ಭ್ರಷ್ಟ ಅಧಿಕಾರಿಗಳಿಗೆ ಶಾಕ್: ರಾಜ್ಯದ 28 ಕಡೆ ಎಸಿಬಿ ದಾಳಿ!

Published : Mar 09, 2021, 11:27 AM ISTUpdated : Mar 09, 2021, 11:31 AM IST
ಭ್ರಷ್ಟ ಅಧಿಕಾರಿಗಳಿಗೆ ಶಾಕ್: ರಾಜ್ಯದ 28 ಕಡೆ ಎಸಿಬಿ ದಾಳಿ!

ಸಾರಾಂಶ

ಭ್ರಷ್ಟಾಚಾರ ನಿಗ್ರಹ ದಳ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ|  ಬೆಂಗಳೂರು ಸೇರಿ ರಾಜ್ಯದ 11 ಜಿಲ್ಲೆಗಳ 28 ಕಡೆ ಏಕಕಾಲದಲ್ಲಿ ದಾಳಿ | ಅಕ್ರಮ ಸಂಪತ್ತು ಹೊಂದಿದ ಆರೋಪ 

ಬೆಂಗಳೂರು(ಮಾ.09): ಭ್ರಷ್ಟಾಚಾರ ನಿಗ್ರಹ ದಳ ಎಸಿಬಿ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಬೆಂಗಳೂರು ಸೇರಿ ರಾಜ್ಯದ 11 ಜಿಲ್ಲೆಗಳ 28 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಅಕ್ರಮ ಸಂಪತ್ತು ಹೊಂದಿದ ಆರೋಪ ಹಿನ್ನೆಲೆ ವಿವಿಧ ಇಲಾಖೆಯ ಒಂಭತ್ತು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ.

ಬೆಂಗಳೂರು, ಚಿಕ್ಕಬಳ್ಳಾಪುರ, ಮೈಸೂರು, ದಾವಣಗೆರೆ, ಬೆಳಗಾವಿ, ಯಾದಗಿರಿ, ಕೋಲಾರ, ಉಡುಪಿ, ಮಂಡ್ಯ, ಕಾರವಾರ, ಕನಕಪುರ ಜಿಲ್ಲೆಗಳಲ್ಲಿ ಈ ದಾಳಿಗಳು ನಡೆದಿವೆ. ಅಷ್ಟಕ್ಕೂ ಯಾವೆಲ್ಲಾ ಅಧಿಕಾರಿಗಳ ಮೇಲೆ ದಾಳಿ ನಡೆದಿದೆ? ಇಲ್ಲಿದೆ ವಿವರ

1) ಕೃಷ್ಣೇಗೌಡ, ಪ್ರಾಜೆಕ್ಟ್ ಡೈರೆಕ್ಟರ್, ನಿರ್ಮಿತಿ ಕೇಂದ್ರ ಚಿಕ್ಕಬಳ್ಳಾಪುರ- ಕೋಲಾರದ ಮನೆ, ಚಿಕ್ಕಬಳ್ಳಾಪುರದ ಕಚೇರಿ, ಸಹೋದರರ ಮನೆಗಳಲ್ಲಿ ಶೋಧ. ಎಸ್ ಪಿ ಕಲಾ ಕೃಷ್ಣಮೂರ್ತಿ ನೇತೃತ್ವದಲ್ಲಿ ದಾಳಿ ಪರಿಶೀ

2) ಹನುಮಂತ ಶಿವಪ್ಪ ಚಿಕ್ಕಣ್ಣನವರ, ಡೆಪ್ಯುಟಿ ಚೀಫ್ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ಬೆಳಗಾವಿ-  ಆಧಿಕಾರಿಯ ಮನೆ, ಅಂಕೋಲಾ, ಬೆಳಗಾವಿ ಕಚೇರಿ, ಜಮಖಂಡಿಯ ಹುಟ್ಟೂರು, ಬೆಳಗಾವಿಯ ಫ್ಲಾಟ್ ಗಳ ಮೇಲೆ ದಾಳಿ. ಎಸ್ ಪಿ ನ್ಯಾಮಗೌಡ ನೇತೃತ್ವದಲ್ಲಿ ಎಸಿಬಿ ದಾಳಿ ಪರಿಶೀಲನೆ.

3) ಸುಬ್ರಹ್ಮಣ್ಯ ಕೆ ವಡ್ಡರ್, ಜಂಟಿ ನಿರ್ದೇಶಕರು, ಟೌನ್ ಆಂಡ್ ಕಂಟ್ರಿ ಫ್ಲಾನಿಂಗ್ ಮೈಸೂರು- ಉಡುಪಿಯ ಮನೆ, ಕಾರವಾರದ ತಾಯಿ ಮನೆ, ಮೈಸೂರಿನ ಬಾಡಿಗೆ ಮನೆ ಕಚೇರಿ ಮೇಲೆ ದಾಳಿ. ಎಸ್ ಪಿ ಬೋಪಯ್ಯ ನೇತೃತ್ವದ ಎಸಿಬಿ ತಂಡದಿಂದ ದಾಳಿ ಪರಿಶೀಲನೆ.

4) ಮುನಿ ಗೋಪಾಲರಾಜು, ಸೂಪರಿಂಟೆಂಡೆಂಟ್ ಇಂಜಿನಿಯರ್ ಚೆಸ್ಕಾಂ ಮೈಸೂರು- ಮೈಸೂರು ಕುವೆಂಪುನಗರದ ಚೆಸ್ಕಾಂ ಕಚೇರಿ, ಗೋಕುಲಂನ ನಿವಾಸ, ಕನಕಪುರದ ಹುಟ್ಟೂರಿನ ಮನೆ ಮೇಲೆ ದಾಳಿ.

5) ಚನ್ನವೀರಪ್ಪ, ಎಫ್‌ಡಿಎ ಆರ್ ಟಿಒ ಮೈಸೂರು- ಮಂಡ್ಯದ ಕುವೆಂಪುನಗರ ಮನೆ, ಹುಟ್ಟೂರು ಹಲಕೆರೆಯ ಮನೆ, ಮೈಸೂರು ಲಕ್ಷ್ಮೀಪುರಂ ಕಚೇರಿ ಮೇಲೆ ದಾಳಿ.

6) ರಾಜು ಫತ್ತರ್, ಅಕೌಂಟ್ ಅಪೀಸರ್ ಜೆಸ್ಕಾಂ ಯಾದಗಿರಿ- ಯಾದಗಿರಿ ಮನೆ ಹಾಗೂ ಕಚೇರಿ ಮೇಲೆ ದಾಳಿ ಪರಿಶೀಲನೆ.

7) ವಿಕ್ಟರ್ ಸೈಮನ್, ಪೊಲೀಸ್ ಇನ್ಸ್‌ಪೆಕ್ಟರ್ ಬಿಎಂಟಿಎಫ್- ಬೆಂಗಳೂರಿನ ಕಸವನಹಳ್ಳಿಯ ಮನೆ, ಮೈಸೂರಿನ ತಂದೆಯ ಹಾಗೂ ಮಾವನ ಮನೆ ಮತ್ತು ಬೆಂಗಳೂರಿನ ಬಿಎಂಟಿಎಫ್ ಕಚೇರಿ ಮೇಲೆ ದಾಳಿ ಪರಿಶೀಲನೆ.

8) ಕೆ ಸುಬ್ರಹ್ಮಣ್ಯಂ, ಜೂನಿಯರ್ ಇಂಜಿನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಟೌನ್ ಫ್ಲಾನಿಂಗ್ ಅಫೀಸ್ ಬಿಬಿಎಂಪಿ- ಬೆಂಗಳೂರಿನ ಸಹಕಾರನಗರ ನಿವಾಸ ಮತ್ತು ಯಲಹಂಕ ಕಚೇರಿ ಮೇಲೆ ದಾಳಿ ಪರಿಶೀಲನೆ.

9) ಕೆ ಎಂ ಪ್ರಥಮ್, ಡೆಪ್ಯುಟಿ ಡೈರೆಕ್ಟರ್ ಪ್ಯಾಕ್ಟರಿಸ್ ಆಂಡ್ ಬಾಯ್ಲರೀಸ್ ದಾವಣಗೆರೆ- ಬೆಂಗಳೂರಿನ ಸಂಜಯನಗರ ಬಳಿಯ ನಾಗಶೆಟ್ಟಿಹಳ್ಳಿ ಮನೆ, ಸಂಜಯನಗರದ ಸಹೋದರನ ಮನೆ, ದಾವಣಗೆರೆಯ ಕಚೇರಿ ಮೇಲೆ ದಾಳಿ ಪರಿಶೀಲನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ