ಈರುಳ್ಳಿ ರೇಟ್ ಕೇಳಿದ್ರೆ ಕಣ್ಣೀರು ಬರೋದು ಪಕ್ಕಾ! ಇನ್ನು ಕೆಲವೇ ದಿನಗಳಲ್ಲಿ ನೂರರ ಗಡಿ ದಾಟುತ್ತೆ

By Kannadaprabha News  |  First Published Oct 27, 2023, 10:40 AM IST

ಪೂರೈಕೆ ಕೊರತೆ ಹಿನ್ನೆಲೆಯಲ್ಲಿ ನಗರದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಕೆಜಿಗೆ ₹60 - 65 ವರೆಗೂ ಮಾರಾಟವಾಗುತ್ತಿದೆ. ಶೀಘ್ರವೇ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನು ವರ್ತಕರು ವ್ಯಕ್ತಪಡಿಸುತ್ತಿದ್ದಾರೆ.


ಬೆಂಗಳೂರು (ಅ.27): ಪೂರೈಕೆ ಕೊರತೆ ಹಿನ್ನೆಲೆಯಲ್ಲಿ ನಗರದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಕೆಜಿಗೆ ₹60 - 65 ವರೆಗೂ ಮಾರಾಟವಾಗುತ್ತಿದೆ. ಶೀಘ್ರವೇ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನು ವರ್ತಕರು ವ್ಯಕ್ತಪಡಿಸುತ್ತಿದ್ದಾರೆ.

ಅನಾವೃಷ್ಟಿಯಿಂದ ಈ ಬಾರಿ ರಾಜ್ಯದಲ್ಲಿ ಈರುಳ್ಳಿ ತೀರಾ ಕಡಿಮೆ ಪ್ರಮಾಣದಲ್ಲಿ ಬೆಳೆದಿರುವುದು, ಪಕ್ಕದ ಮಹಾರಾಷ್ಟ್ರ ಹಾಗೂ ಗುಜರಾತ್‌ನಿಂದಲೂ ಈ ವೇಳೆಗೆ ಈರುಳ್ಳಿ ಪೂರೈಕೆ ಆಗದಿರುವುದ ರಿಂದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಹೀಗೆಯೇ ಮುಂದು ವರಿದರೆ ಶೀಘ್ರವೇ 280- 2100 ತಲುಪಬಹುದು ಎಂದು ವರ್ತಕರು ವಿಶ್ಲೇಷಿಸಿದ್ದಾರೆ.

Tap to resize

Latest Videos

 

ಟೊಮೆಟೋ ಬಳಿಕ ಈರುಳ್ಳಿ ಬೆಲೆ ಏರಿಕೆ ಶಾಕ್‌?

ಗುರುವಾರ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳಪೆ, ಸಾಧಾರಣ ಗುಣಮಟ್ಟದ ಈರುಳ್ಳಿಯೂ ಕ್ವಿಂಟಲ್‌ಗೆ ₹3800-4200 ನಂತೆ ಮಾರಾಟವಾಗಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ ( ನಾಫೆಡ್) ಮೂಲಕ ಬೆಲೆ ನಿಯಂತ್ರಣದ ಉದ್ದೇಶಕ್ಕಾಗಿ ಬೆಂಗಳೂರಿಗೆ ಪೂರೈಸುತ್ತಿರುವ ಈರುಳ್ಳಿಯೂ ಕ್ವಿಂಟಲ್‌ಗೆ ₹4000- 4600 ನಂತೆ ಮಾರಾಟವಾಗಿ ದಾಖಲೆ ಬರೆದಿದೆ. ಅತ್ಯುತ್ತಮ ಎಂದರೆ ಮಹಾರಾಷ್ಟ್ರದ ಈರುಳ್ಳಿ ₹5000 - ₹6000 ವರೆಗೆ ವ್ಯಾಪಾರವಾದ ಮಧ್ಯಗಿದೆ. ಈ ಗುಣಮಟ್ಟದ ಈರುಳ್ಳಿ ಪ್ರಮಾಣ ಕಡಿಮೆ ಇದೆ. ಎನ್ನ

ಸಾಗಾಟ ವೆಚ್ಚ, ಕೂಲಿ, ಮತ್ತಿತರ ಕಾರಣದಿಂದ ಚಿಲ್ಲರೆ ಮಾರು ಪ್ರವ ಕಟ್ಟೆಗೆ ತಲುಪುವ ಹೊತ್ತಿಗೆ ಈರುಳ್ಳಿ ಬೆಲೆ ಮತ್ತಷ್ಟು ಹೆಚ್ಚಾಗುತ್ತಿದೆ. ನಗರದ ಕೆ.ಆರ್.ಮಾರುಕಟ್ಟೆ, ಶೇಷಾದ್ರಿ ಪುರ, ಮಲ್ಲೇಶ್ವರ, ಜಯನಗರ ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆಜಿಗೆ 250- 265 ವರೆಗೆ ಮಾರಾಟವಾಗುತ್ತಿದೆ. ಹಾಪ್‌ಕಾಮ್, ಮಾಲ್‌ಗಳಲ್ಲಿ 25-10 ಹೆಚ್ಚು ಬೆಲೆ ಇದೆ. ಕಳೆದ ಹದಿನೈದು ದಿನಗಳ ಹಿಂದೆ ₹100 3 -4 ಕೆಜಿ ಲಭ್ಯ ವಾಗುತ್ತಿತ್ತು. ಆದರೆ, ಈಗ ಒಂದೂವರೆ ಎರಡು ಕೆಜಿ ಸಿಗುತ್ತಿದೆ

ಕಾರಣವೇನು?: ರಾಜ್ಯದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆ ಎನಿಸಿದ ಯಶವಂತಪುರ ಎಪಿಎಂಸಿಗೆ ಸೀಸನ್ ಇರುವ ಈ ವೇಳೆಗೆ ಕನಿಷ್ಠವೆಂದರೂ ಒಂದು ಲಕ್ಷ ಮೂಟೆ ಈರುಳ್ಳಿ ಬರುತ್ತಿತ್ತು. ಆದರೆ, ಸದ್ಯ 50-55 ಸಾವಿರ ಮೂಟೆಗಳುಮಾತ್ರ ಬರುತ್ತಿವೆ. ಬಾಗಲಕೋಟೆ, ಗದಗ, ವಿಜಯಪುರ ಸೇರಿ ಉತ್ತರ ಕರ್ನಾಟಕ ಭಾಗದಿಂದ ನಿರೀಕ್ಷಿತ ಪ್ರಮಾಣದಷ್ಟು ಬರುತ್ತಿಲ್ಲ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದಲ್ಲೂ ಮಳೆ ಎಳಂಬ ಹಿನ್ನೆಲೆಯಲ್ಲಿ ಅಲ್ಲಿಂದಲೂ ಆವಕ ಕಡಿಮೆಯಾಗಿದೆ. ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್ ಮಧ್ಯಂತರದಿಂದ ಆ ರಾಜ್ಯಗಳಿಂದ ಪೂರೈಕೆ ಆಗಬಹುದು ಎನ್ನಲಾಗಿದೆ. ಸದ್ಯ ಬೆಂಗಳೂರಿಂದ ತಮಿಳುನಾಡು, ಆಂಧ್ರಕ್ಕೆ ಸ್ವಲ್ಪ ಪ್ರಮಾಣದ ಈರುಳ್ಳಿ ರಫ್ತಾಗುತ್ತಿರುವುದು ಬಿಟ್ಟರೆ ಉಳಿದ ದಕ್ಷಿಣ ರಾಜ್ಯಗಳಿಗೆ ಹೋಗುತ್ತಿಲ್ಲ.

 

ಮಂಗಳೂರು ವ್ಯಕ್ತಿಗೆ 75 ಲಕ್ಷ ರು. ವಂಚಿಸಿದ ಸೋಲಾಪುರದ ಈರುಳ್ಳಿ ವ್ಯಾಪಾರಿ

ಸರ್ಕಾರ ನಾಫೆಡ್ ಮೂಲಕ ಹೆಚ್ಚಿನ ಈರುಳ್ಳಿ ಪೂರೈಕೆ ಮಾಡಲು ಆರಂಭಿಸಿದರೆ ಮಾತ್ರ ದರ ನಿಯಂತ್ರಣಕ್ಕೆ ಬರಬಹುದು. ಇಲ್ಲದಿದ್ದರೆ ಮತ್ತಷ್ಟು ಏರುವುದು ಖಚಿತ ಎಂದು ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಬಿ.ರವಿಶಂಕರ್ ತಿಳಿಸಿದರು.

click me!