ರಾಜಧಾನಿಯಲ್ಲಿ ಪಂಚಮಸಾಲಿ ಪಾಂಚಜನ್ಯ: ಸರ್ಕಾರದಿಂದ ಸಿಗುತ್ತಾ ಭರವಸೆ?

By Suvarna NewsFirst Published Feb 21, 2021, 2:56 PM IST
Highlights

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಪಂಚಮಸಾಲಿ ಬೃಹತ್ ಸಮಾವೇಶ ನಡೆಯುತ್ತಿದೆ. 

ಬೆಂಗಳೂರು (ಫೆ. 21): ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಪಂಚಮಸಾಲಿ ಬೃಹತ್ ಸಮಾವೇಶ ನಡೆಯುತ್ತಿದೆ. 

ಈ ಸಮಾವೇಶಕ್ಕೆ ಆಗಮಿಸಿದ ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಹಾವನೂರು ವರದಿಯನ್ನು ಪರಿಗಣಿಸಿ ವೀರಶೈವರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ್ದಾರೆ. 

"

ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯಿಸಿ, ಸಿಎಂ ಜೊತೆ ಚರ್ಚಿಸಿದ್ದೇನೆ. ಸ್ವಾಮೀಜಿಯವನ್ನು ಚರ್ಚೆಗೆ ಆಹ್ವಾನಿಸಿದ್ದೇವೆ ಎಂದಿದ್ದಾರೆ. 

ಸಮಾವೇಶದಲ್ಲಿ ಭಾಗಿಯಾದ ಸಚಿವ ಸಿಸಿ ಪಾಟೀಲ್, ಸರ್ಕಾರಕ್ಕೆ ತನ್ನದೇ ಆದ ಇತಿಮಿತಿಗಳಿವೆ. ಚೌಕಟ್ಟಿದೆ. ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಅಗುವುದಿಲ್ಲ. ನಾವಿದನ್ನು ಅರ್ಥ ಮಾಡಿಸುತ್ತೇವೆ ಎಂದಿದ್ದಾರೆ. 

ಸಮಾವೇಶದಲ್ಲಿ ಮುರುಗೇಶ್ ನಿರಾಣಿ ಭಾಗಿಯಾಗಿ, ಮೀಸಲಾತಿಗಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. 

ಹೋರಾಟದ ನೇತೃತ್ವ ವಹಿಸಿರುವ ಜಯ ಮೃತ್ಯುಂಜಯ ಸ್ವಾಮೀಜಿ ಜನರನ್ನುದ್ದೀಶಿಸಿ ಮಾತನಾಡಿದ್ದಾರೆ. 

ವಚನಾನಂದ ಶ್ರೀಗಳು ಜನರಿಗೆ ಕರೆ ಕೊಟ್ಟಿದ್ದು ಹೀಗೆ 

 

click me!