Ola-Uber Fare: ಓಲಾ, ಉಬರ್‌ಗೆ ದರ ಫಿಕ್ಸ್‌ ಮಾಡಿದ ಸಾರಿಗೆ ಇಲಾಖೆ!

By Santosh NaikFirst Published Nov 25, 2022, 1:30 PM IST
Highlights

ಕೊನೆಗೂ ರಾಜಧಾನಿ ಬೆಂಗಳೂರಿನಲ್ಲಿ ಒಲಾ, ಉಬರ್‌, ರಾಪಿಡೋಗೆ ಸಾರಿಗೆ ಇಲಾಖೆ ದರ ನಿಗದಿ ಮಾಡಿದೆ. ಕೋರ್ಟ್‌ ಸೂಚನೆಯಲ್ಲಿ ಇಲಾಖೆ ದರ ಫಿಕ್ಸ್‌ ಮಾಡಿದ್ದು, ಹೈಕೋರ್ಟ್‌ಗೆ ಇದರ ಆದೇಶ ಪ್ರತಿಯನ್ನು ನೀಡಲಿದೆ.
 

ಬೆಂಗಳೂರು (ನ.25): ರಾಜಧಾನಿ ಬೆಂಗಳೂರಿನಲ್ಲಿ ತಮ್ಮದೇ ದರ್ಬಾರ್‌  ನಡೆಸುತ್ತಿದ್ದ ಅಗ್ರಿಗೇಟರ್ಸ್‌ ಕಂಪನಿಗಳಾದ ಒಲಾ, ಉಬರ್‌ ಹಾಗೂ ರಾಪಿಡೋ ಅಟೋಗಳಿಗೆ ನೂತನ ದರ ಫಿಕ್ಸ್‌ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಹೈಕೋರ್ಟ್‌ ಸೂಚನೆಯಂತೆ ಶುಕ್ರವಾರ ನಡೆದ ಸಭೆಯಲ್ಲಿ ಸಾರಿಗೆ ಇಲಾಖೆ ದರವನ್ನು ಫಿಕ್ಸ್‌ ಮಾಡಿದೆ. ಮಿನಿಮಮ್ ಚಾರ್ಜ್ ಜೊತೆಗೆ ಶೇ.5ರಷ್ಟು ದರವನ್ನು ಫಿಕ್ಸ್‌ ಮಾಡಿ ಸಾರಿಗೆ ಇಲಾಖೆ ಆದೇಶ ಪ್ರಕಟಿಸಿದೆ. ಮಿನಿಮಮ್ ಚಾರ್ಜ್ 30, 40, 60 ಇದ್ರು ಅದರ ಜೊತೆಗೆ ಶೇ.5ರಷ್ಟು ದರವನ್ನು ಮಾತ್ರ ಸಾರಿಗೆ ಇಲಾಖೆ ಹೆಚ್ಚಿಸಿದೆ. 30+ 5 %   ಹೆಚ್ಚಿನ ದರದ ಜೊತೆಗೆ + 5% ಜಿಎಸ್ಟಿ ಸೇರಿಸಲು ಆದೇಶ ನೀಡಲಾಗಿದೆ. ಇದರ ಆದೇಶದ ಪ್ರತಿಯನ್ನು ಸ್ವತಃ ಸಾರಿಗೆ ಇಲಾಖೆಯೇ ಹೈಕೋರ್ಟ್‌ಗೆ ಸಲ್ಲಿಕೆ ಮಾಡಲಿದೆ.

ಕೋರ್ಟ್ ಸೂಚನೆಯಂತೆ ಹೆಚ್ಚುವರಿ ಶೇ 5% ಹೆಚ್ಚುವರಿ ದರವನ್ನು ಸರ್ಕಾರ ನಿಗದಿ ಮಾಡಿದೆ. ಜಿಎಸ್‌ಟಿ ಸೇರಿದಂತೆ ಹೊಸ ದರ ನಿಗದಿ ಮಾಡಿದ ಸಾರಿಗೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಹೇಳಿದ್ದಾರೆ. ಮೊದಲ 2 ಕಿ.ಮೀಗೆ 30 ರಿಂದ 33 ರೂ ಏರಿಕೆಯಾಗಲಿದೆ. ಜಿಎಸ್‌ಟಿ ಸೇರ್ಪಡಿಸಿ ಶೇ 5% ರಷ್ಟು ಮಾತ್ರ ದರ ಏರಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಪ್ರಯಾಣಿಕರಿಗೆ ಹೊರೆಯಾಗದಂತೆ ದರ ನಿಗದಿ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ತಕ್ಷಣದಿಂದಲೆ ಹೊಸ ಪರಿಷ್ಕೃತ ದರ ಜಾರಿಗೊಳಿಸುವಂತೆ ಸರ್ಕಾರ ಸೂಚನೆ ನೀಡಿದ್ದಾರೆ. ಈಗಾಗಲೆ ದರ ನಿಗದಿ ಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಆಟೋ ಚಾಲಕರಿಂದ 'ನಮ್ಮ ಯಾತ್ರಿ' ಆ್ಯಪ್‌ ಬಿಡುಗಡೆಗೆ ಸಿದ್ಧತೆ!

15 ಅಗ್ರಿಗೇಟರ್ಸ್ ಕಂಪೆನಿಗಳಿಗೆ ಇಂದಿನಿಂದಲೆ ಹೊಸ ದರ ಜಾರಿಗೊಳಿಸಿ ಸರ್ಕಾರ ಆದೇಶ. ಸರ್ಕಾರ ಹೇಳಿದ ಹೊಸ ದರವನ್ನು ಕಟ್ಟುನಿಟ್ಟಾಗಿ ಅಗ್ರಿಗೇಟರ್ಸ್ ಕಂಪೆನಿ ಪಾಲನೆ ಮಾಡಲಿದೆಯೇ ಎನ್ನುವುದೇ ಮುಂದಿನ ಪ್ರಶ್ನೆಯಾಗಿ ಉಳಿದಿದೆ.

click me!