ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಸಂಬಂಧಿಸಿದಂತೆ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಬೆಂಗಳೂರು, (ಮಾ.09): ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ವಿಚಾರವಾಗಿ ನಮ್ಮ ಬೇಡಿಕೆ ಈಡೇರದಿದ್ರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಸರ್ಕಾರಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಇಂದು (ಮಂಗಳವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಸಿಎಂ ಯಡಿಯೂರಪ್ಪಗೆ ಪಾಪ ಒಂದು ಕಿವಿ ಕೇಳುತ್ತಿಲ್ಲ. ನಮ್ಮವರೇ ಕೆಲವರು ವೇದಿಕೆ ಹತ್ತಿಕೊಂಡು ನಮಗೆ ಮೋಸ ಮಾಡುತ್ತಿದ್ದಾರೆ. ಸಿಎಗೆ ಕೆಲವು ಶಾಸಕರು ಮಿಸ್ ಗೈಡ್ ಮಾಡ್ತಿದ್ದಾರೆ. ಕೆಲವೇ ದಿನಗಳಲ್ಲೇ ಅವರ ಹೆಸರನ್ನ ಬಯಲು ಮಾಡ್ತೇನೆ ಎಂದು ಗರಂ ಆಗಿ ಹೇಳಿದರು.
ಯತ್ನಾಳ್-ಬಿಎಸ್‌ವೈ ಮುಖಾಮುಖಿ: ಉಭಯ ನಾಯಕ ಮಧ್ಯೆ ನಡೀತು ಮಹತ್ವದ ಚರ್ಚೆ
ಸಮುದಾಯದ ಅತೃಪ್ತ, ಅಜ್ಞಾನಿ ಶಾಸಕರಿಂದ ಮೀಸಲಾತಿಗೆ ಹಿಂದೇಟು ಹಾಕುತ್ತಿದ್ದಾರೆ. ನಮ್ಮ ಬೇಡಿಕೆ ಈಡೇರಿಸಲು ಆಗುತ್ತೋ, ಇಲ್ವೋ ಹೇಳಿ. ನಿಮಗೆ ತೊಂದರೆ ಕೊಡೋಕೆ ಇಷ್ಟವಿಲ್ಲ ಎಂದು ಜಯಮೃತ್ಯುಂಜಯ ಸ್ವಾಮೀಜಿ ಸಿಎಂ ಯಡಿಯೂರಪ್ಪಗೆ ಹೇಳಿದರು. ಶಾಸಕ ಯತ್ನಾಳ್ ಹಿಂದುತ್ವದ ಫೈಯರ್ ಬ್ರ್ಯಾಂಡ್ ಎಂದು ಸಹ ಹೇಳಿದರು.
ನಮ್ಮ ಬಲ ಪ್ರದರ್ಶನದ ಮೂಲಕ ಸಿಎಂ ನಮ್ಮ ಒತ್ತಡಕ್ಕೆ ಮಣಿದಿದ್ರು ಅನ್ನೋ ವಿಚಾರ ಗೊತ್ತಾಗಿತ್ತು. ಆದ್ರೆ ನಮ್ಮ ಸಮುದಾಯದ ಕೆಲವು ಶಾಸಕರು ಮೀಸಲಾತಿ ಕೊಡಬೇಡಿ ಅಂತಾ ಹೇಳಿದ್ದಾರಂತೆ. ವಿಜಯೇಂದ್ರ ಕೂಡ ಮೀಸಲಾತಿ ಕೊಡಿ ಅಂತಾ ಬಿಎಸ್‌ವೈ ಚರ್ಚೆ ಮಾಡಿದ್ರು. ಆದ್ರೆ, ನಮ್ಮ ಸಮುದಾಯದ ಕೆಲ ಶಾಸಕರು ಮಿಸ್ ಗೈಡ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.