುವುದನ್ನು ಕಂಡಿರುವ ಕೃಷ್ಣ, ಯಾರೋ ಅಪರಿಚಿತರು, ವಾಹನ ಸವಾರರ ಜೇಬಿನಿಂದ ಕೆಳಗೆ ಬಿದ್ದಿರುವ ಐಫೋನ್. ದಾರಿಯಲ್ಲಿ ಸಿಕ್ಕ ಐಫೋನ್ ತೆಗೆದುಕೊಂಡು ಸೀದಾ ಕಚೇರಿಗೆ ಬಂದಿರುವ ಕೃಷ್ಣ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಚಾರಿಸಿದ ಬಳಿಕ ಅದು ಮೊಹಮ್ಮದ್ ಫಹಾನ ಎಂಬುವವರಿಗೆ ಸೇರಿದ ಐಫೋನ್ ಎಂಬುದು ಗೊತ್ತಾಗಿದೆ. ಐಫೋನ್ ಕಳೆದುಕೊಂಡಿದ್ದ ಮೊಹಮ್ಮದ್ ಫಹಾನ್‌ರನ್ನ ಕಚೇರಿಗೆ ಕರೆಯಿಸಿಕೊಂಡ ಹಿರಿಯ ಅಧಿಕಾರಿಗಳು ಕಳೆದುಕೊಂಡಿದ್ದ ಐಫೋನ್ ಹಿಂತಿರುಗಿಸಿದ್ದಾರೆ. ಕಳೆದುಕೊಂಡ ಮೊಬೈಲ್ ಪಡೆಯುತ್ತಿದ್ದಂತೆ ಧನ್ಯವಾದ ತಿಳಿಸಿದ ಐಫೋನ್ ಮಾಲೀಕ ಫಹಾನ್. ಸಿಬ್ಬಂಧಿ ಕೃಷ್ಣ ಕಾರ್ಯಕ್ಕೆ, ಪ್ರಾಮಾಣಿಕತೆಗೆ ಶ್ಲಾಘನೆ ವ್ಯಕ್ತಪಡಿಸಿದ ಹೆಚ್ವುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್.
ರಸ್ತೆ ಬದಿ ಬಿದ್ದು ಸಿಕ್ಕ 25 ಲಕ್ಷ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ