ಇಂದಿನ ಕಾಲಘಟ್ಟ ಸನಾತನ ಸಂಸ್ಕೃತಿ ಅಳಿವು-ಉಳಿವಿನ ಸಂದರ್ಭ. ಸನಾತನ ಸದಾ ನಮ್ಮೊಂದಿಗಿದೆ ಎಂದು ನಾವು ಮೈ ಮರೆತು ಕುಳಿತರೆ ಅದರ ಪರಿಣಾಮವನ್ನು ಇನ್ನು ಕೆಲವೇ ದಿನಗಳಲ್ಲಿ ಎದುರಿಸಬೇಕಾದ ಪರಿಸ್ಥಿತಿ ನಮಗೆ ಎದುರಾಗಲಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಹೇಳಿದರು.
ಹುಬ್ಬಳ್ಳಿ (ಅ.13): ಇಂದಿನ ಕಾಲಘಟ್ಟ ಸನಾತನ ಸಂಸ್ಕೃತಿ ಅಳಿವು-ಉಳಿವಿನ ಸಂದರ್ಭ. ಸನಾತನ ಸದಾ ನಮ್ಮೊಂದಿಗಿದೆ ಎಂದು ನಾವು ಮೈ ಮರೆತು ಕುಳಿತರೆ ಅದರ ಪರಿಣಾಮವನ್ನು ಇನ್ನು ಕೆಲವೇ ದಿನಗಳಲ್ಲಿ ಎದುರಿಸಬೇಕಾದ ಪರಿಸ್ಥಿತಿ ನಮಗೆ ಎದುರಾಗಲಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಹೇಳಿದರು. ಗುರುವಾರ ಸಂಜೆ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ತಮ್ಮ ಷಷ್ಟ್ಯಬ್ದ ಅಭಿವಂದನಾ ಕಾರ್ಯಕ್ರಮ ನಿಮಿತ್ತ ಅಖಿಲ ಭಾರತ ಮಾಧ್ವ ಮಹಾಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಸಂತ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ನಮ್ಮ ದೇಶಕ್ಕೆ ಬಂದಂತಹ ಉತ್ತಮ ವಿಚಾಗಳಿಗೆ ನಾವು ಸದಾ ಹೃದಯ ತೆರೆದಿಟ್ಟಿದ್ದೇವೆ. ಇಂದು ನಮ್ಮ ಮನೆ ಮಕ್ಕಳನ್ನೇ ಎಗರಿಸಿಕೊಂಡು ಹೋಗುತ್ತಿದ್ದಾರೆ ಎಂದಾದರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಸನಾತನ ಧರ್ಮ ಕಿತ್ತೆಸೆಯುತ್ತೇವೆ ಎನ್ನುವ ಸಂದರ್ಭದಲ್ಲಿ ನಾವು ಸುಮ್ಮನೆ ಕೂತರೆ ಆಗುವುದಿಲ್ಲ.ಈ ಕುರಿತು ಎಲ್ಲ ಹಿಂದೂಗಳು ಜಾಗೃತರಾಗುವ ಕಾಲ ಬಂದಿದೆ. ಮಕ್ಕಳಿಗೆ ಸಂಸ್ಕೃತಿ ಕಲಿಸಿ: ನ್ಯಾಯಯುತವಾಗಿ ಹೋರಾಟ ಮಾಡಿದಾಗ ನಮಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ಅವಕಾಶ ದೊರೆತಿದೆ.
ರೈತರ ಅನುದಾನಕ್ಕೆ ಸಿದ್ದರಾಮಯ್ಯ ಕತ್ತರಿ: ಜಿ.ಟಿ.ದೇವೆಗೌಡ ಆರೋಪ
ರಾಮಮಂದಿರ ರಾಮಮಂದಿರವಾಗಿ ಉಳಿಯಬೇಕಾದರೆ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಿಚಯ ಮಾಡಬೇಕು. ಇಲ್ಲದಿದ್ದರೆ ಮುಂದೆ ನಮ್ಮ ಮಕ್ಕಳಿಂದಲೇ ನಮ್ಮ ಸಂಸ್ಕೃತಿಗೆ, ರಾಮ ಮಂದಿರಕ್ಕೆ ಅಪಾಯ ಬಂದೊದಗುವ ಆತಂಕವಿದೆ ಎಂದರು. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು, ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯರು, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜ.ಬಸವಜಯ ಮೃತ್ಯುಂಜಯ ಶ್ರೀಗಳು, ವಿಜಯಪುರ ಜ್ಞಾನ ಯೋಗಾಶ್ರಮದ ಬಸವಲಿಂಗ ಶ್ರೀಗಳು, ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯರು ಸೇರಿ ಹಲವು ಸಂತರು ಮಾತನಾಡಿದರು.