
ಬೆಂಗಳೂರು(ಅ.22): ದೇಶದಲ್ಲಿ 100 ಕೋಟಿ ಡೋಸ್(100 Crore Vaccination) ಲಸಿಕೆ ನೀಡಿದ್ದೇವೆ ಎಂದು ಕೇಂದ್ರ ಸರ್ಕಾರ ಸಂಭ್ರಮಿಸಲು ಮುಂದಾಗಿದೆ. ಆದರೆ, ಕೊರೋನಾದಿಂದ(Coronavirus) ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಜನ ಔಷಧಿ, ಆಕ್ಸಿಜನ್ ಸಿಗದೆ ರಸ್ತೆಗಳಲ್ಲೇ ಪ್ರಾಣ ಬಿಟ್ಟಿದ್ದಾರೆ. ಇದು ಕರೋನಾ ನಿರ್ವಹಣೆಯಲ್ಲಿ ಕೇಂದ್ರ ಸಂಪೂರ್ಣ ವೈಫಲ್ಯ ಕಂಡಿದೆ ಎಂಬುದನ್ನು ಸಾಬೀತು ಮಾಡುತ್ತದೆ. ಈ ವೈಫಲ್ಯಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಹಾಗೂ ಬಿಜೆಪಿ(BJP) ನಾಯಕರು ದೇಶದ ನಾಗರಿಕರ ಕ್ಷಮೆ ಕೋರಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್(BK Hariprasad) ಒತ್ತಾಯಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 100 ಕೋಟಿ ಡೋಸ್ ಲಸಿಕೆ(Vaccine) ಕೊಟ್ಟಿದ್ದೇವೆ ಎನ್ನುವ ಕೇಂದ್ರ ಸರ್ಕಾರ(Central Government), ಸರ್ಕಾರಿ ಆಸ್ಪತ್ರೆಗಳಲ್ಲಿ ಎಷ್ಟು ಲಸಿಕೆ, ಖಾಸಗಿ ಆಸ್ಪತ್ರೆಗಳಲ್ಲಿ(Hospital) ಎಷ್ಟು ಲಸಿಕೆ ನೀಡಲಾಗಿದೆ. ಎಷ್ಟೆಷ್ಟು ಜನ 1,000 ರು.ಗಳಿಂದ 2,000 ರು. ನೀಡಿ ಲಸಿಕೆ ಪಡೆದಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲಿ ಎಂದು ಆಗ್ರಹಿಸಿದರು.
'ಟೀಂ ಇಂಡಿಯಾ ಜಗತ್ತಿಗೆ ಶಕ್ತಿ ತೋರಿಸಿದೆ' ಲಸಿಕಾ ಅಭಿಯಾನಕ್ಕೆ ಮೋದಿ ಧನ್ಯವಾದ
100 ಕೋಟಿ ಜನ ಇರುವ ದೇಶದಲ್ಲಿ ಕೇವಲ 20 ಕೋಟಿ ಜನರಿಗೆ ಮಾತ್ರ ಎರಡೂ ಡೋಸ್ ಲಸಿಕೆ ನೀಡಲಾಗಿದೆ. ವಿಶ್ವದಲ್ಲೇ(World) ಅತಿ ಹೆಚ್ಚು ಲಸಿಕೆ ಉತ್ಪಾದಿಸುವ ಭಾರತದಲ್ಲಿ(India) ಇದು ಸಂಭ್ರಮಿಸುವ ವಿಚಾರವೇ? ಭಾರತದಿಂದ ಲಸಿಕೆ ಪಡೆದಿರುವ ದೇಶಗಳಲ್ಲಿ ಎಷ್ಟು ಮಂದಿಗೆ ಎರಡೂ ಡೋಸ್ ನೀಡಲಾಗಿದೆ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ