
ಕಾರವಾರ, ಉತ್ತರಕನ್ನಡ (ಏ.6): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಪ್ರಾರ್ಥಿಸಿ ಮೋದಿ ಅಭಿಮಾನಿಯೊಬ್ಬ ಕಾಳಿ ಮಾತೆಗೆ ತನ್ನ ಬೆರಳನ್ನೇ ಅರ್ಪಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ ನಡೆದಿದೆ.
ಅರುಣ್ ವರ್ಣೇಕರ್, ಕಾಳಿ ಮಾತೆಗೆ ಎಡಗೈ ಬೆರಳನ್ನು ಅರ್ಪಿಸಿದ ಅಭಿಮಾನಿ. ಸೋನಾರವಾಡ ವಾಸಿಯಾಗಿರುವ ಅರುಣ್ ವರ್ಣೇಕರ್ ಅವಿವಾಹಿತನಾಗಿದ್ದು, ಪ್ರಧಾನಿ ಮೋದಿಯವರ ಅಪ್ಪಟ ಅಭಿಮಾನಿಯಾಗಿದ್ದಾನೆ. ಮನೆಯಲ್ಲಿ ಮೋದಿಗಾಗಿ ಗುಡಿಯನ್ನು ನಿರ್ಮಿಸಿ ದಿನಾಲೂ ಪೂಜೆ ಮಾಡುತ್ತಾ ಬಂದಿರುವ ಅರುಣ್. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಕಾಳಿಮಾತೆಗೆ ಬೇಡಿಕೊಂಡ ಯುವಕ, ಬೆರಳು ತುಂಡು ಮಾಡಿಕೊಂಡು ರಕ್ತದಲ್ಲಿ 'ಮಾ ಕಾಳಿಮಾತಾ ಮೋದಿ ಬಾಬಾ ಕೋ ರಕ್ಷಾ ಕರೋ' ಮೋದಿ ಬಾಬಾ ಪಿಎಂ, 3 ಬಾರ್ 78ತಕ್, 378, 378+, ಮೇರಾ ಮೋದಿ ಬಾಬಾ ಸಬಸೇ ಮಹಾನ್ ಎಂದು ರಕ್ತದಲ್ಲಿ ಗೋಡೆ ಹಾಗೂ ಪೋಸ್ಟರ್‌ನಲ್ಲಿ ಬರೆದಿರುವ ಯುವಕ.
EXCLUSIVE! ಏಕರೂಪ ನಾಗರೀಕ ಸಂಹಿತೆ ಈ ಸಮಯದ ಅಗತ್ಯ: ಉತ್ತರಾಖಂಡ ಸ್ಪೀಕರ್ ರಿತು ಖಂಡೂರಿ ಭೂಷಣ್!
ವಿಚಿತ್ರ ಏನೆಂದರೆ ಕಳೆದ 2019ರ ಚುನಾವಣೆಯಲ್ಲೂ ಸಹ ಮೋದಿ ಗೆಲುವಿಗಾಗಿ ಬಲಗೈ ಬೆರಳು ಕತ್ತರಿಸಿ ಕಾಳಿಮಾತೆಗೆ ಅರ್ಪಿಸಿ ಪ್ರಾರ್ಥಿಸಿದ್ದ ಅರುಣ್. ಇದೀಗ ಎಡಗೈ ಬೆರಳನ್ನೂ ಕಾಳಿ ಮಾತೆಗೆ ಅರ್ಪಿಸಿ ಮೋದಿ ಗೆಲುವಿಗೆ ಪ್ರಾರ್ಥಿಸಿದ್ದಾನೆ.
ಪ್ರಧಾನಿ ಮೋದಿ ನನಗೆ ದೇವರಿಗಿಂತ ಮೇಲು ಎನ್ನುತ್ತಾನೆ ಅರುಣ್. ಮೋದಿ ಅಧಿಕಾರಕ್ಕೆ ಬಂದ ನಂತರವೇ ಪಾಕಿಸ್ತಾನ, ಚೀನಾದ ಕಿರಿಕಿರಿ ನಿಂತಿದೆ. ಪ್ರತೀ ಬಾರಿ ಉಗ್ರರ ದಾಳಿ, ಸೈನಿಕರ ಸಾವು ಕೇಳಿ ಬರ್ತಿದ್ದ ಕಾಶ್ಮೀರದಲ್ಲಿ ಇಂದು ನೆಮ್ಮದಿ ವಾತಾವರಣವಿದೆ. ದೇಶದ ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ ಬೇಕು ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿರುವ ಅರುಣ್, ಈ ಹಿಂದೆ ಮುಂಬೈನಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದ ಅರುಣ್, ತಂದೆ-ತಾಯಿಯ ಆರೈಕೆಗಾಗಿ ಮುಂಬೈನಲ್ಲಿ ಕೆಲಸ ಬಿಟ್ಟು ಕಾರವಾರದಲ್ಲೇ ನೆಲೆಸಿದ್ದಾನೆ.
ಶತ್ರುಗಳಿಗೂ ಗೊತ್ತಾಗಿದೆ ಇದು ನವಭಾರತ: ಪ್ರಧಾನಿ ಮೋದಿ ಗುಡುಗು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ