ರಾಜ್ಯದಲ್ಲಿ ಯಾವ ಸರ್ಕಾರ ಬಂದ್ರೂ ಇವೆರಡು ಖಾತೆ ಒಟ್ಟಿಗಿರಲಿ : ಸುಧಾಕರ್

By Kannadaprabha NewsFirst Published Jan 26, 2021, 8:39 AM IST
Highlights

ರಾಜ್ಯದಲ್ಲಿ  ಯಾವುದೇ ಸರ್ಕಾರ ಬರಲಿ ಆರೋಗ್ಯ ಮತ್ತು  ವೈದ್ಯಕೀಯ ಶಿಕ್ಷಣ ಎರಡನ್ನು ಒಬ್ಬರೆ ನಿರ್ವಹಣೆ ಮಾಡಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು. 

 ಬೆಂಗಳೂರು (ಜ.26):  ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಎರಡೂ ಖಾತೆಗಳು ಒಬ್ಬರ ಬಳಿಯೇ ಇದ್ದರೆ ನಿರ್ವಹಣೆ ಮಾಡುವುದು ಸುಲಭ. ಯಾರಿಗೇ ಕೊಡಲಿ ಆದರೆ ಒಬ್ಬರಿಗೇ ಎರಡೂ ಖಾತೆ ನೀಡಬೇಕು. ಮುಂದೆ ಯಾವುದೇ ಸರ್ಕಾರ ಬಂದರೂ ಹೀಗೆಯೇ ಇರಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಲಸಿಕೆ ಅಭಿಯಾನದ ಹಿನ್ನೆಲೆಯಲ್ಲಿ ಎರಡೂ ಇಲಾಖೆ ಸಮನ್ವಯದಿಂದ ಕೆಲಸ ಮಾಡಬೇಕು. ಯಾರಿಗೇ ಆದರೂ ಕೊಡಲಿ, ಆದರೆ ಒಬ್ಬರಿಗೇ ಖಾತೆ ನೀಡಲಿ. ಕೊರೋನಾ ತಾರ್ಕಿಕ ಅಂತ್ಯ ಕಾಣಲು ಇದು ಶಾಶ್ವತವಾಗಿ ಒಂದಾಗಬೇಕು. ಮುಂದೆ ಯಾವುದೇ ಸರ್ಕಾರ ಬಂದರೂ ಹೀಗೆಯೇ ಇರಬೇಕು ಎಂದು ಅಭಿಪ್ರಾಯಪಟ್ಟರು.

ಬ್ರಿಟನ್‌ ವೈರಸ್‌ ಬಗ್ಗೆ ಯಾವುದೇ ಆತಂಕ ಇಲ್ಲ: ಸಚಿವ ಸುಧಾಕರ್‌ ...

ಖಾತೆಗಳ ಹಂಚಿಕೆ ಪ್ರಹಸನದ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ಕಠಿಣ ಸವಾಲಿದೆ. ಲಭ್ಯವಿರುವ ಖಾತೆಯನ್ನು ಹಂಚುವುದು ಸಾಹಸದ ಕೆಲಸ. ಈಗ ನಮ್ಮ ಮುಂದೆ ಅತಿ ಹೆಚ್ಚು ಜನರಿಗೆ ಲಸಿಕೆ ನೀಡುವ ಸವಾಲಿದೆ. ಅದನ್ನು ಹೇಳುತ್ತಿದ್ದೇನೆ ಎಂದು ಹೇಳಿದರು.

click me!