ಕನ್ನಡದಲ್ಲಿ ಮೋದಿ ಮಾತು, ಆತ್ಮನಿರ್ಭರ ಭಾರತ ಕಲ್ಪನೆಗೆ ಬೆಂಗಳೂರೇ ಆದರ್ಶ ಎಂದ ಪ್ರಧಾನಿ

By Suvarna NewsFirst Published Jun 20, 2022, 4:20 PM IST
Highlights

ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಸೋಮವಾರ) ಬೆಂಗಳೂರಿನ ಕೊಮ್ಮಘಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಈ ವೇಳೆ ಕನ್ನಡದಲ್ಲಿ ಮಾತನಾಡದ ಮೋದಿ ಬೆಂಗಳೂರಿಗರನ್ನು ಹಾಡಿಗೊಗಳಿದರು.

ಬೆಂಗಳೂರು, (ಜೂನ್.20): ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಸೋಮವಾರ) ಬೆಂಗಳೂರಿಗೆ ಆಗಮಿಸಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಗಳೂರು ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಇದೇ ವೇಳೆ ಕೊಂಕಣ ರೈಲು ಮಾರ್ಗವೂ ಸಂಪೂರ್ಣ ವಿದ್ಯುದೀಕರಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಮಾರ್ಗವನ್ನು ಉದ್ಘಾಟಿಸಿದರು. 

ಬಳಿಕ ಮಾತನಾಡಿದ ಮೋದಿ,  ಎಲ್ಲರಿಗೂ ನಮಸ್ಕಾರಗಳು, ಕರ್ನಾಟಕ ರಾಜ್ಯದ ಪಾಲಿಗೆ ಇಂದು ಮಹತ್ವದ ದಿನ. ರಾಜ್ಯದಲ್ಲಿ ಹಲವು ಮೂಲಭೂತ ಸೌಲಭ್ಯಗಳು ಕಲ್ಪಿಸುವ ಯೋಜನೆಗಳಿಗೆ ಇಂದು ಚಾಲನೆ ಸಿಕ್ಕಿದೆ. ಯೋಜನೆಗಳನ್ನು ಜಾರಿಗೊಳಿಸಲು ನನಗೆ ಸಂತೋಷವಾಗುತ್ತದೆ. ವೇದಿಕೆಯ ಮೇಲಿರುವ ಎಲ್ಲರಿಗೂ ಆತ್ಮೀಯ ಧನ್ಯವಾದಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.

ಪ್ರಧಾನಿ ಮೋದಿ ಸಮಾರಂಭಕ್ಕೆ ಶುಭ ಹಾರೈಸಿದ ಸಿದ್ದರಾಮಯ್ಯ, ಆದ್ರೆ....

ಡಬಲ್‌ ಇಂಜಿನ್‌ ಸರ್ಕಾರ ಕರ್ನಾಟಕದ ತ್ವರಿತ ಅಭಿವೃದ್ಧಿಯ ಭರವಸೆ ನೀಡಿತ್ತು. ಆದರ ಭರವಸೆಯನ್ನು ಮತ್ತೊಮ್ಮೆ ನಾವು ಸಾಧಿಸುತ್ತಿದ್ದೇವೆ. 27 ಸಾವಿರ ಕೋಟಿರೂ ಮೌಲ್ಯದ ಅಭಿವೃದ್ಧಿ ಕಾರ್ಯವನ್ನು ಉದ್ಘಾಟಿಸಲಾಗಿದೆ. ಕೊಮ್ಮಘಟ್ಟಕ್ಕೆ ಬರುವ ಮುನ್ನ ನಾನು ಐಐಎಸ್‌ಸಿಗೆ ಭೇಟಿ ನೀಡಿದೆ. ವಿಜ್ಞಾನ ತಂತ್ರಜ್ಞಾನದ ಕ್ಷೇತ್ರದಲ್ಲಿನ ಪ್ರಗತಿಯನ್ನು ನೋಡಲು ನನಗೆ ಸಂತಸವಾಗುತ್ತಿದೆ. ಬೆಂಗಳೂರಿನಲ್ಲಿ ಇದು ನನ್ನ ಕಡೆಯ ಕಾರ್ಯಕ್ರಮವಾಗಿ ಇದಾದ ನಂತರ ನಾನು ಮೈಸೂರಿಗೆ ಹೋಗುತ್ತಿದ್ದೇನೆ ಎಂದರು.

ಕರ್ನಾಟಕದಲ್ಲಿ ಐದು ನ್ಯಾಷನಲ್‌ ಹೈವೇ ಮತ್ತು ಏಳು ರೈಲ್ವೇ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಮೈಸೂರಿನಲ್ಲೂ ಕರ್ನಾಟಕದ ಅಭಿವೃದ್ಧಿ ಯಾತ್ರೆ ಮುಂದುವರೆಯುತ್ತದೆ. ಇಲ್ಲಿಂದ ಹೊಸ ಶಕ್ತಿ ಪಡೆದು ಹೊರಡುತ್ತಿದ್ದೇನೆ ಎಂದು ಹೇಳಿದರು.

ಬೆಂಗಳೂರು ದೇಶದ ಲಕ್ಷಾಂತರ ಯುವಕರಿಗೆ ಭವಿಷ್ಯದ ಕನಸು ಕಲ್ಪಿಸುವ ನಗರವಾಗಿದೆ. ಬೆಂಗಳೂರಿನಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಬರುವ ಮಂದಿಗೆ ಸಹಾಯವಾಗಬೇಕು. ಬೆಂಗಳೂರಿನ ಟ್ರಾಫಿಕ್‌ ಜಾಮ್‌ನಿಂದ ಮುಕ್ತಿ ಪಡೆಯಲು ಮೆಟ್ರೊ, ಸಬ್‌ ಅರ್ಬನ್‌ ರೈಲು, ಉತ್ತಮ ರಸ್ತೆ ಎಲ್ಲವನ್ನೂ ಡಬಲ್‌ ಇಂಜಿನ್‌ ಸರ್ಕಾರ ಮಾಡುತ್ತದೆ. ಇದರಿಂದ ಜನರಿಗೆ ಸಂಚಾರದಲ್ಲಿ ಕಿರಿಕಿರಿ ಕಡಿಮೆಯಾಗುತ್ತದೆ ಎಂದು ಭರವಸೆ ನಿಡಿದರು.

PM Modi Karnataka Visit LIVE: ಆತ್ಮನಿರ್ಭರ ಭಾರತಕ್ಕೆ ಬೆಂಗಳೂರೇ ಪ್ರೇರಣೆ: ಬೆಂಗಳೂರು ಹೊಗಳಿದ ಮೋದಿ

16 ವರ್ಷಗಳಿಂದ ಈ ಎಲ್ಲಾ ಯೋಜನೆಗಳು ಫೈಲ್‌ನಲ್ಲೇ ಇದ್ದವು. ನಮ್ಮ ಸರ್ಕಾರ ಈ ಯೋಜನೆಗೆ ಕಾಯಕಲ್ಪ ನೀಡಿದೆ. ಬೆಂಗಳೂರಲ್ಲಿ ದುಡಿಯುವವರು ಬೆಂಗಳೂರಲ್ಲೇ ಇರಬೇಕು ಎಂಬ ಅನಿವಾರ್ಯತೆಯನ್ನು ಈ ರೈಲ್ವೆ ಯೋಜನೆಗಳು ಹೋಗಲಾಡಿಸುತ್ತದೆ. ಕನೆಕ್ಟಿವಿಟಿ ನಿರ್ಮಾಣವಾದ ನಂತರ ಜನರ ದೈನಂದಿನ ಬದುಕಿಗೆ ಸಹಕಾರಿಯಾಗಲಿದೆ. 40 ವರ್ಷಗಳಲ್ಲಿ ಎಲ್ಲ ಕೆಲಸಗಳೂ ಕೇವಲ ಚರ್ಚೆಯಲ್ಲೇ ಕಳೆದುಹೋಗಿವೆ. ರೈಲ್ವೆ ಕನೆಕ್ಟಿವಿಟಿ ನಿರ್ಮಾಣ ದೇಶದ ಆರ್ಥಿಕ ಕ್ರಾಂತಿಗೆ ಮುನ್ನುಡಿಯಾಗುತ್ತದೆ. ಕ್ರಾಮಂತಿಕಾರಕ ಬೆಳವಣಿಗೆಗೆ ಇದು ಅತ್ಯಂತ ಸಹಕಾರಿಯಾಗಿದೆ ಎಂದು ತಿಳಿಸಿದರು.

1,200 ಕಿಲೋಮೀಟರ್‌ನಷ್ಟು ಉದ್ದ ರೈಲ್ವೆ ಸಂಪರ್ಕ ಕರ್ನಾಟಕದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿದೆ. ವಿಮಾನದಲ್ಲಿ ಕೊಡುತ್ತಿದ್ದ ಸವಲತ್ತುಗಳನ್ನು ರೈಲ್ವೆಯಲ್ಲೂ ಕೊಡುತ್ತಿದ್ದೇವೆ. ಬೆಂಗಳೂರಿನ ಎಲ್ಲಾ ರೈಲ್ವೇ ನಿಲ್ದಾಣಗಳನ್ನೂ ಸ್ಮಾರ್ಟ್‌ ನಿಲ್ದಾಣಗಳನ್ನಾಗಿ ಮಾಡಲಾಗುವುದು. ಬೆಂಗಳೂರು ವೆಲ್ತ್‌ ಕ್ರಿಯೇಟರ್‌ ಮತ್ತು ಜಾಬ್‌ ಕ್ರಿಯೇಟರ್‌ಗಳ ನಗರ. ದೇಶಕ್ಕೆ ಬೆಂಗಳೂರು ಕೊಡುಗೆ ಅಪಾರ. ಖಾಸಗಿ ಕ್ಷೇತ್ರದ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ಬೆಂಗಳೂರು ಜನ ತಕ್ಕ ಉತ್ತರ ಕೊಡುತ್ತಾರೆ. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳ ಸಮ್ಮಿಲನವೇ ಬೆಂಗಳೂರು ಬೆಳವಣಿಗೆಗೆ ಕಾರಣ. ಬೆಂಗಳೂರು ಪ್ರತಿಯೊಬ್ಬರ ಮೈಂಡ್‌ಸೆಟ್‌ ಬದಲಾಯಿಸುವ ಅವಕಾಶ ಮಾಡಿಕೊಡುತ್ತದೆ. ಖಾಸಗಿ ಕ್ಷೇತ್ರದ ಬಗ್ಗೆ ತಪ್ಪು ಕಲ್ಪನೆ ಹೊಂದಿದವರ ಮೈಂಡ್‌ ಸೆಟ್‌ ಬದಲಾಗುತ್ತದೆ ಎಂದರು.

click me!