ಪ್ರಶಸ್ತಿಗಾಗಿ ಕೆಲಸ ಮಾಡಿಲ್ಲ: ಹಾಜಬ್ಬ, ಮಹಾಲಿಂಗ ನಾಯ್ಕ್

By Kannadaprabha News  |  First Published Aug 26, 2023, 11:39 PM IST

ನಾನು ಬಡತನದಲ್ಲಿ ಹುಟ್ಟಿಬೆಳೆದವ. ಕಿತ್ತಳೆ ಮಾರಿ ಜೀವನ ನಡೆಸಿದವ. ಬದುಕಿನಲ್ಲಿ ಅನೇಕ ಕಷ್ಟ, ಸವಾಲುಗಳನ್ನು ಎದುರಿಸಿದ್ದೇನೆ. ಪತ್ರಿಕಾ ಮಾಧ್ಯಮವು ನನ್ನನ್ನು ಜನರಿಗೆ ಪರಿಚಯಿಸಿದ್ದರಿಂದ ಪದ್ಮಶ್ರೀ ಪ್ರಶಸ್ತಿ ಪಡೆಯಲು ಕಾರಣವಾಯಿತು ಎಂದು ಅಕ್ಷರ ಸಂತ ಹರೇಕಾಳ ಹಾಜಬ್ಬ ಸ್ಪಷ್ಟಪಡಿಸಿದರು.


ಮಂಗಳೂರು (ಆ.26) :  ಐಎಂಸಿ (ಇತ್ತಿಫಾಕ್‌ ಮೀಲಾದ್‌ ಕಮಿಟಿ) ಜೋಗಿಬೆಟ್ಟು ಗಡಿಯಾರ್‌ ವತಿಯಿಂದ ಶಿಕ್ಷಣದ ಮಹತ್ವ ಮತ್ತು ಆದರ್ಶ ವ್ಯಕ್ತಿತ್ವ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ ಶನಿವಾರ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಗಡಿಯಾರದಲ್ಲಿ ನಡೆಯಿತು. ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಶಿಕ್ಷಕಿ ಸುಚೇತಾ ಅವರನ್ನೂ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಹರೇಕಳ ಹಾಜಬ್ಬ(Harekal hajabba), ನಾನು ಬಡತನದಲ್ಲಿ ಹುಟ್ಟಿಬೆಳೆದವ. ಕಿತ್ತಳೆ ಮಾರಿ ಜೀವನ ನಡೆಸಿದವ. ಬದುಕಿನಲ್ಲಿ ಅನೇಕ ಕಷ್ಟ, ಸವಾಲುಗಳನ್ನು ಎದುರಿಸಿದ್ದೇನೆ. ಪತ್ರಿಕಾ ಮಾಧ್ಯಮವು ನನ್ನನ್ನು ಜನರಿಗೆ ಪರಿಚಯಿಸಿದ್ದರಿಂದ ಪದ್ಮಶ್ರೀ ಪ್ರಶಸ್ತಿ ಪಡೆಯಲು ಕಾರಣವಾಯಿತು. ನನಗೆ ಯಾವುದೇ ವಿದ್ಯಾಭ್ಯಾಸ ಇಲ್ಲ. ಶಾಲೆಯ ಉಳಿವಿಗಾಗಿ ಅನೇಕ ಹೋರಾಟಗಳನ್ನು ಮಾಡಿದ್ದೇನೆ. ನೀವು ಉತ್ತಮವಾಗಿ ಕಲಿತು ಉತ್ತಮ ಪ್ರಜೆಗಳಾಗಿ ಎಂದು ಕರೆ ನೀಡಿದರು.

Tap to resize

Latest Videos

ನಾನು ಯಾವುದೇ ಪಕ್ಷಕ್ಕೆ ಸೇರಿ​ದ​ವ​ನ​ಲ್ಲ: ಹರೇ​ಕಳ ಹಾಜಬ್ಬ ಸ್ಪಷ್ಟ​ನೆ

ಇನ್ನು ಇದೇ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಅಮೈ ಮಹಾಲಿಂಗ ನಾಯ್‌್ಕ, ನಾನು ಕೂಲಿ ಕೆಲಸ ಮಾಡಿ ಜೀವನ ನಡೆಸಿದವನು. ನನಗೆ ವಿದ್ಯಾಭ್ಯಾಸ ಇಲ್ಲ. ಹೀಗಾಗಿ ನನ್ನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದೆ. ನಮ್ಮ ಕಡೆ ನೀರಿನ ಸಮಸ್ಯೆ ಇತ್ತು. ಹೀಗಾಗಿ ಜಲಕ್ರಾಂತಿ ಮಾಡಲು ಪ್ರಯತ್ನಿಸಿದೆ. ಪ್ರಶಸ್ತಿಗಾಗಿ ಈ ಕಾರ್ಯ ಮಾಡಿದ್ದಲ್ಲ. ನನಗೆ ಅದರ ನಿರೀಕ್ಷೆಯೇ ಇರಲಿಲ್ಲ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ರಫೀಕ್‌ ಮಾಸ್ಟರ್‌ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಂಸಿ ಜೋಗಿಬೆಟ್ಟು ಅಧ್ಯಕ್ಷ ಅಬ್ದುಲ್‌ ರಶೀದ್‌ ವಹಿಸಿದ್ದರು. ಕಾರ್ಯಕ್ರಮವನ್ನು ಶಾಲೆ ಮುಖ್ಯೋಪಾಧ್ಯಾಯ ಪುಟ್ಟರಂಗನಾಥ.ಟಿ. ಉದ್ಘಾಟಿಸಿದರು. ಗಡಿಯಾರ ಎಸ್‌ಡಿಎಂಸಿ ಅಧ್ಯಕ್ಷ ಇಬ್ರಾಹಿಂ, ಎಂಜಿಎಂ ಗಡಿಯಾರ ಅಧ್ಯಕ್ಷ ರಿಯಾಝ್‌ ಕಲ್ಲಾಜೆ, ಪತ್ರಕರ್ತ ಶಂಶೀರ್‌ ಬುಡೋಳಿ, ಐಎಂಸಿ ಕಾರ್ಯದರ್ಶಿ ಅಲ್ತಾಫ್‌ ವಿದ್ಯಾನಗರ, ಖಜಾಂಜಿ ಷರೀಫ್‌ ಪಟೀಲ, ಜತೆ ಕಾರ್ಯದರ್ಶಿ ಆಶಿಕ್‌ ಜೋಗಿಬೆಟ್ಟು ಮತ್ತಿತರರು ಇದ್ದರು.

 

ಉಳ್ಳಾಲ: ಅಕ್ಷರ ಸಂತಗೆ ಗೌರವ, ಗ್ರಾ.ಪಂ. ಕಟ್ಟಡದಲ್ಲಿ ಹಾಜಬ್ಬರ ಚಿತ್ರ ರಚನೆ

click me!