ಹಳೆ ವಾಹನಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ನಂ.1!

By Kannadaprabha News  |  First Published Mar 29, 2021, 7:17 AM IST

ಹಳೆ ವಾಹನಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ನಂ.1| ದೇಶದಲ್ಲಿವೆ 15 ವರ್ಷ ಮೀರಿದ 4 ಕೋಟಿ ವಾಹನ| ಕರ್ನಾಟಕದಲ್ಲೇ 70 ಲಕ್ಷ ವಾಹನಗಳ ಸಂಚಾರ: ಸಾರಿಗೆ ಸಚಿವಾಲಯ|  ಹಳೆಯ ವಾಹನಗಳಿಗೆ ಫಿಟ್‌ನೆಸ್‌ ಪರೀಕ್ಷೆ ವೇಳೆ 10%ರಿಂದ 25% ಹಸಿರು ತೆರಿಗೆ| ಎಲೆಕ್ಟ್ರಿಕ್‌, ಗ್ಯಾಸ್‌ ವಾಹನಗಳಿಗೆ ವಿನಾಯಿತಿ


ನವದೆಹಲಿ(ಮಾ.29): 15 ವರ್ಷಕ್ಕಿಂತ ಹಳೆಯದಾದ 4 ಕೋಟಿಗೂ ಹೆಚ್ಚು ವಾಹನಗಳು ದೇಶಾದ್ಯಂತ ಸಂಚಾರ ಸ್ಥಿತಿಯಲ್ಲಿದ್ದು, ಈ ಪೈಕಿ 70 ಲಕ್ಷಕ್ಕೂ ಹೆಚ್ಚು ವಾಹನಗಳೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯೊಂದು ತಿಳಿಸಿದೆ.

ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಳೆಯ ವಾಹನಗಳ ಮೇಲೆ ಹಸಿರು ತೆರಿಗೆ ವಿಧಿಸುವ ಯೋಜನೆಯೊಂದನ್ನು ಕೇಂದ್ರ ಸರ್ಕಾರ ರೂಪಿಸಿದೆ. ಈ ಪ್ರಸ್ತಾಪವನ್ನು ಅದು ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದು, ಅದರ ಬೆನ್ನಲ್ಲೇ ಇಂಥ ತೆರಿಗೆ ವ್ಯಾಪ್ತಿಗೆ ಒಳಪಡುವ ವಾಹನಗಳ ರಾಜ್ಯವಾರು ಪಟ್ಟಿಯನ್ನು ಬಿಡುಗಡೆ ಮಾಡಿದೆ.

Latest Videos

undefined

15 ವರ್ಷಕ್ಕಿಂತ ಹಳೆ ವಾಹನ ಮಾಲಿಕರಿಗೆ ಬಿಗ್ ಶಾಕ್ : ಭಾರಿ ದುಬಾರಿ ಶುಲ್ಕ

ಕೇಂದ್ರೀಕೃತ ‘ವಾಹನ್‌’ ದತ್ತಾಂಶಗಳ ಅನ್ವಯ, 15 ವರ್ಷಕ್ಕೂ ಹಳೆಯದಾದ 4 ಕೋಟಿಗೂ ಹೆಚ್ಚಿನ ವಾಹನಗಳು ಸದ್ಯ ದೇಶಾದ್ಯಂತ ಸಂಚರಿಸುತ್ತಿವೆ. ಈ ಪೈಕಿ 2 ಕೋಟಿ ವಾಹನಗಳು 20 ವರ್ಷಕ್ಕಿಂತ ಹಳೆಯವು. 4 ಕೋಟಿ ವಾಹನಗಳ ಪೈಕಿ 70 ಲಕ್ಷಕ್ಕೂ ಹೆಚ್ಚು ಹಳೆಯ ವಾಹನಗಳೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಉತ್ತರಪ್ರದೇಶ (56.54 ಲಕ್ಷ), ದೆಹಲಿ (49.93 ಲಕ್ಷ), ಕೇರಳ (34.64 ಲಕ್ಷ), ತಮಿಳುನಾಡು (33.43 ಲಕ್ಷ), ಪಂಜಾಬ್‌ (25.83 ಲಕ್ಷ), ಪಶ್ಚಿಮ ಬಂಗಾಳ (22.69 ಲಕ್ಷ) ವಾಹನಗಳನ್ನು ಹೊಂದಿವೆ. ಇನ್ನು ಮಹಾರಾಷ್ಟ್ರ, ಒಡಿಶಾ, ಗುಜರಾತ್‌, ರಾಜಸ್ಥಾನ ಮತ್ತು ಹರ್ಯಾಣ ರಾಜ್ಯಗಳು ಸರಾಸರಿ 18ರಿಂದ 13 ಲಕ್ಷದಷ್ಟುವಾಹನ ಹೊಂದಿವೆ.

ಹಸಿರು ತೆರಿಗೆ:

8 ವರ್ಷಕ್ಕಿಂತ ಹಳೆಯ ಸಾರಿಗೆ ವಾಹನಗಳು, 15 ವರ್ಷ ಮೇಲ್ಪಟ್ಟಖಾಸಗಿ ವಾಹನಗಳಿಗೆ ಫಿಟ್‌ನೆಸ್‌ ಪರೀಕ್ಷೆ ವೇಳೆ ರಸ್ತೆ ತೆರಿಗೆಯ ಶೇ.10ರಿಂದ ಶೇ.25ರಷ್ಟುಹಸಿರು ತೆರಿಗೆ ವಿಧಿಸಲಾಗುವುದು. ಆದರೆ ಸಾರ್ವಜನಿಕ ಸಾರಿಗೆ ಬಸ್‌ಗಳಿಗೆ ತೆರಿಗೆ ಪ್ರಮಾಣ ಕಡಿಮೆ ಇರಲಿದೆ. ಹೆಚ್ಚಿನ ಮಾಲಿನ್ಯ ಇರುವ ನಗರಗಳಲ್ಲಿ ತೆರಿಗೆ ಪ್ರಮಾಣ ಶೇ.50ರವರೆಗೂ ಇರಲಿದೆ. ಹೈಬ್ರಿಡ್‌, ಎಲೆಕ್ಟ್ರಿಕ್‌, ಸಿಎನ್‌ಜಿ, ಎಲ್‌ಪಿಜಿ, ಕೃಷಿ ಚಟುವಟಿಕೆಗಳಿಗೆ ಬಳಸುವ ವಾಹನಗಳಿಗೆ ತೆರಿಗೆಯಿಂದ ವಿನಾಯಿತಿ ಇರಲಿದೆ.

2022ರ ಏ.1ರಿಂದ 15 ವರ್ಷ ಹಳೆಯ ಸರ್ಕಾರಿ ವಾಹನಗಳು ರಸ್ತೆಯಿಂದ ಔಟ್‌

ಈ ತೆರಿಗೆ ಯೋಜನೆ ಜೊತೆಗೆ ಹಳೆಯ ವಾಹನಗಳನ್ನು ಬಳಕೆಯಿಂದ ಸ್ವಯಂ ಹಿಂದಕ್ಕೆ ಪಡೆಯುವ ಯೋಜನೆಯನ್ನು ಕೂಡ ಸರ್ಕಾರ ಯೋಜಿಸಿದೆ. ಅದರನ್ವಯ 2022ರ ಏ.1ರಿಂದ 15 ವರ್ಷದಷ್ಟುಹಳೆಯದಾದ ಸರ್ಕಾರಿ ವಾಹನಗಳನ್ನು ಬಳಕೆಯಿಂದ ಹಿಂದಕ್ಕೆ ಪಡೆಯಲಾಗುವುದು.

ಎಲ್ಲಿ ಎಷ್ಟುವಾಹನ?

ಕರ್ನಾಟಕ 70 ಲಕ್ಷ

ಉತ್ತರಪ್ರದೇಶ 56.54 ಲಕ್ಷ

ದೆಹಲಿ 49.93 ಲಕ್ಷ

ಕೇರಳ 34.64 ಲಕ್ಷ

ತಮಿಳುನಾಡು 33.43 ಲಕ್ಷ

ಪಂಜಾಬ್‌ 25.83 ಲಕ್ಷ

ಪಶ್ಚಿಮ ಬಂಗಾಳ 22.69 ಲಕ್ಷ

click me!