ಕಾಂಗ್ರೆಸ್ ಸರ್ಕಾರದಲ್ಲಿ ಪಂಚಮಸಾಲಿ ಮೀಸಲಾತಿಗೆ ವೇಗ ಸಿಗುತ್ತಿಲ್ಲ; ಸಚಿವೆ ಹೆಬ್ಬಾಳ್ಕರ್ ಮುಂದೆಯೇ ಶ್ರೀಗಳ ಅಸಮಾಧಾನ

By Ravi Janekal  |  First Published Oct 29, 2023, 7:08 PM IST

ಕಾಂಗ್ರೆಸ್ ಸರ್ಕಾರದಲ್ಲಿ ಪಂಚಮಸಾಲಿ ಮೀಸಲಾತಿಗೆ ವೇಗ ಸಿಗುತ್ತಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಂದೆಯೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.


ಹಾವೇರಿ (ಅ.29): ಕಾಂಗ್ರೆಸ್ ಸರ್ಕಾರದಲ್ಲಿ ಪಂಚಮಸಾಲಿ ಮೀಸಲಾತಿಗೆ ವೇಗ ಸಿಗುತ್ತಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಂದೆಯೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಇಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸಾವಸಗಿ ಗ್ರಾಮದ ವೀರರಾಣಿ ಚೆನ್ನಮ್ಮ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶ್ರೀಗಳು, ಕುರುಬ ಸಮಾಜದವರು ಸಿಎಂ ಆಗಿದಕ್ಕೆ ಅವರ ಸಮಾಜಕ್ಕೆ ಮೀಸಲಾತಿಗೆ ಅನಕೂಲ ಕಲ್ಪಿಸಿಕೊಟ್ಟಿದ್ದಾರೆ. ಡಿ.ಕೆ‌. ಶಿವಕುಮಾರ್ ಡಿಸಿಎಂ ಆಗಿ ಕುಂಚಿಟಗರಿಗೆ ಮೀಸಲಾತಿ ನೀಡಲು ಮುಂದಾಗಿದ್ದಾರೆ. ಆದ್ರೆ ನಮ್ಮ ಮತ್ತು ಮರಾಠ ಸಮಾಜದವರ ಮೀಸಲಾತಿ ವಿಚಾರ ಎಲ್ಲಿತ್ತೋ ಅಲ್ಲೆ ಇದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಚಿವರ ಮುಂದೆಯೇ ಅಸಮಾಧಾನ ವ್ಯಕ್ತಪಡಿಸಿದರು.

Tap to resize

Latest Videos

ಕರ್ನಾಟಕ 'ಬಸವನಾಡು' ಅಂತಾದ್ರೆ ಬಸವ ವಿಚಾರ ಜಗತ್ತಿಗೆ ಇನ್ನಷ್ಟು ಪ್ರಚಾರ : ಬಸವ ಜಯಮೃತ್ಯುಂಜಯ ಸ್ವಾಮೀಜಿ

click me!