ದೇವಾಲಯಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿದ ನರೇಂದ್ರ ಮೋದಿ ಸಹೋದರ!

By Gowthami K  |  First Published Jul 21, 2024, 4:42 PM IST

ದೇವಾಲಯಗಳ ಭೇಟಿಗಾಗಿ  ಪ್ರಧಾನಿ ನರೇಂದ್ರ ಮೋದಿ ಸಹೋದರ ಕರ್ನಾಟಕಕ್ಕೆ  ಆಗಮಿಸಿದ್ದಾರೆ.


ಬೆಂಗಳೂರು (ಜು.21):  ಪ್ರಧಾನಿ ನರೇಂದ್ರ ಮೋದಿ ಸಹೋದರ ಕರ್ನಾಟಕಕ್ಕೆ  ಭೇಟಿ  ಕೊಟ್ಟಿದ್ದಾರೆ. ಸಾಯಿಬಾಬಾ ದೇವಸ್ಥಾನ ಸೇರಿದಂತೆ ಟ್ರಸ್ಟ್ ಉದ್ಘಾಟನೆಗೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸಹೋದರ ಸೋಮಭಾಯಿ ಮೋದಿ  ಗುಜರಾತ್ ನಿಂದ ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

 ಕನ್ನಡಿಗರನ್ನು ಬೆಂಬಲಿಸಿ ಫೋನ್‌ಪೇ ಜತೆಗಿನ ಒಪ್ಪಂದದಿಂದ ಹೊರಬರ್ತಾರಾ ಸುದೀಪ್? ಕಿಚ್ಚನ ಟೀಂನಿಂದ ಅಪ್ಡೇಟ್‌

ಬಳಿಕ ಯಲಹಂಕದ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಮತ್ತು ಗಂಚಿ ಸಮಾಜ್ ಪೂರ್ಣೇಶ್ವರ್ ದಾಮ್ ಟ್ರಸ್ಟ್ ಗೆ ಭೇಟಿ ನೀಡಿದರು.  ತದನಂತರ ಸಂಜೆ 4 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೂ‌ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದು, ರಾತ್ರಿ 7:45 ಕ್ಕೆ ಗುಜರಾತ್‌ಗೆ ವಾಪಾಸ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.

Tap to resize

Latest Videos

undefined

ಎಂಜಿನಿಯರಿಂಗ್ ,ಆರ್ಕಿಟೆಕ್ಚರ್ ಕೋರ್ಸ್‌ ಇನ್ನಷ್ಟು ದುಬಾರಿ: ಶುಲ್ಕ ಶೇ.10 ಹೆಚ್ಚಿಸಿ ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಸಹೋದರನಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ, ಪೇಟಾ ತೊಡಿಸಿ ಸನ್ಮಾನ ಮಾಡಿ ಆದರದಿಂದ ಸ್ವಾಗತಿಸಲಾಯ್ತು.

click me!