ತಮಿಳುನಾಡಿಗೆ ನಿತ್ಯ 2600 ಕ್ಯುಸೆಕ್‌ನಂತೆ 15 ದಿನ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ)ಯು ಕರ್ನಾಟಕಕ್ಕೆ ಶಿಫಾರಸು ಮಾಡಿದೆ. ಅದರಂತೆ ನ.1ರಿಂದ 15ರ ವರೆಗೆ ಕರ್ನಾಟಕವು ಈ ಆದೇಶ ಪಾಲಿಸಬೇಕಿದೆ.
ನವದೆಹಲಿ (ಅ.31): ತಮಿಳುನಾಡಿಗೆ ನಿತ್ಯ 2600 ಕ್ಯುಸೆಕ್‌ನಂತೆ 15 ದಿನ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ)ಯು ಕರ್ನಾಟಕಕ್ಕೆ ಶಿಫಾರಸು ಮಾಡಿದೆ. ಅದರಂತೆ ನ.1ರಿಂದ 15ರ ವರೆಗೆ ಕರ್ನಾಟಕವು ಈ ಆದೇಶ ಪಾಲಿಸಬೇಕಿದೆ.
ದೆಹಲಿಯಲ್ಲಿ ಸೋಮವಾರ ನಡೆದ ಸಿಡಬ್ಲ್ಯುಆರ್‌ಸಿ ನಡೆಸಿದ ಪರಿಶೀಲನಾ ಸಭೆಯಲ್ಲಿ ಈ ಕುರಿತು ನಿರ್ಧಾರ ಮಾಡಲಾಗಿದೆ.
ರಾಜ್ಯದಲ್ಲಿರುವ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಿಗೆ ನೀರಿನ ಒಳಹರಿವಿನ ಪ್ರಮಾಣ ಸಂಪೂರ್ಣ ಸ್ಥಗಿತಗೊಂಡಿದೆ. ಇಂಥ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಸಾಧ್ಯವಿಲ್ಲ ಎಂದು ಕರ್ನಾಟಕದ ಅಧಿಕಾರಿಗಳು ಸಭೆಯ ವೇಳೆ ಗಮನಕ್ಕೆ ತಂದಿದ್ದಾರೆ. ಆದರೆ, ತಮಿಳುನಾಡು ಅಧಿಕಾರಿಗಳು ಮಾತ್ರ ನಿತ್ಯ 13 ಸಾವಿರ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಸಿಡಬ್ಲ್ಯುಆರ್‌ಸಿಯು ನಿತ್ಯ 2600 ಕ್ಯುಸೆಕ್ ನೀರು ಹರಿಸುವಂತೆ ಶಿಫರಾಸು ಮಾಡಿದೆ.
ನಾನು ಹೋರಾಟ ಶುರು ಮಾಡಿದಾಗ ನೀವು ಯಾರೂ ಹುಟ್ಟೇ ಇರಲಿಲ್ಲ: ಕಮಿಷನರ್ ವಿರುದ್ಧ ವಾಟಾಳ್ ಗರಂ!
ಸಿಡಬ್ಲ್ಯುಆರ್‌ಸಿಯು ಈ ಹಿಂದೆ ಕರ್ನಾಟಕವು ಸೆ.28ರಿಂದ ಅ.15ರ ವರೆಗೆ ನಿತ್ಯ 5 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಶಿಫಾರಸು ಮಾಡಿತ್ತು.
ಕಾವೇರಿ ನದಿಗೆ ಇಳಿದು ರೈತ ಮುಖಂಡರು ಪ್ರತಿಭಟನೆ:
ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಮತ್ತೆ ಮುಂದಿನ 15 ದಿನಗಳ ವರೆಗೆ ಪ್ರತಿ ನಿತ್ಯ 2600 ಕ್ಯುಸೆಕ್ ನೀರು ಹರಿಸಬೇಕು ಎಂಬ ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಖಂಡಿಸಿ ಪಟ್ಟಣದಲ್ಲಿ ರೈತರು ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದರು.
ಭೂಮಿತಾಯಿ ಹೋರಾಟ ಸಮಿತಿಯಿಂದ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ರೈತರು ಅರೆಬೆತ್ತಲೆಯಾಗಿ ಪಟ್ಟಣದ ಸ್ನಾನಘಟ್ಟ ಬಳಿಯ ಕಾವೇರಿ ನದಿಗಿಳಿದು ಕಾವೇರಿ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ರಾಜ್ಯದ ಹಿತವನ್ನು ಕಾಪಾಡಲು ಸರ್ಕಾರ ಮುಂದಾಗದೇ ತಮಿಳುನಾಡಿನ ಓಲೈಕೆಗಾಗಿ ಕಾವೇರಿ ನಿರ್ವಹಣಾ ಮಂಡಳಿ ಪ್ರಾಧಿಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ನ್ಯಾಯ ಸಮ್ಮತವಲ್ಲದ ಈ ಆದೇಶವನ್ನು ಧಿಕ್ಕರಿಸುವ ತಾಕತ್ತು ಸರ್ಕಾರಕ್ಕಿಲ್ಲ ಎಂದು ಕಿಡಿಕಾರಿದರು.
ಕಾವೇರಿ ಜಲ ವಿವಾದ: ಇಂದು ವಾಟಾಳ್ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ
ಕಾವೇರಿ ನೀರಿನ ವಿಷಯದಲ್ಲಿ ರಾಜ್ಯದ ಶಾಸಕರು ಮತ್ತು ಸಂಸದರು ಧ್ವನಿಯೆತ್ತಬೇಕು. ರಾಜ್ಯದಲ್ಲಿನ ನೀರಿನ ಸಂಗ್ರಹ ಹಾಗೂ ಮಳೆಯ ಪ್ರಮಾಣದ ಬಗ್ಗೆ ಸೂಕ್ತ ದಾಖಲಾತಿ ನೀಡುವಲ್ಲಿ ರ್ಕಾರ ವಿಫಲವಾಗಿದೆ ಧಿಕ್ಕಾರದ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಮಹಾದೇವು, ಜಗದೀಶ್, ಮಹೇಶ್, ರವಿ ಲಕ್ಷ್ಮಣ, ಮಹಾಲಿಂಗು, ಸಿದ್ದೇಗೌಡ, ಅಚ್ಚಪ್ಪನ ಕೊಪ್ಪಲು ಕೃಷ್ಣ, ರಾಮಚಂದ್ರು, ಕೆಂಪೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.