ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸುತ್ತೇನೆ. ಎಚ್ಚರಿಕೆಯಿಂದ ಹೆಜ್ಜೆ ಇಡದಿದ್ದರೆ ನಿರ್ಣಯ ಬಿದ್ದು ಹೋಗಬಹುದು. ಹೀಗಾಗಿ, ಮೀಸಲಾತಿ ವಿಚಾರವಾಗಿ ಮೊದಲ ಹೆಜ್ಜೆ ಎಚ್ಚರಿಕೆಯಿಂದ ಇಟ್ಟಿದ್ದೇವೆ. 2ನೇ ಹೆಜ್ಜೆ ಪ್ರಕ್ರಿಯೆ ಆರಂಭವಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಶಾಸನಾತ್ಮಕವಾಗಿ ನ್ಯಾಯ ಒದಗಿಸುತ್ತೇನೆ
ದಾವಣಗೆರೆ (ಜ.14): ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸುತ್ತೇನೆ. ಎಚ್ಚರಿಕೆಯಿಂದ ಹೆಜ್ಜೆ ಇಡದಿದ್ದರೆ ನಿರ್ಣಯ ಬಿದ್ದು ಹೋಗಬಹುದು. ಹೀಗಾಗಿ, ಮೀಸಲಾತಿ ವಿಚಾರವಾಗಿ ಮೊದಲ ಹೆಜ್ಜೆ ಎಚ್ಚರಿಕೆಯಿಂದ ಇಟ್ಟಿದ್ದೇವೆ. 2ನೇ ಹೆಜ್ಜೆ ಪ್ರಕ್ರಿಯೆ ಆರಂಭವಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಶಾಸನಾತ್ಮಕವಾಗಿ ನ್ಯಾಯ ಒದಗಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ..
ಹರಿಹರದಲ್ಲಿ ಪಂಚಮಸಾಲಿ ಸಮುದಾಯದಿಂದ ನಡೆದ ಹರ ಜಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದಕ್ಕೂ ಅಂತರ್ಗತ ಶಕ್ತಿ ಇರತ್ತದೆ. ಆ ಶಕ್ತಿಯನ್ನ ಗೌರವಿಸಬೇಕು. ಯಾರು ಹೆಚ್ಚು, ಯಾರು ಕಮ್ಮಿ ಅನ್ನೋದಕ್ಕಿಂತ ನ್ಯಾಯ ಕೊಡಿಸಬೇಕು. ಸಮಾಜಕ್ಕೆ ಒಳ್ಳೆಯದಾಗಲು ಒಂದಾಗಿ ಹೋಗಬೇಕು. ಮಾತಾಡೋದು ಸುಲಭ, ಆದರೆ, ಜವಾಬ್ದಾರಿ ಸ್ಥಾನದಲ್ಲಿ ನಿಂತ್ಕೊಂಡು ಮಾತಾಡೋದು ಕಷ್ಟ. ನಾವೆಲ್ಲ ಎಷ್ಟು ದಿನ ಇರ್ತಿವೋ ಗೊತ್ತಿಲ್ಲ. ನಾವು ಮಾಡಿದ ಕೆಲಸ ಮುಂದಿನ ಪೀಳಿಗೆಗೆ ಶಾಶ್ವತವಾಗಿ ಉಳಿಯುವಂತೆ ಮಾಡುತ್ತೇವೆ ಎಂದು ಹೇಳಿದರು.
Panchamasali: ಅವನು ಅಪ್ಪನಿಗೆ ಹುಟ್ಟಿಲ್ಲ- ಅವನೊಬ್ಬ ಪಿಂಪ್: ಹೆಸರೇಳದೇ ಯತ್ನಾಳ್ ವಿರುದ್ಧ ಸಚಿವ ನಿರಾಣಿ ಆರೋಪ
ಮೀಸಲಾತಿಯ 2ನೇ ಹೆಜ್ಜೆ ಪ್ರಕ್ರಿಯೆ ಆರಂಭ: ಈಗಾಗಲೇ ಗುಜರಾತ್ , ಹರಿಯಾಣ, ಮಹಾರಾಷ್ಟ್ರ ಹೀಗೆ ಬೇರೆ ಬೇರೆ ಕಡೆ ನಿರ್ಣಯ ಆಗಿ ಬಿದ್ದು ಹೋಗಿದೆ. ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಮೊದಲ ಹೆಜ್ಜೆ ಎಚ್ಚರಿಕೆಯಿಂದ ಇಟ್ಟಿದ್ದೇವೆ. 2ನೇ ಹೆಜ್ಜೆ ಪ್ರಕ್ರಿಯೆ ಆರಂಭವಾಗಿದೆ. ಜೆ.ಪಿ.ಹೆಗಡೆ ಮಧ್ಯಂತರ ವರದಿ ಬಂದ ವಾರದಲೇ ಘೋಷಣೆ ಮಾಡಿದ್ದೇವೆ. ಪಂಚಮಸಾಲಿ ಸಮಾಜಕ್ಕೆ ಶಾಸನಾತ್ಮಕವಾಗಿ ನ್ಯಾಯ ಸಿಗಲಿದೆ. ತರಾತುರಿಯಲ್ಲಿ ಮೀಸಲಾತಿ ಮಾಡಿದರೆ ಸಮಾಜಕ್ಕೆ ಅನ್ಯಾಯ ಆಗತ್ತದೆ. ಎಲ್ಲ ಟೀಕೆಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಯಶಸ್ಸು ಕಾಣುತ್ತೇನೆ. ನಾನು ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸುತ್ತೇನೆ ಎಂದು ಭರವಸೆ ನಿಡಿದರು.
ಅಂತಿಮ ವರದಿ ಬಂದಾಕ್ಷಣ ನ್ಯಾಯ ಸಿಗಲಿದೆ: ಪಂಚಮಸಾಲಿ ರೈತಾಪಿ ವರ್ಗವಾಗಿದೆ. ಅನ್ನ ಕೊಡುವ ವರ್ಗಕ್ಕೆ ನ್ಯಾಯ ಕಲ್ಪಿಸುತ್ತೆನೆ. ನಿಮ್ಮ ಸಾಮಜಿಕ ಪಾಲು ನಿಮಗೆ ತಲುಪಿಸುತ್ತೇನೆ. ಸಾಮಾಜಿಕ ಸಾಮರಸ್ಯ, ಇತರರಿಗೂ ಅನ್ಯಾಯ ಆಗಲು ಬಿಡೋದಿಲ್ಲ. ನಿಮಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇನೆ. ಅಂತಿಮ ವರದಿ ಬಂದ ತಕ್ಷಣ ನಿಮ್ಮ ನಿರೀಕ್ಷೆಗೆ ನ್ಯಾಯ ಒದಗಿಸುತ್ತೇನೆ. ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡ್ತಿದ್ದಾರೆ. ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ನನ್ನ ಕಣ್ಮುಂದೆ ಇರೋದು ಸಮಾಜ ಸಮಾಜಕ್ಕೆ ಅನ್ಯಾಯ ಮಾಡಲ್ಲ ಎಂದು ಪರೋಕ್ಷವಾಗಿ ಜಯಮೃತ್ಯುಂಜಯ ಸ್ವಾಮೀಜಿಗೆ ಟಾಂಗ್ ಕೊಟ್ಟರು. ರಾಜ್ಯದಲ್ಲಿ ಈವರೆಗೆ ರೈತ ವಿದ್ಯಾ ನಿಧಿ ಘೋಷಣೆ ಮಾಡಿದ್ದು, 11 ಲಕ್ಷಕ್ಕೂ ಹೆಚ್ಚು ರೈತರ ಮಕ್ಕಳಿಗೆ ಅನುಕೂಲ ಆಗಿದೆ. ನಮ್ಮ ಸರ್ಕಾರ ರೈತರ ಪರ ಕೆಲಸ ಮಾಡುತ್ತಿದೆ. ಹತ್ತು ಹಲವು ಯೋಜನೆ ಕೊಟ್ಟಿದ್ದೇವೆ. ಆದರೆ, ರಾಜ್ಯದಲ್ಲಿ ಬೇರೆ ಸರ್ಕಾರಗಳು ರೈತರಿಗೆ ಸಹಾಯ ಮಾಡಿದರೆ ತಮಗೆ ಲಾಭ ಇಲ್ಲ ಅಂತ ಸುಮ್ಮಾಗಿದ್ದಾವೆ. ಈ ಬಗ್ಗೆ ಜನರೇ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
Panchamasali: ಮೀಸಲಾತಿ ಹೋರಾಟ ಮುಗಿದು ಹೋದ ಕಥೆ: ಕೆ.ಎಸ್. ಈಶ್ವರಪ್ಪ
ಬೊಮ್ಮಾಯಿ ಅವರ ಮೇಲೆ ವಿಶ್ವಾಸವಿದೆ:
ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಮಾತನಾಡಿ, ಈ ಹಿಂದೆ ಸಾಮಾನ್ಯ ವರ್ಗದಿಂದ ಪಂಚಮಸಾಲಿಗಳನ್ನು ಓಬಿಸಿಗೆ ತರಲಾಗಿದೆ. ಈಗ ಸರ್ಕಾರ 2ಎ ಮೀಸಲಾತಿ ಕೊಡಲು ಮಧ್ಯಂತರ ವರದಿ ತರಿಸಿಕೊಂಡಿದೆ. ಹಿಂದುಳಿದ ವರ್ಗಗಳ ಆಧಾರದ ಮೇಲೆ ಸರ್ಕಾರ 2ಡಿ 2 ಸಿ ಮಾಡಿದೆ. 2ಎ ಸವಲತ್ತುಗಳು 2 ಡಿ 2 ಸಿ ಗಳಲ್ಲಿ ಇವೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ನಮ್ಮ ಸಮುದಾಯಕ್ಕೆ ಮೀಸಲಾತಿ ಬೇಕು ಮೀಸಲಾತಿ ನಮ್ಮ ಹಕ್ಕು. ಬೇರೆ ಸಮಾಜಕ್ಕೆ ಅನ್ಯಾಯವಾಗದಂತೆ ನಮಗೆ ಮೀಸಲಾತಿ ಬೇಕು. ನಂಬಿಕೆ ವಿಶ್ವಾಸದ ಮೇಲೆ ಸಮಾಜ ನಡೆಯುತ್ತಿದೆ. ಬಸವರಾಜ್ ಬೊಮ್ಮಾಯಿ ಅವರ ಮೇಲೆ ನಂಬಿಕೆ ವಿಶ್ವಾಸ ಇದೆ ಎಂದು ತಿಳಿಸಿದರು.