ಕರ್ನಾಟಕದ ವನ್ಯಜೀವಿಗಳ ಚಿಕಿತ್ಸೆಗಿರೋದೇ 8 ವೈದ್ಯರು..!

By Kannadaprabha NewsFirst Published Jan 14, 2024, 3:20 PM IST
Highlights

ದೇಶದಲ್ಲೇ ಅತೀ ಹೆಚ್ಚು ಗಜಪಡೆ (6395) ಹೊಂದಿರುವ ಕರ್ನಾಟಕ, ವ್ಯಾಘ್ರಗಳ ಸಂಖ್ಯೆಯಲ್ಲಿ (563) 2ನೇ ಸ್ಥಾನದಲ್ಲಿದೆ. ಚಿರತೆಗಳ ಸಂಖ್ಯೆಯಲ್ಲೂ ಭಾರೀ ಏರಿಕೆಯಾಗಿದೆ. 

ಬೆಂಗಳೂರು(ಜ.14): ಮಾನದ-ವನ್ಯಜೀವಿ ಸಂಘರ್ಷ ತಡೆ, ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ವನ್ಯ ಜೀನು ಪಶುವೈದ್ಯರ ಕೊರತೆ ಆರಣ್ಯ ಇಲಾ ಖೆಗೆ ಸವಾಲೆನಿಸಿದೆ. ಈ ವೈದ್ಯರನ್ನು ಪಶುಸಂಗೋಪನೆ ಇಲಾಖೆಯಿಂದ ನಿಯೋಜಿಸಿಕೊಳ್ಳದೆ ಕಾಯಂ ಹುದ್ದೆ ಸೃಷ್ಟಿಸಬೇಕು, ರಾಜ್ಯದಲ್ಲಿ ವನ್ಯ ಜೀವಿ ಅಧ್ಯಯನ ಕೇಂದ್ರ ಸ್ಥಾಪಿಸಿ ತಜ್ಞರನ್ನು ಹೆಚ್ಚಾಗಿದೆ. ದೇಶದಲ್ಲೇ ಅತೀ ಹೆಚ್ಚು ಗಜಪಡೆ (6395) ಹೊಂದಿರುವ ಕರ್ನಾಟಕ, ವ್ಯಾಘ್ರಗಳ ಸಂಖ್ಯೆಯಲ್ಲಿ (563) 2ನೇ ಸ್ಥಾನದಲ್ಲಿದೆ. ಚಿರತೆಗಳ ಸಂಖ್ಯೆಯಲ್ಲೂ ಭಾರೀ ಏರಿಕೆಯಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಈ ಪ್ರಮಾಣದಲ್ಲಿ ವನ್ಯ ಜೀವಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಅದೇ ಪ್ರಮಾಣದಲ್ಲಿ ಅರಣ್ಯ ವಿಸ್ತರಣೆಯಾಗಿಲ್ಲ, ಹೀಗಾಗಿ ಕಾಡಂಚಿನ ಪ್ರದೇಶ ದಾಟಿಯೂ ವನ್ಯಜೀವಿ ಗಳು ನಗರ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಾನವ- ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ಇನ್ನೊಂದೆಡೆ ಅಪರೂಪದ ಸಿಂಹಬಾಲದ ಸಿಂಗಳೀಕದಂತಹ ಕೋತಿಯ ಪ್ರಭೇದ ಅಪಾಯ ಎದುರಿಸುತ್ತಿದೆ.

ತರಬೇತಿ, ಪರಿಕರ ಇಲ್ಲದೆ ಅರಣ್ಯ ಸಿಬ್ಬಂದಿ ಪರದಾಟ

ಇಂತಹ ಸಂದರ್ಭದಲ್ಲಿ ಸೂಕ್ಷ್ಮ, ಸಂಕೀರ್ಣ ಪಾತ್ರವಹಿಸುವ ವನ್ಯಜೀವಿ ಪಶುವೈದ್ಯರ ಸಂಖ್ಯೆ ಮಾತ್ರ ರಾಜ್ಯದಲ್ಲಿ ನಗಣ್ಯವಾಗಿದೆ. ಕೆಲವು ತುರ್ತು ಸಂದರ್ಭ ಎದುರಾದಾಗ ನೆರೆ ರಾಜ್ಯಗಳಿಂದ ರಾಜ್ಯಗಳಿಂದ ತಜ್ಞಪಶುವೈದ್ಯರನ್ನು ತಜ್ಞ ಕರೆಸಿಕೊಂಡ ಉದಾಹರಣೆಯೂ ಇದೆ. ಸಹಾಯಕ ನಿರ್ದೇಶಕ (ಪಶುವೈದ್ಯ) ಹುದ್ದೆ 1, ಸಹಾಯಕ ಶಸ್ತ್ರಚಿಕಿತ್ಸಕ 5 ಹುದ್ದೆಖಾಲಿ ಇವೆ. ರಾಜ್ಯದ 13 ಅರಣ್ಯ ವೃತ್ತ, 58 ವಿಭಾಗಗಳ ಪೈಕಿ 7-8 ಕಡೆ ಮಾತ್ರ ತಜ್ಞ ವೈದ್ಯರಿದ್ದಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರಕಾರ ಪ್ರತಿ ಅರಣ್ಯ ವ್ಯಾಪ್ತಿಯಲ್ಲಿ ಒಬ್ಬರು ಪಶು ವೈದ್ಯರಿರಬೇಕು. ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ ಗಮನಿಸಿದರೆ ಹುಲಿ ಸಂರಕ್ಷಿತಾರಣ್ಯ, ವನ್ಯಜೀವಿ ಸಂರಕ್ಷಿತಾರಣ್ಯ ಸೇರಿ ರಾಜ್ಯದಲ್ಲಿ ಕನಿಷ್ಠ 40-45 ವನ್ಯಜೀವಿ ಪಶುವೈದ್ಯರ ಅಗತ್ಯವಿದೆ ಎಂದು ವನ್ಯಜೀವಿ ತಜ್ಞರು ಪ್ರತಿಪಾದಿಸುತ್ತಾರೆ.

ಸದ್ಯ ರಾಜ್ಯದಲ್ಲಿ ಪಶುಸಂಗೋಪನೆ ಇಲಾಖೆಯಡಿಯ ವೈದ್ಯರು ನಿಯೋಜನೆ ಮೇರೆಗೆ ಅರಣ್ಯ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಮೂಲಭೂತವಾಗಿ ಇವರಿಗೆ ವನ್ಯ ಜೀವಿಗಳನ್ನು ನಿರ್ವಹಿಸುವ ತಜ್ಞತೆ ಇರಲ್ಲ, ಬದಲಾಗಿ ತಮ್ಮ ಅನುಭವದ ಆಧಾರದಲ್ಲಿ ಸೇವೆ ಸಲ್ಲಿಸುತ್ತಾರೆ. ಇದರಿಂದ ಸಂಘರ್ಷ, ರಕ್ಷಣೆ ಕಾರ್ಯಾಚರಣೆಯಲ್ಲಿ ಎಡವಟ್ಟಾಗುವ ಸಾಧ್ಯತೆ ಇಲ್ಲದಿಲ್ಲ. ಈ ಜಾಗದಲ್ಲಿ ವನ್ಯ ಜೀವಿ ಪಶುವೈದ್ಯರೇ ಇದ್ದರೆ ಸಮರ್ಪಕವಾಗಿ ನಿರ್ವಹಣೆ ಸಾಧ್ಯವಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ರಾಜ್ಯ ಅರಣ್ಯ ಸಿಬ್ಬಂದಿಗೆ ಇನ್ನೂ ಇಲ್ಲ ಪೊಲೀಸ್‌ ರೀತಿ ಕ್ಯಾಂಟೀನ್‌!

ವನ್ಯಜೀವಿ ಅಧ್ಯಯನ ಕೇಂದ್ರ ಅಗತ್ಯ

ಡೆಹ್ರಾಡೂನ್‌ನಲ್ಲಿನ 'ವೈಲ್ಡ್‌ಲೈಫ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ' ಮಾದರಿಯಲ್ಲಿ ರಾಜ್ಯದಲ್ಲಿ ವನ್ಯ ಜೀವಿ ಅಧ್ಯಯನ ಕೇಂದ್ರ ಮಾಡಿದ ವಿದ್ಯಾರ್ಥಿಗಳು ಕನಿಷ್ಠ 3-5 ವರ್ಷ ನಮ್ಮಲ್ಲೇ ಸೇವೆ ಸಲ್ಲಿಸುವಂತೆ ನಿಯಮಾವಳಿ ಸಂರಕ್ಷಣಾವಾದಿ, ಫೀಡ್ ಸಂಸ್ಥಾಪಕ ರಮೇಶ್ ಬೆಳೆಗೆರೆ ಒತ್ತಾಯಿಸಿದ್ದಾರೆ. 

ನೇಮಕಾತಿಗೆ ಪ್ರಸ್ತಾವ

ಹೌದು, ನಮ್ಮ ಇಲಾಖೆಯಲ್ಲಿ ಪಶುವೈದ್ಯರ ಅಗತ್ಯ ಇದೆ. ಇಲಾಖೆಗೆ ಪ್ರತ್ಯೇಕವಾಗಿ ಪಶುವೈದ್ಯರ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. 

click me!