ಏರುದನಿಯಲ್ಲಿ ಮಾತಾಡ್ಬೇಡಿ: ಕಸಾಪ ಮಾರ್ಗಸೂಚಿ ಹೊರಡಿಸಿದ ಮಹೇಶ್‌ ಜೋಶಿ

By Kannadaprabha News  |  First Published Mar 22, 2023, 8:26 AM IST

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸದಸ್ಯರು ಏರುಧ್ವನಿಯಲ್ಲಿ ಮಾತನಾಡಬಾರದು. ಸಭೆಯ ನಿರ್ಣಯಗಳ ಕುರಿತು ಕಸಾಪ ಜಿಲ್ಲಾಧ್ಯಕ್ಷರು ಮಾಧ್ಯಮ ಹೇಳಿಕೆ ನೀಡಬಾರದು ಎಂಬುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಹೊರಡಿಸಿದ್ದಾರೆ.


ಬೆಂಗಳೂರು (ಮಾ.22): ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸದಸ್ಯರು ಏರುಧ್ವನಿಯಲ್ಲಿ ಮಾತನಾಡಬಾರದು. ಸಭೆಯ ನಿರ್ಣಯಗಳ ಕುರಿತು ಕಸಾಪ ಜಿಲ್ಲಾಧ್ಯಕ್ಷರು ಮಾಧ್ಯಮ ಹೇಳಿಕೆ ನೀಡಬಾರದು ಎಂಬುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಹೊರಡಿಸಿದ್ದಾರೆ.

ಕಾರ್ಯಕಾರಿ ಸಮಿತಿಯಲ್ಲಿ ಕೆಲವು ಜಿಲ್ಲಾ ಘಟಕಗಳ ಅಧ್ಯಕ್ಷರು ಪದೇ ಪದೇ ತಮ್ಮ ಅಸ್ತಿತ್ವವನ್ನು ತೋರಿಸಲಿಕ್ಕಾಗಿ, ಏರುಧ್ವನಿಯಲ್ಲಿ ಮಾತನಾಡುತ್ತಾ ಬೇರೆ ಜಿಲ್ಲಾಧ್ಯಕ್ಷರಿಗೆ ಚರ್ಚೆಯಲ್ಲಿ ಅವಕಾಶ ನೀಡದಂತೆ ಮಾತನಾಡುತ್ತಿರುವುದು ಕಂಡುಬಂದಿದೆ. ಆದ್ದರಿಂದ ಕಾರ್ಯಕಾರಿ ಸಮಿತಿಯ ಅನೇಕ ಸದಸ್ಯರು, ‘ನಮಗೆ ಸಭೆಯಲ್ಲಿ ಮಾತನಾಡಲು ಅವಕಾಶವೇ ಸಿಗುತ್ತಿಲ್ಲ. ಹಾಗಾಗಿ ಎಲ್ಲರಿಗೂ ಮಾತನಾಡಲು ಅವಕಾಶ ನೀಡುವಂತೆ ಸೂಕ್ತ ರೀತಿಯಲ್ಲಿ ಸಭೆ ಜರುಗಿಸಬೇಕು, ಮಾರ್ಗಸೂಚಿಗಳನ್ನು ಹೊರಡಿಸಬೇಕು’ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಡಾ.ಮಹೇಶ್‌ಜೋಶಿ ತಿಳಿಸಿದ್ದಾರೆ.

Tap to resize

Latest Videos

ಆದಿಚುಂಚನಗಿರಿಯಲ್ಲಿ ಡಿಕೆಶಿ ಅಮಾವಾಸ್ಯೆ ಪೂಜೆ: ಸಾಮೂಹಿಕ ಭೋಜನ, ಶ್ರೀಗಳಿಂದ ಆಶೀರ್ವಾದ

ಮಾರ್ಗಸೂಚಿಗಳು
* ಕಾರ್ಯಕಾರಿ ಸಮಿತಿ ಸಭೆಯು ಸರಿಯಾದ ಸಮಯಕ್ಕೆ ಪ್ರಾರಂಭವಾಗುವುದರಿಂದ ಸಭಾಸೂಚನಾ ಪತ್ರದಲ್ಲಿ ಸೂಚಿಸಿದ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ತಡವಾಗಿ ಬಂದಲ್ಲಿ 15 ನಿಮಿಷ ನೋಡಿ ಗೈರುಹಾಜರಿ ಎಂದು ಪರಿಗಣಿಸಲಾಗುವುದು. ಹದಿನೈದು ನಿಮಿಷಗಳ ನಂತರ ಸಭಾ ಕೊಠಡಿಯ ಬಾಗಿಲನ್ನು ಮುಚ್ಚಲಾಗುವುದು.

* ಕಾರ್ಯಸೂಚಿಯಲ್ಲಿ ತಿಳಿಸಿರುವ ವಿಷಯಗಳ ಹೊರತಾಗಿ ಸದಸ್ಯರು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಏನಾದರೂ ಚರ್ಚಿಸಬೇಕಿದ್ದಲ್ಲಿ, ಆ ವಿಷಯಗಳ ಕುರಿತು ಸಭೆ ನಡೆಯುವ ಮೂರು ದಿನಗಳ ಮುಂಚಿತವಾಗಿ ಅಧ್ಯಕ್ಷರಿಗೆ ಲಿಖಿತರೂಪದಲ್ಲಿ ನೀಡಬೇಕು. ಅಂತಹ ವಿಷಯಗಳ ಚರ್ಚೆಗೆ ಅಧ್ಯಕ್ಷರಿಗೆ ಅನುಮತಿ ಪಡೆದುಕೊಂಡ ನಂತರ ಸಭೆಯಲ್ಲಿ ಚರ್ಚಿಸಬೇಕು.

* ಸಭೆಯಲ್ಲಿ ಮಾತನಾಡಲು ಹಾಗೂ ಪ್ರಶ್ನೆಗಳನ್ನು ಕೇಳುವಾಗ ಕೈ ಎತ್ತುವುದರ ಮೂಲಕ ಸಭಾಧ್ಯಕ್ಷರ ಅನುಮತಿಯನ್ನು ಪಡೆದುಕೊಳ್ಳಬೇಕು ಹಾಗೂ ಬೇರೆ ಸದಸ್ಯರು ತಮ್ಮ ಮಾತುಗಳನ್ನು ಪೂರ್ಣಗೊಳಿಸುವವರೆಗೂ ಮಧ್ಯೆ ಮಾತನಾಡುವುದು ಸಮಂಜಸವಾದುದಲ್ಲ. ಆದ್ದರಿಂದ ಎಲ್ಲರಿಗೂ ಸಭೆಯಲ್ಲಿ ಮಾತನಾಡಲು ಅವಕಾಶವಾಗುವಂತೆ ನಡೆದುಕೊಳ್ಳಬೇಕು.

* ಬೇರೆಯವರಿಗೆ ಮಾತನಾಡಲು ಅವಕಾಶವಾಗದಂತೆ ಸಭಾಧ್ಯಕ್ಷರ ಅನುಮತಿ ಪಡೆಯದೇ ಪದೇ ಪದೇ ಏರುಧ್ವನಿಯಲ್ಲಿ ಮಾತನಾಡಿದ್ದಲ್ಲಿ, ಅಂತಹ ಸದಸ್ಯರ ಮೇಲೆ ಸಭಾ ಅಧ್ಯಕ್ಷರ ಕಾರ್ಯನಿರ್ವಹಣೆಯಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು.

ಬಿಜೆಪಿ, ಕಾಂಗ್ರೆಸ್‌ಗೆ ಬೆಂಗಳೂರು ದುಡ್ಡು ಮಾಡುವ ಎಟಿಎಂ: ಎಚ್‌.ಡಿ.ಕುಮಾರಸ್ವಾಮಿ ಕಿಡಿ

* ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಅಧ್ಯಕ್ಷರ ಹೊರತುಪಡಿಸಿ ಬೇರೆಯವರು ಮಾಧ್ಯಮಗಳಲ್ಲಿ ಹೇಳಿಕೆ ನೀಡಬಾರದು. ತಮ್ಮ ಜಿಲ್ಲಾ, ಗಡಿನಾಡು ಘಟಕಗಳ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ತಾವು ಮಾಧ್ಯಮಗಳಲ್ಲಿ ಹೇಳಿಕೆ ನೀಡಬಹುದು.

click me!