ಬಸವಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚಮಸಾಲಿ ಲಿಂಗಾಯತ ಮೀಸಲಾತಿ ಹೋರಾಟ 15 ನೇ ದಿನಕ್ಕೆ ಕಾಲಿಟ್ಟಿದೆ. ಸುದ್ದಿಗೋಷ್ಠಿ ನಡೆಸಿರುವ ಸ್ವಾಮೀಜಿ ನಾವು ಕೇಳಿರೋದು 2ಎ ಮೀಸಲಾತಿ. 2ಎ ಮೀಸಲಾತಿಗೆ ಸಮನಾಗಿ ಎ ಯಿಂದ Z ವರೆಗೆ ಯಾವುದಾದರೂ ಒಂದು ಮೀಸಲಾತಿ ಕೊಡಿ ಎಂದಿದ್ದಾರೆ.
ಬೆಂಗಳೂರು (ಜ.28): ಬಸವಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚಮಸಾಲಿ ಲಿಂಗಾಯತ ಮೀಸಲಾತಿ ಹೋರಾಟ 15 ನೇ ದಿನಕ್ಕೆ ಕಾಲಿಟ್ಟಿದೆ. ಫ್ರೀಡಂಪಾರ್ಕ್ ನಲ್ಲಿ ಶನಿವಾರ ಬಸವ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿದ್ದು, ಇವತ್ತು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮೀತ್ ಶಾ ಭೇಟಿ ಮಾಡುತ್ತಿದ್ದಾರೆ. ಅವರು ಭೇಟಿ ಮಾಡುತ್ತಿರೋ ಪ್ರದೇಶಗಳೆಲ್ಲ ಪಂಚಮಸಾಲಿ ಸಮೂಹದವರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗಾಗಲೇ ನಾವು ಪ್ರಧಾನಿಗಳು, ಗೃಹಸಚಿವರಿಗೆ ಹಾಗೂ ನಡ್ಡಾ ಅವರಿಗೆ ಪತ್ರ ಬರೆದಿದ್ದೇವೆ. ಇದಕ್ಕೆ ಕಾರಣ ಸಿಎಂ ಬೊಮ್ಮಾಯಿ ಅವರು ಈಗಾಗಲೇ 6 ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ಹೀಗಾಗಿ ಅವರ ಬೆಂಬಲ ಬೇಡ ಎಂದು ಕೇಂದ್ರ ಸರ್ಕಾರದ ಮೊರೆ ಹೋಗಿದ್ದೇವೆ. ಆ ಪತ್ರಕ್ಕೆ ಸಂಬಂಧಪಟ್ಟಂತೆ ಚರ್ಚೆಗಳು ಶುರುವಾಗಿವೆ. ಈ ಮೂಲಕ ಅಮಿತ್ ಶಾ ಅವರಿಗೆ ಮಾನವಿ ಮಾಡಿಕೊಳ್ಳುತ್ತೇವೆ. ಬಿಜೆಪಿಗೆ ಶೇ. 80 ರಷ್ಟು ಬೆಂಬಲವನ್ನ ಈ ಸಮುದಾಯವೇ ನೀಡಿದೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಬಗ್ಗೆ, ರಾಜ್ಯ ಬಿಜೆಪಿ ಮುಖಂಡರು ಹೋರಾಟದ ತೀವ್ರತೆಯ ಬಗ್ಗೆ, ಹೋರಾಟದ ಮುಂದಿನ ಪರಿಣಾಮದ ಬಗ್ಗೆ ನಿಮಗೆ ಮಾಹಿತಿ ಕೊಡಲು ವಿಫಲಗೊಂಡಿದ್ದಾರೆ ಅನಿಸುತ್ತೆ. ಆದ್ದರಿಂದಲೇ ನಾವು ನೇರವಾಗಿ ನಿಮಗೆ ಪತ್ರ ಬರೆದಿದ್ದೇವೆ. ಪತ್ರದಲ್ಲಿ ಸಂಪೂರ್ಣವಾಗಿ ಉಲ್ಲೇಖ ಮಾಡಿದ್ದೇನೆ. ನಾವು ಕೇಳಿರೋದು 2ಎ ಮೀಸಲಾತಿ. 2ಎ ಮೀಸಲಾತಿಗೆ ಸಮನಾಗಿ ಎ ಯಿಂದ Z ವರೆಗೆ ಯಾವುದಾದರೂ ಒಂದು ಮೀಸಲಾತಿ ಕೊಡಿ. ಅಮಿತ್ ಶಾ ಅವರು ಸಿಎಂ ಅವರಿಗೆ ಒತ್ತಡ ಹಾಕಿ ನಮಗೆ ಮೀಸಲಾತಿ ನೀಡಲು ತಿಳಿಸಬೇಕು ಎಂದು ಶ್ರೀಗಳು ಹೇಳಿಕೆ ನೀಡಿದ್ದಾರೆ.
ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮ ಮುನ್ನಲೆಗೆ ಫೆ.26ರಂದು ಸಾಣೇಹಳ್ಳಿ ಮಠದಲ್ಲಿ ಸಮಾವೇಶ
ರಮೇಶ್ ಜಾರಕಿಹೊಳಿ ಈ ಕೂಡಲೇ ಪಂಚಮಸಾಲಿಗಳ ಕ್ಷಮೆಯಾಚಿಸಬೇಕು:
ರಮೇಶ್ ಜಾರಕಿಹೊಳಿ ಮೀಸಲಾತಿ ಯಲ್ಲಿರುವವರನ್ನ ಪಶುಗಳಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿದ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ರಮೇಶ್ ಜಾರಕಿಹೊಳಿ ಈ ಕೂಡಲೇ ಪಂಚಮಸಾಲಿಗಳ ಕ್ಷಮೆಯಾಚಿಸಬೇಕು. ರಮೇಶ್ ಜಾರಕಿಹೊಳಿಯವರು ಮೀಸಲಾತಿ ವಿಚಾರವಾಗಿ ನಮಗೆ ಬೆಂಬಲ ನೀಡಿದ್ದಾರೆ. ಅವರು, ಅವರ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಬೆಂಬಲ ನೀಡಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿ: ವಚನಾನಂದ ಸ್ವಾಮೀಜಿ
ಆದ್ರೆ ಮಾತನಾಡುವ ವೇಳೆ ಮೀಸಲಾತಿ ಹೋರಾಟದಲ್ಲಿರುವವರನ್ನ ಪಶುಗಳಿಗೆ ಹೋಲಿಕೆ ಮಾಡಿದ್ದಾರೆ. ಈ ಹೇಳಿಕೆಯನ್ನ ರಮೇಶ್ ಜಾರಕಿಹೊಳಿ ಕೂಡಲೇ ವಾಪಸ್ಸು ಪಡೆಯಬೇಕು. ಇದ್ರಿಂದಾಗಿ ನಮ್ಮ ಸಮಾಜದಲ್ಲಿರುವವರಿಗೆ ನೋವಾಗಿದೆ. ನನ್ನ ಮೇಲೆ ಸಾಕಷ್ಟು ಒತ್ತಡ ಬರುತ್ತಿದೆ. ಆದ್ರಿಂದ ರಮೇಶ್ ಜಾರಕಿಹೊಳಿ ಅವರ ಮಾತನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.