ವಾಲ್ಮೀಕಿ ಹಗರಣ: ಕನ್ನಡದ ಕೋಟ್ಯಧಿಪತಿಯಲ್ಲಿ 50 ಲಕ್ಷ ಗೆದ್ದಿದ್ದ ಪಂಪಣ್ಣಗೆ ಈಗ ಇ.ಡಿ. ಉರುಳು

By Kannadaprabha News  |  First Published Jul 12, 2024, 10:25 AM IST

ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರ ಆಪ್ತ ಸಹಾಯಕರಾಗಿದ್ದ ಪಂಪಣ್ಣ ಹೆಸರು ಇದೀಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ತಳಕು ಹಾಕಿಕೊಂಡಿದೆ.


ರಾಯಚೂರು(ಜು.12): ಡಾ.ಪುನೀತ್ ರಾಜ್‌ಕುಮಾ‌ರ್ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ 50 ಲಕ್ಷ ರು.ಗೆದ್ದು ರಾಜ್ಯದ ಗಮನ ಸೆಳೆದಿದ್ದ, ತೀರಾ ಬಡ ಹಿನ್ನೆಲೆಯಿಂದ ಬಂದು ಪಿಡಿಓ ಆಗಿ ನೇಮಕಗೊಂಡಿದ್ದ ರಾಯಚೂರು ಮೂಲದ ಪಂಪಣ್ಣ ಹೆಸರು ಇದೀಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಕೇಳಿ ಬರುತ್ತಿದೆ.

ರಾಜ್ಯ ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿರುವ ಈ ಹಗರಣದಲ್ಲಿ ಪಂಪಣ್ಣ ಅವರು ಜಾರಿ ನಿರ್ದೇ ಶನಾಲಯ(ಇ.ಡಿ.)ದಿಂದಲೂ ವಿಚಾರಣೆಗೆ ಒಳಗಾಗಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅರಕೇರಾ ತಾಂಡಾದ ಪಂಪಣ್ಣ ರಾಥೋಡ್, ಸಣ್ಣ ವಯಸ್ಸಿನಿಂದಲೂ ಬಡತನದ ಬೇಗೆಯಲ್ಲಿ ಬೆಂದು ಬೆಳೆದವರು. ಸ್ಮಶಾನದ ಸಮಾಧಿಗಳ ಮೇಲೆ ಇಟ್ಟ ಎಡೆಯನ್ನೇ ತಿಂದು ಕಷ್ಟಪಟ್ಟು ಓದಿ ಶಿಕ್ಷಕರಾಗಿ ನೇಮಕಗೊಂಡಿದ್ದ ಪಂಪಣ್ಣ ರಾಥೋಡ್ ಅವರು ಪ್ರತಿಭಾವಂತರು. ಅವರನ್ನು ಪಂಪಣ್ಣ ಮಾಸ್ತ‌ರ್ ಎಂದೇ ಜನ ಕರೆಯುತ್ತಿದ್ದರು. 

Tap to resize

Latest Videos

undefined

Breaking: ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ

2012ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡಾ.ಪುನೀತ್ ರಾಜಕುಮಾರ್ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿ 50 ಲಕ್ಷ ರು. ಗೆದ್ದು ಇಡೀ ರಾಜ್ಯದ ಗಮನ ಸೆಳೆದಿದ್ದರು. ಬಳಿಕ ಶಿಕ್ಷಕ ಹುದ್ದೆ ತೊರೆದು ಪಿಡಿಒ ಆಗಿ ನೇಮಕಗೊಂಡಿದ್ದ ಪಂಪಣ್ಣ 2014ರಲ್ಲಿ ಸಂಸದರಾಗಿದ್ದ ಬಿ.ವಿ.ನಾಯಕ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು.

ಕಳೆದ ಅವಧಿಯಲ್ಲಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರ ಆಪ್ತ ಸಹಾಯಕರಾಗಿದ್ದ ಪಂಪಣ್ಣ ಹೆಸರು ಇದೀಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ತಳಕು ಹಾಕಿಕೊಂಡಿದೆ.

click me!