ಬಂದ್‌ಗೆ ಕರೆ ನೀಡಿದವರಿಂದ 10 ಲಕ್ಷ ರೂ. ಬಾಂಡ್‌: ರಾವ್‌

By Kannadaprabha NewsFirst Published Feb 13, 2020, 8:49 AM IST
Highlights

ಬಂದ್‌ಗೆ ಕರೆ ನೀಡಿದವರಿಂದ .10 ಲಕ್ಷದ ಬಾಂಡ್‌: ರಾವ್‌| ಅಹಿತಕರ ಘಟನೆ ನಡೆದರೆ ಹೊಣೆ ಮಾಡಲು ಬಾಂಡ್‌: ಆಯುಕ್ತ

ಬೆಂಗಳೂರು[ಫೆ.13]: ನಗರದಲ್ಲಿ ಗುರುವಾರ ಬಂದ್‌ ಆಚರಣೆಗೆ ಅನುಮತಿ ನೀಡಿಲ್ಲ. ಅಹಿತಕರು ಘಟನೆಗಳು ನಡೆದರೆ ಬಂದ್‌ಗೆ ಕರೆ ನೀಡಿದವರನ್ನೇ ಹೊಣೆಗಾರನ್ನಾಗಿ ಮಾಡಲು .10 ಲಕ್ಷದ ಬಾಂಡ್‌ ಬರೆಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ತಮ್ಮ ಬೇಡಿಕೆಗಳ ಆಗ್ರಹಿಸಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನಾ ರಾರ‍ಯಲಿ ಆಯೋಜನೆಗೆ ಮಾತ್ರ ಸಂಘಟನೆಗಳಿಗೆ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಅಪಘಾತದಲ್ಲಿ ಮೂಳೆ ಕಟ್‌: ಪರಿಹಾರ ಮೊತ್ತ ಕೇಳಿ ವಿಮಾ ಕಂಪನಿ ತಬ್ಬಿಬ್ಬು

ಬಂದ್‌ ವೇಳೆ ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಕೆಲವರು ಮುಂಜಾನೆ ವೇಳೆ ಟೈರ್‌ಗಳಿಗೆ ಬೆಂಕಿ ಹಚ್ಚಿ ಜನರಲ್ಲಿ ಭೀತಿ ಮೂಡಿಸಲು ಯತ್ನಿಸುತ್ತಾರೆ. ಹೀಗಾಗಿ ನಸುಕಿನ 4.30ರಿಂದ ಎಲ್ಲ ಡಿಸಿಪಿಗಳು ಸೇರಿದಂತೆ ಪೊಲೀಸರಿಗೆ ಬಂದೋಸ್‌್ತಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ ಬಂದ್‌ಗೆ ಅವಕಾಶ ನೀಡಿಲ್ಲ. ಶಾಂತಿ ಭಂಗ ಉಂಟು ಮಾಡಿದರೆ ಬಂದ್‌ಗೆ ಕರೆ ನೀಡಿದ ಸಂಘಟನೆಗಳ ಜವಾಬ್ದಾರಿ ಮಾಡಲಾಗುತ್ತದೆ. ಇದಕ್ಕಾಗಿ ಈಗಾಗಲೇ ಅವರಿಂದ .10 ಲಕ್ಷದ ಬಾಂಡ್‌ ಪಡೆಯಲಾಗಿದೆ ಎಂದು ಹೇಳಿದರು.

ಎಂದಿನಂತೆ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತವೆ. ವಾಣಿಜ್ಯ ವಹಿವಾಟಿಗೆ ಯಾವುದೇ ತೊಂದರೆ ಇಲ್ಲ. ಬಲವಂತವಾಗಿ ಬಂದ್‌ ಆಚರಣೆಗೆ ಯತ್ನಿಸಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ನುಡಿದರು.

ಇಂದು ಬಂದ್‌ ಆಗುತ್ತಾ?: ಕೆಲ ಸಂಘಟನೆಗಳ ಬೆಂಬಲ, ಇನ್ನು ಕೆಲವರದು ಇಲ್ಲ!

click me!