ನಿಮ್ನ ನಂಬಕೊಂಡ್ ವೋಟ್ ಹಾಕಿ ತಪ್ಪು ಮಾಡೀವಿ, ಇನ್ಯಾವತ್ತೂ ಕಾಂಗ್ರೆಸ್‌ಗೆ ವೋಟು ಹಾಕಂಗಿಲ್ಲ!

By Ravi Janekal  |  First Published Oct 12, 2023, 8:31 PM IST

ವಿದ್ಯುತ್ ಅಸಮರ್ಪಕ ಪೂರೈಕೆಯಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ತೋರಣಹಳ್ಳಿ ಗ್ರಾಮದಲ್ಲಿ ಕುಡಿಯಲು ನೀರು ಇಲ್ಲ, ಕರೆಂಟು ಇಲ್ಲ. ಗ್ರಾಮಸ್ಥರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.


ಚಿಕ್ಕೋಡಿ (ಅ.12): ವಿದ್ಯುತ್ ಅಸಮರ್ಪಕ ಪೂರೈಕೆಯಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ತೋರಣಹಳ್ಳಿ ಗ್ರಾಮದಲ್ಲಿ ಕುಡಿಯಲು ನೀರು ಇಲ್ಲ, ಕರೆಂಟು ಇಲ್ಲ. ಗ್ರಾಮಸ್ಥರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

 ತೋರಣಹಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳು ಕತ್ತಲೆಯಲ್ಲಿ ಮುಳುಗಿಹೋಗಿವೆ. ಗ್ರಾಮೀಣ ಪ್ರದೇಶದ ಜನರು ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ರಾಜ್ಯದ ಜನರಿಗೆ 200 ಯೂನಿಟ್ ಫ್ರೀ ವಿದ್ಯುತ್ ನೀಡಿ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳಿಗೆ ಕತ್ತಲು ಭಾಗ್ಯ ನೀಡಿದೆ. ಇದೀಗ ಮಳೆಗಾಲದಲ್ಲೇ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ.

Latest Videos

undefined

ಕಾಂಗ್ರೆಸ್ ನಾಯಕರು ಹಸಿದ ತೋಳ, ರಣಹದ್ದುಗಳಂತಾಗಿದ್ದಾರೆ: ಮಾಜಿ ಡಿಸಿಎಂ ಗೋವಿಂದ ಕಾರಜೋಳ ವಾಗ್ದಾಳಿ

ಬೇಸಗೆಗೆ ಮೊದಲೇ ನೀರಿಗೆ ಹಾಹಾಕಾರ! 

ಚಿಕ್ಕೋಡಿ ಉಪವಿಭಾಗದ ಬಹುತೇಕ ಕಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಫಲವಾಗಿದ್ದು, ಗ್ರಾಮದಲ್ಲಿ ಕೊರೆಯಿಸಿದ ಬೋರ್‌ವೆಲ್‌ನಿಂದ ನೀರು ಪಡೆಯಬೇಕೆಂದರೂ ವಿದ್ಯುತ್ ಪೂರೈಕೆ ಬೇಕು. ಆದರೆ ಗ್ರಾಮೀಣ ಪ್ರದೇಶಗಳಿಗೆ ಅಸಮರ್ಪಕವಾಗಿ ವಿದ್ಯುತ್ ಪೂರೈಕೆಯಿಂದಾಗಿ ಬೇಸಿಗೆಗೆ ಮುನ್ನವೇ ಕುಡಿಯುವ ನೀರಿಗೆ ಪರದಾಡುವಂತಾಗಿದೆ.

ತೋರಣಹಳ್ಳಿ ಗ್ರಾಮದಲ್ಲಿ ಬೋರ್‌ವೆಲ್ ಎದುರು ಖಾಲಿ ಕೊಡ ಹಿಡಿದು ಸಾಲುಗಟ್ಟಿ ನಿಂತ ಮಹಿಳೆಯರು. ಈ ಗ್ರಾಮದಲ್ಲಿ ನಾಲ್ಕು ಬೋರ್‌ವೆಲ್ ಇದ್ದರೂ ನೋ ಯೂಸ್.ವಿದ್ಯುತ್ ಇಲ್ಲ, ನೀರೂ ಇಲ್ಲ. ಇನ್ನು 30ಅಡಿ ಬಾವಿ ಇಳಿದು ನೀರು ತರೋದು ಹೇಗೆ?

ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ: ಪ್ರತಿದಿನವೂ ವಿದ್ಯುತ್ ಕೈಕೊಡುತ್ತಿರುವುದರಿಂದ ಕುಡಿಯುವ ನೀರು, ಕೃಷಿ ಪಂಪ್‌ಸೆಟ್‌ಗಳಿಗೆ ನೀರು ಸಿಗದಿರುವುದು ಒಂದೆಡೆಯಾದರೆ ಇನ್ನೊಂದೆಡೆ ಮಕ್ಕಳು ಮನೆಯಲ್ಲಿ ಅಭ್ಯಾಸ ಮಾಡಲು ವಿದ್ಯುತ್ ಇಲ್ಲದಿರುವುದು ತೊಂದರೆಯಾಗಿದೆ. ಕಾಂಗ್ರೆಸ್ ಸರ್ಕಾರ ಬಂದು ಉಚಿತ ವಿದ್ಯುತ್ ಕೊಟ್ಟಾಗಿನಿಂದ ಸಮರ್ಪಕ ವಿದ್ಯುತ್ ಪೂರೈಕೆ ಆಗ್ತಿಲ್ಲ. ಇತ್ತ ಕೃಷ್ಣಾ ನದಿಯಿಂದ ಪೂರೈಕೆಯಾಗುತ್ತಿದ್ದ ಕುಡಿಯುವ ನೀರಿನ ಯೋಜನೆ ಕೂಡ ವಿಫಲವಾಗಿದೆ. ಹೀಗಾದರೆ ನಾವು ನೀರು ಎಲ್ಲಿಂದ ತರಬೇಕು ಎಂದು ಸರ್ಕಾರಕ್ಕೆ ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ನಿಮಗೆ ವೋಟು ಹಾಕಿ ಪಶ್ಚತ್ತಾಪ ಪಡ್ತಿದೀವಿ:

ಮಕ್ಕಳ ವಿದ್ಯಾಭ್ಯಾಸಕ್ಕೆ ಏನಾರ ಮಾಡ್ತೀರಿ ಅಂತಾ ವೋಟು ಹಾಕೀವಿ ಈಗ ವೋಟು ಹಾಕಿ ಪಶ್ಚತ್ತಾಪ ಪಡುವಂಗಾಗ್ಯಾದ. ಮಹಿಳೆಯರಿ ಬಸ್ ಫ್ರೀ ಕೊಟ್ಟಿರಿ. ಅದೇ ಬಸ್ ನಲ್ಲಿ ಮಕ್ಕಳು ಶಾಲೆ ಹೊರಟರ ತಳ್ಳುವುದು ಮಾಡ್ತಾರಾ, ಮಕ್ಕಳು ಶಾಲೆಗೆ ಹೆಂಗ ಹೋಗಬೇಕು, ಮಹಿಳೆಯರಿಗೆ ಬಸ್ ಫ್ರೀ ಬಂದ ಮಾಡಿ ಎಂದು ಆಗ್ರಹಿಸಿರುವ ಗ್ರಾಮಸ್ಥರು.

ಸರಕಾರ ಉಚಿತಗಳ ಭಾಗ್ಯ ನೀಡುವ ಬರದಲ್ಲಿ ರೈತರನ್ನು ಮರೆಯುತ್ತಿದೆ: ರಮೇಶ ಜಾರಕಿಹೊಳಿ

ಇನ್ನೊಂದು ಕಡೆ ಗೃಹಲಕ್ಷ್ಮೀ ಯೋಜನೆಗೆ ದಾಖಲೆ ಮಾಡಿಸಾಕ ಎರಡು ಮೂರು ಸಾವಿರ ರೂಪಾಯಿ ಖರ್ಚು ಮಾಡ್ಕೊಂಡೀವಿ ಆದರೆ ಗೃಹಲಕ್ಷ್ಮೀ ಯೋಜನೆ ಹಣ ಒಂದು ತಿಂಗಳದ್ದು ಬಂತು, ಎರಡನೇ ತಿಂಗಳದ್ದು ಮೂರನೇ ತಿಂಗಳಾಗ್ತಾ ಬಂದ್ರೂ ಇನ್ನೂತನ ಒಂದು ಪೈಸೆ ಬಂದಿಲ್ಲ. ಇನ್ನೂ ಯಾವತ್ತೂ ಕಾಂಗ್ರೆಸ್  ಓಟ ಹಾಕ್ಕಲ್ಲಾ. ಕರೆಂಟ್ ಇಲ್ಲಾ , ನೀರು ಇಲ್ಲಾ, ಬಸ್ ಸೌಲಭ್ಯ ಇಲ್ಲಾ. ನಮಗೆ ಯಾವುದೇ ಸೌಲಭ್ಯ ಇಲ್ಲಾ. ಇನ್ಯಾವತ್ತೂ ಕಾಂಗ್ರೆಸ್ ವೋಟು ಮಾಡಂಗಿಲ್ಲ ಎಂದು ಸರಕಾರದ ವಿರುದ್ಧ ಹರಿಹಾಯ್ದ ಮಹಿಳೆಯರು. 

click me!