Belagavi: ಕರಾಳ ದಿನಕ್ಕೆ ಜನರೇ ಬಾರದೇ ಎಂಇಎಸ್‌ಗೆ ಭಾರೀ ಮುಖಭಂಗ

By Kannadaprabha NewsFirst Published Nov 2, 2024, 12:41 PM IST
Highlights

ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಸಂಘಟಿಸಿದ್ದ ಕರಾಳ ದಿನಾಚರಣೆ ಸಂಪೂರ್ಣವಾಗಿ ವಿಫಲವಾಯಿತು. ಎಂಇಎಸ್‌ ನಾಯಕರ ಕರೆಗೆ ಮರಾಠಿ ಭಾಷಿಕರಿಂದ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರೆಯಲಿಲ್ಲ. 

ಬೆಳಗಾವಿ (ನ.02): ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಸಂಘಟಿಸಿದ್ದ ಕರಾಳ ದಿನಾಚರಣೆ ಸಂಪೂರ್ಣವಾಗಿ ವಿಫಲವಾಯಿತು. ಎಂಇಎಸ್‌ ನಾಯಕರ ಕರೆಗೆ ಮರಾಠಿ ಭಾಷಿಕರಿಂದ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರೆಯಲಿಲ್ಲ. ಮೆರವಣಿಗೆಯಲ್ಲಿ ಬೆರಳಣಿಕೆಯಷ್ಟು ಪಾಲ್ಗೊಂಡಿದ್ದ ಎಂಇಎಸ್‌ ಪುಂಡರು ಕಪ್ಪು ಬಟ್ಟೆ ಧರಸಿ ಮೆರವಣಿಗೆ ನಡೆಸಿದರು. ಬೆಳಗಾವಿ, ನಿಪ್ಪಾಣಿ, ಕಾರವಾರ, ಖಾನಾಪುರ ಸೇರಿದಂತೆ ಗಡಿಭಾಗದಲ್ಲಿರುವ ಮರಾಠಿ ಬಹುಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವಂತೆ ಘೋಷಣೆ ಕೂಗಿದರು. 

ಮಹಾದ್ವಾರ ರಸ್ತೆಯ ಸಂಭಾಜಿ ಉದ್ಯಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಶಿವಾಜಿ ಉದ್ಯಾನ, ಶಹಾಪುರ ಖಡೇಬಜಾರ, ಕೋರೆ ಗಲ್ಲಿ ಮೂಲಕ ಹಾಯ್ದು ಗೋವಾವೇಸ್‌ಗೆ ತೆರಳಿ ಮುಕ್ತಾಯವಾಯಿತು. ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನಾಚರಣೆಗೆ ಅನುಮತಿ ನೀಡಿರುವುದನ್ನು ಖಂಡಿಸಿ ಗೋಗಟೆ ವೃತ್ತದ ಬಳಿ ಕನ್ನಡಪರ ಹೋರಾಟಗಾರರು ಕರಾಳ ದಿನಾಚರಣೆ ರ್‍ಯಾಲಿಯತ್ತ ನುಗ್ಗಲು ಯತ್ನಿಸಿದರು. ಈ ವೇಳೆ ಕನ್ನಡ ಹೋರಾಟಗಾರರನ್ನು ಪೊಲೀಸರು ತಡೆದು, ವಾಪಸ್‌ ಕಳಿಸಿದರು.

Latest Videos

ಮಧ್ಯರಾತ್ರಿ ಧ್ವಜ ಹಾರಿಸಿ ಕನ್ನಡ ರಾಜ್ಯೋತ್ಸವ ಆಚರಿಸಿದ ಬೆಳಗಾವಿ ಜನತೆ!

ಕನ್ನಡಪರ ಸಂಘಟನೆಗಳು ಕರಾಳ ದಿನಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಎಂಇಎಸ್‌ನ ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌ ಖಡಕ್‌ ಸಂದೇಶ ರವಾನಿಸಿದ್ದರು ಕನ್ನಡಿಗರ ತೀವ್ರ ವಿರೋಧಧ ನಡುವೆಯೂ ಪೊಲೀಸ್‌ ಭದ್ರತೆಯಲ್ಲೇ ಎಂಇಎಸ್‌ ಕರಾಳ ದಿನಾಚರಣೆ ಮಾಡಿರುವುದು ಕನ್ನಡ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ನಡೆ ಕೂಡ ಅನುಮಾನ ಮೂಡಿಸುವಂತೆ ಮಾಡಿದೆ.

click me!