ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಮಹಿಳೆಯರಿಗೆ ಇಲ್ಲ ಶೇ.50 ಮೀಸಲಾತಿ

Kannadaprabha News, Ravi Janekal |   | Kannada Prabha
Published : Mar 09, 2026, 06:52 AM IST
No women reservationin Greater Bengaluru Authority elections

ಸಾರಾಂಶ

ನಗರಾಭಿವೃದ್ಧಿ ಇಲಾಖೆಯು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಬಿಜಿಎ) ಐದು ಪಾಲಿಕೆಗಳ ಚುನಾವಣೆಗೆ ವಾರ್ಡ್‌ವಾರು ಮೀಸಲಾತಿ ಅಂತಿಮ ಪಟ್ಟಿ ಪ್ರಕಟಿಸಿದೆ.  369 ವಾರ್ಡ್‌ಗಳ ಪೈಕಿ ಮಹಿಳೆಯರಿಗೆ ನೀಡಬೇಕಿದ್ದ ಶೇ.50ರಷ್ಟು ಮೀಸಲಾತಿ ಪಾಲನೆಯಾಗದೆ, 9 ಸೀಟುಗಳ ಕೊರತೆ ಉಂಟಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರು (ಮಾ.9): ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಬಿಜಿಎ) ಐದು ಪಾಲಿಕೆಗಳಿಗೆ ಬಹು ನಿರೀಕ್ಷೆಯ ಚುನಾವಣೆಗೆ ಶನಿವಾರ ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿರುವ ವಾರ್ಡ್‌ವಾರು ಮೀಸಲಾತಿ ಅಂತಿಮ ಪಟ್ಟಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಸೀಟುಗಳ ಮೀಸಲಾತಿ ನಿಯಮ ಪಾಲನೆಯಾಗಿಲ್ಲ.

ಐದು ಪಾಲಿಕೆಗಳಲ್ಲಿ ಇರುವ 369 ವಾರ್ಡ್‌ಗಳ ಪೈಕಿ ನಿಯಮಾನುಸಾರ ಮಹಿಳೆಯರಿಗೆ 185 ಸೀಟುಗಳನ್ನು ಮೀಸಲಿಡಬೇಕಿತ್ತು. ಆದರೆ, 176 ವಾರ್ಡ್‌ಗಳನ್ನು ಮಾತ್ರ ಮಹಿಳೆಯರಿಗೆ ನೀಡಲಾಗಿದೆ. 9 ಸೀಟ್‌ಗಳು ಕೊರತೆಯಾಗಿವೆ. ಮಹಿಳಾ ಮೀಸಲಾತಿ ಪಾಲನೆಯಾಗದಿರುವುದರಿಂದ ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ.

ಜನವರಿ ಎರಡನೇ ವಾರದಲ್ಲಿ ಮೀಸಲಾತಿ ಕರಡು ಪಟ್ಟಿಗೆ ರಾಜಕೀಯ ವಲಯದಿಂದ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಿಲ್ಲ ಎಂದು ಅನೇಕರು ಆಕ್ಷೇಪಣೆ ಸಲ್ಲಿಸಿದ್ದರು. ಆದರೂ, ಶೇ.50ರಷ್ಟು ಮೀಸಲಾತಿ ಪಾಲನೆಯಾಗದಿರುವುದು ಚರ್ಚೆಗೆ ಗ್ರಾಸವಾಗಿದೆ.

ಮೀಸಲಾತಿ ವಿವರಗಳು: 2011ರ ಜನಗಣತಿ ಅನುಸಾರ ವಾರ್ಡ್‌ಗಳ ಮರು ವಿಂಗಡಣೆ ಮಾಡಲಾಗಿದ್ದು, 369 ವಾರ್ಡ್‌ಗಳಲ್ಲಿ ಅನುಸೂಚಿತ ಜಾತಿಗೆ 43 ಸೀಟು, ಅನುಸೂಚಿತ ಪಂಗಡಕ್ಕೆ 9, ಹಿಂದುಳಿದ ‘ಅ’ ವರ್ಗಕ್ಕೆ 97, ಹಿಂದುಳಿದ ‘ಬ’ ವರ್ಗ 24 ಹಾಗೂ ಸಾಮಾನ್ಯ ವರ್ಗಕ್ಕೆ 198 ಸೀಟುಗಳು ಇವೆ.

ಕೇಂದ್ರ ನಗರ ಪಾಲಿಕೆ: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 63 ವಾರ್ಡ್‌ಗಳಿವೆ. ಅನುಸೂಚಿತ ಜಾತಿಗೆ 11 ವಾರ್ಡ್, ಅನುಸೂಚಿತ ಪಂಗಡಕ್ಕೆ 3, ಹಿಂದುಳಿದ ‘ಅ’ ವರ್ಗ 15, ಹಿಂದುಳಿದ ‘ಬ’ ವರ್ಗ 4 ಮತ್ತು ಸಾಮಾನ್ಯ ವರ್ಗಕ್ಕೆ 32 ವಾರ್ಡ್‌ಗಳಿವೆ. ಮಹಿಳೆಯರಿಗೆ ಒಟ್ಟು ಸ್ಥಾನ 30.

ಪೂರ್ವ ನಗರ ಪಾಲಿಕೆ:  ವ್ಯಾಪ್ತಿಯಲ್ಲಿ 50 ವಾರ್ಡ್‌ಗಳಿವೆ. ಅನುಸೂಚಿತ ಜಾತಿಗೆ 7 ವಾರ್ಡ್, ಅನುಸೂಚಿತ ಪಂಗಡಕ್ಕೆ 1, ಹಿಂದುಳಿದ ‘ಅ’ ವರ್ಗ 14 , ಹಿಂದುಳಿದ ‘ಬ’ ವರ್ಗಕ್ಕೆ 3 ಮತ್ತು ಸಾಮಾನ್ಯ ವರ್ಗಕ್ಕೆ 25 ವಾರ್ಡ್‌ಗಳಿವೆ. ಮಹಿಳೆಯರಿಗೆ ಒಟ್ಟು ಸೀಟ್ 23.

ಪಶ್ಚಿಮ ನಗರ ಪಾಲಿಕೆ:  ವ್ಯಾಪ್ತಿಯಲ್ಲಿ 112 ವಾರ್ಡ್‌ಗಳಿವೆ. ಅನುಸೂಚಿತ ಜಾತಿಗೆ 9 ವಾರ್ಡ್, ಅನುಸೂಚಿತ ಪಂಗಡಕ್ಕೆ 2, ಹಿಂದುಳಿದ ‘ಅ’ ವರ್ಗ 30, ಹಿಂದುಳಿದ ‘ಬ’ ವರ್ಗ 7 ಮತ್ತು ಸಾಮಾನ್ಯ ವರ್ಗಕ್ಕೆ 64 ವಾರ್ಡ್‌ಗಳಿವೆ. ಮಹಿಳೆಯರಿಗೆ ಒಟ್ಟು ಸ್ಥಾನ 55.

ಉತ್ತರ ನಗರ ಪಾಲಿಕೆ: ವ್ಯಾಪ್ತಿಯಲ್ಲಿ 72 ವಾರ್ಡ್‌ಗಳಿವೆ. ಅನುಸೂಚಿತ ಜಾತಿಗೆ 9 ವಾರ್ಡ್, ಅನುಸೂಚಿತ ಪಂಗಡಕ್ಕೆ 2, ಹಿಂದುಳಿದ ‘ಅ’ ವರ್ಗ 19, ಹಿಂದುಳಿದ ‘ಬ’ ವರ್ಗ 5 ಮತ್ತು ಸಾಮಾನ್ಯ ವರ್ಗಕ್ಕೆ 37 ವಾರ್ಡ್‌ಗಳಿವೆ. ಮಹಿಳೆಯರಿಗೆ ಒಟ್ಟು ಸ್ಥಾನ 34.

ದಕ್ಷಿಣ ನಗರ ಪಾಲಿಕೆ:  ವ್ಯಾಪ್ತಿಯಲ್ಲಿ 72 ವಾರ್ಡ್‌ಗಳಿವೆ. ಅನುಸೂಚಿತ ಜಾತಿಗೆ 7 ವಾರ್ಡ್, ಅನುಸೂಚಿತ ಪಂಗಡಕ್ಕೆ 1, ಹಿಂದುಳಿದ ‘ಅ’ ವರ್ಗ 19, ಹಿಂದುಳಿದ ‘ಬ’ ವರ್ಗ 5 ಮತ್ತು ಸಾಮಾನ್ಯ ವರ್ಗಕ್ಕೆ 40 ವಾರ್ಡ್‌ಗಳಿವೆ. ಮಹಿಳೆಯರಿಗೆ ಒಟ್ಟು ಸ್ಥಾನ 34.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಮಹಿಳೆಯರಿಗೆ ಇಲ್ಲ ಶೇ.50 ಮೀಸಲಾತಿ
‘ಥ್ಯಾಂಕ್ಸ್‌ ಅಪ್ಪ’ ಕಾದಂಬರಿ ಪ್ರತಿ ಮನೆಯಲ್ಲೂ ಇರಲಿ: ನ್ಯಾ.ಸಂತೋಷ್‌