
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಜ.11) : ದ್ವೇಷ ಭಾಷಣ ಮಾಡುವುದಕ್ಕಾಗಿ ದ್ವೇಷ ಭಾಷಣ ಮಸೂದೆಯನ್ನು ವಿಪಕ್ಷಗಳು ವಿರೋಧಿಸುತ್ತಿವೆಯೇ ಎಂದು ವಿರಾಜಪೇಟೆ ಶಾಸಕ, ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ವಿಪಕ್ಷಗಳಿಗೆ ಪ್ರಶ್ನಿಸಿದ್ದಾರೆ.
ದ್ವೇಷ ಭಾಷಣ ಮಸೂದೆಗೆ ಅಂಕಿತ ಹಾಕದಂತೆ ವಿಪಕ್ಷಗಳು ರಾಜ್ಯಪಾಲರಿಗೆ ಮನವಿ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಅವರು ದ್ವೇಷ ಭಾಷಣ ಮಸೂದೆಯನ್ನು ವಿರೋಧ ಪಕ್ಷಗಳು ಯಾಕೆ ವಿರೋಧಿಸುತ್ತಿವೆ. ಅಂದರೆ ದ್ವೇಷ ಭಾಷಣ ಮಾಡಬೇಕು ಅಂತಲೇ ಎಂದಿದ್ದಾರೆ. ರಾಜ್ಯಪಾಲರು ಅದಕ್ಕೆ ಇನ್ನೂ ಅಂಗೀಕಾರ ಮಾಡಿಲ್ಲ. ಅದಕ್ಕಾಗಿ ನಾವು ಕಾಯುತ್ತಿದ್ದೇವೆ. ದ್ವೇಷ ಭಾಷಣ ಮಸೂದೆ ಅಧಿವೇಶನದಲ್ಲಿ ಚರ್ಚೆ ಆಯ್ತು. ಆದರೆ ವಿಪಕ್ಷಗಳ ಕೆಲವು ಸದಸ್ಯರು ಸದನದ ಬಾವಿಗೆ ಬಂದರು, ಇನ್ನು ಕೆಲವರು ಹೊರಗೆ ಹೋದರು. ಅಂದರೆ ವಿರೋಧ ಪಕ್ಷದವರು ವಿರೋಧ ಪಕ್ಷವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಏನೇ ವಿರೋಧ ಇದ್ದರೂ ವಿಧಾನಸಭೆ ಒಳಗೆ ಚರ್ಚೆ ಆಗಬೇಕಾಗಿತ್ತು. ಇವರು ಯಾಕೆ ಸರಿಯಾಗಿ ಚರ್ಚೆ ಮಾಡಲಿಲ್ಲ. ವಿರೋಧ ಪಕ್ಷದಲ್ಲಿ ನಾಲ್ಕೈದು ಗುಂಪುಗಳಾಗಿವೆ. ಅವರವರಲ್ಲಿಯೇ ತೀರ್ಮಾನ ಆಗುತ್ತವೆ. ವಿರೋಧ ಪಕ್ಷದ ನಾಯಕರ ಮಾತಿಗೆ ಅವರಲ್ಲಿಯೇ ಬೆಲೆ ಇಲ್ಲ ಎಂದರು.
ದ್ವೇಷ ಭಾಷಣ ಕಾಯ್ದೆ ಜಾರಿಗೆ ಬಂದರೆ ನಾರಾ ಭರತ್ ರೆಡ್ಡಿ ಜನಾರ್ಧನ ರೆಡ್ಡಿ ಅವರ ಮನೆ ಸುಟ್ಟು ಹಾಕುತ್ತೇವೆ ಎಂದಿರುವುದಕ್ಕೆ ಅವರ ಮೇಲೆ ಮೊದಲು ಕ್ರಮ ಆಗಬೇಕು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಮೊದಲು ರಾಜ್ಯಪಾಲರು ಕಾಯ್ದೆಗೆ ಅಂಗಿಕಾರ ಕೊಡಲಿ. ಕಾಯ್ದೆ ಅನ್ವಯ ಅವರು ಮಾತನಾಡಿರುವುದು ತಪ್ಪಾಗಿದ್ದರೆ ಕ್ರಮ ಆಗುತ್ತದೆ ಎಂದರು. ಇನ್ನು ವಿವಿಧ ಕಾರ್ಯಕ್ರಮ ಬಗ್ಗೆ ಮಾತನಾಡಿದ ಅವರು ಜನವರಿ 26 ರ ನಂತರ ಯಾವುದೇ ಕಾರ್ಯಕ್ರಮ ಇಟ್ಟುಕೊಳ್ಳದಂತೆ ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ ಎಂದು ಅವರ ಕಾನೂನು ಸಲಹೆಗಾರರಾದ ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಮಡಿಕೇರಿಯಲ್ಲಿ ಹೇಳಿದ್ದಾರೆ.
ರಿಪಬ್ಲಿಕ್ ಡೇ ಅದ ಮೇಲೆ ಯಾವ ಕಾರ್ಯಕ್ರಮ ಇಟ್ಟುಕೊಳ್ಳಬೇಡಿ ಎಂದು ಸೂಚನೆ ನೀಡಿದ್ದಾರೆ. ಸಿಎಂ ಬಜೆಟ್ ಮೀಟಿಂಗ್ ನಡೆಸಲ್ಲಿದ್ದಾರೆ ಎಂದಿದ್ದಾರೆ. ಕೊಡಗಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಅವರು, ಈಗಾಗಲೇ ಸುಮಾರು ಅಭಿವೃದ್ಧಿ ದೃಷ್ಟಿಯಿಂದ ಹಣವನ್ನು ನೀಡಿದ್ದಾರೆ. ಆದರೂ ವಿಶೇಷ ಪ್ಯಾಕೇಜ್ ಕೇಳಬೇಕಾಗಿದೆ ಎಂದು ಮಡಿಕೇರಿಯಲ್ಲಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ