ಭಾರೀ ಮಳೆ: ಕರ್ನಾಟಕದ ಡ್ಯಾಂಗಳಲ್ಲಿ ಕಳೆದ ಸಲಕ್ಕಿಂತ ಈ ಬಾರಿ ಶೇ.25 ಹೆಚ್ಚು ನೀರು

By Kannadaprabha News  |  First Published Jul 12, 2024, 6:00 AM IST

ಕರಾವಳಿ, ಮಲನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಜುಲೈ ತಿಂಗಳ ಆರಂಭದಿಂದಲೂ ಭಾರೀ ಮಳೆ ಸುರಿಯುತ್ತಿದೆ. ಇದರಿಂದಾಗಿ ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. 


ಬೆಂಗಳೂರು(ಜು.12):  ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಹೆಚ್ಚುತ್ತಿದ್ದಂತೆ ಜಲಾಶಯಗಳ ಒಳಹರಿವು ಹೆಚ್ಚಾಗಿದ್ದು, ನೀರಿನ ಪ್ರಮಾಣದ  ಏರಿಕೆಯಾಗಿದೆ. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಈ ಬಾರಿ ಜಲಾಶಯಗಳಲ್ಲಿ ಶೇ. 25ರಷ್ಟು ಹೆಚ್ಚಿನ ನೀರು ಸಂಗ್ರಹವಾಗಿದೆ. 

ಕರಾವಳಿ, ಮಲನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಜುಲೈ ತಿಂಗಳ ಆರಂಭದಿಂದಲೂ ಭಾರೀ ಮಳೆ ಸುರಿಯುತ್ತಿದೆ. ಇದರಿಂದಾಗಿ ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. 

Latest Videos

undefined

ವರುಣನ ಅಬ್ಬರಕ್ಕೆ ಕಂಗೆಟ್ಟ ಕರಾವಳಿ, ಮಲೆನಾಡು: ಇನ್ನೂ 5 ದಿನ ಗಾಳಿ ಸಹಿತ ಭಾರೀ ಮಳೆ

ಜು. 11ಕ್ಕೆ ಕೃಷ್ಣಾ ಮತ್ತು ಕಾವೇರಿ ಕೊಳ್ಳದ 20 ಜಲಾಶಯಗಳಲ್ಲಿ 192.93 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆಯಾಗಿದ್ದು, ಶೇ. 36.25ರಷ್ಟು ಭರ್ತಿಯಾಗಿದೆ. ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ 47.59 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆಯಾಗಿದ್ದು, ಶೇ. 46ರಷ್ಟು ಭರ್ತಿಯಾಗಿದೆ. ಅದೇ ರೀತಿ ಕೃಷ್ಣಾ ಕೊಳ್ಳದ 16 ಜಲಾಶಯಗಳಲ್ಲಿ 145.34 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆಯಾಗಿ, ಶೇ. 34ರಷ್ಟು ಭರ್ತಿಯಾಗಿದೆ.

click me!