
ಬೆಂಗಳೂರು (ಮಾ.24) : ಇದು ಇಡೀ ಬೆಂಗಳೂರು ಪೊಲೀಸರೇ ಹೆಮ್ಮೆ ಪಡೋ ವಿಚಾರ. ಉತ್ತರ ಅಮೆರಿಕದ ದಕ್ಷಿಣ ಭಾಗದಲ್ಲಿರುವ ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರು ಪೊಲೀಸ್ ಕಾನ್ಸ್‌ಟೇಬಲ್ ಆಯ್ಕೆಯಾಗಿದ್ದಾರೆ.
ಕಾನ್ಸ್‌ಟೇಬಲ್ ಎಚ್ ಎಂ ಲೋಕೇಶ್(Constable HM Lokesh) ಮೆಕ್ಸಿಕೋ ರಾಯಭಾರ ಕಚೇರಿಗೆ ಆಯ್ಕೆಯಾಗಿರುವ ಪೊಲೀಸ್. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ(Bangalore City Police Commissioner's Office)ಯಲ್ಲಿ ಸೋಷಿಯಲ್ ಮೀಡಿಯಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸಂವಹನ, ಕಂಪ್ಯೂಟರ್ ಮತ್ತು ಇಂಗ್ಲಿಷ್‌ನಲ್ಲಿ ಕೌಶಲ್ಯ ಹೊಂದಿದ್ದ ಹೆಚ್ ಎಂ ಲೋಕೇಶ್. ಕೊರೊನಾ(Coronavirus) ಸಮಯದಲ್ಲಿ ನಾಗರಿಕರ ಜೊತೆ ನಿರಂತರ ಸಂಪರ್ಕ ಸಾಧಿಸಿ ಜನರ ಸಂದೇಹಗಳಿಗೆ ಉತ್ತರಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದ ಕಾನ್‌ಸ್ಟೇಬಲ್ ಲೋಕೇಶ್.
SSLC Exam: ಬೆಂಗಳೂರು ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿ: ಸೈಬರ್ ಕೇಂದ್ರಕ್ಕೂ ಅವಕಾಶವಿಲ್ಲ
ಇತ್ತೀಚೆಗೆ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಹುದ್ದೆಗೆ ಸಂದರ್ಶನ ಎದುರಿಸಿದ್ದ ಕಾನ್ಸ್‌ಟೇಬಲ್. ವಿವಿಧ ಹಂತಗಳಲ್ಲಿ ಸಂದರ್ಶನ ಎದುರಿಸಿ ಆಯ್ಕೆಯಾಗಿದ್ದಾರೆ. ಇದು ಇಡೀ ಬೆಂಗಳೂರು ಪೊಲೀಸರು ಹೆಮ್ಮೆ ಪಡುವ ವಿಷಯವಾಗಿದೆ.
ಪ್ರವೀಣ್ ಸೂದ್, ಮೇಘರಿಕ್, ಸುನೀಲ್ ಕುಮಾರ್, ಭಾಸ್ಕರ್ ರಾವ್, ಕಮಲ್ ಪಂತ್ ಮತ್ತು ಪ್ರತಾಪ್ ರೆಡ್ಡಿ ಅವಧಿಯಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ನಿರ್ವಹಿಸಿದ್ದರು. ಬೆಂಗಳೂರು ಪೊಲೀಸ್ ಸೋಷಿಯಲ್ ಮೀಡಿಯಾ ಖಾತೆಗೆ ಹೊಸ ಛಾಪು ಮೂಡಿಸಿದ್ದ ಕಾನ್ಸ್‌ಟೇಬಲ್ ಲೊಕೇಶ್ ಇದೀಗ ಮೆಕ್ಸಿಕೋ ರಾಯಭಾರ ಕಚೇರಿಗೆ ಆಯ್ಕೆಯಾಗಿರುವುದು ಹೆಮ್ಮೆ ಎನಿಸಿದೆ.
ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಸ್ಮಾರ್ಟ್ ಸಿಗ್ನಲ್ ಪರಿಹಾರ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸಿಗ್ನಲ್‌ಗೆ ಟೆಂಡರ್
ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅಭಿನಂದನೆ:
ಎಚ್‌ಎಂ ಲೋಕೇಶ್ ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಆಯ್ಕೆಯಾಗಿರುವ ಬಗ್ಗೆ ಪೊಲೀಸ್ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಟ್ವೀಟ್ ಮೂಲಕ ಅಭಿನಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ