
ಬೆಂಗಳೂರು[ನ.10]: ಕರ್ನಾಟಕ-ಕೇರಳ ನಡುವೆ ಸಂಪರ್ಕ ಕಲ್ಪಿಸುವ ಬಂಡಿಪುರ ನೈಟ್ ಟ್ರಾಫಿಕ್’ಗೆ ಅನುಮತಿ ಬೇಡ ಎಂದು ಆಗ್ರಹಿಸಿ ಇಂದು ಪರಿಸರವಾದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿ’ಗಳು ನೈಟ್ ಟ್ರಾಫಿಕ್ ಬೇಡ ಎಂದು ಪ್ರೀಡಂ ಪಾರ್ಕ್’ನಲ್ಲಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಟೀಂ ಇಂಡಿಯಾ ಕ್ರಿಕೆಟಿಗ ಯೂಸುಫ್ ಪಠಾಣ್ ಕೂಡಾ ಸಾಥ್ ನೀಡಿದ್ದಾರೆ.
ಪರಿಸರವಾದಿ ಸುರೇಶ್ ಹೆಬ್ಳೀಕರ್, ಬಂಡೀಪುರ ಹೋರಾಟ ಕರ್ತೃ ರಾಜ್ ಕುಮಾರ್ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಯುತ್ತಿದ್ದು, ಬಂಡಿಪುರ ಟೋಲ್’ನಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ಮಾಡಿಕೊಟ್ಟರೆ ಪ್ರಾಣಿಗಳ ಜೀವಕ್ಕೆ ಅಪಾಯ ಎಂದು ಪರಿಸರವಾದಿಗಳ ಆಂತಕ ವ್ಯಕ್ತಪಡಿಸಿದ್ದಾರೆ. ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆ ತನಕ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕೋ, ಬೇಡವೋ ಎನ್ನುವ ಕುರಿತಂತೆ ಸುಪ್ರೀಂ ಕೋರ್ಟ್ ಇದೇ ನವೆಂಬರ್ 17ರಂದು ತೀರ್ಪು ನೀಡಲಿದೆ.
ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಳಲು ಕೇರಳ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿತ್ತು. ಕೇರಳದ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ, ಈಗಾಗಲೇ ವಾಹನ ಸಂಚಾರಕ್ಕಾಗಿ ಬಂಡೀಪುರಲ್ಲಿ ಟೋಲ್ ನಿರ್ಮಿಸಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ವಿರೋಧಿಸಿ ಪರಿಸರವಾದಿಗಳು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಭಾರತ್ ಮಾಲ ಪ್ರಾಜೆಕ್ಟ್ ಯೋಜನೆಯಡಿ ಬಂಡಿಪುರದಲ್ಲಿ ಟೋಲ್ ರೆಡಿಯಾಗಿದೆ. ಕೇರಳ ಹಾಗೂ ಕರ್ನಾಟಕಕ್ಕೆ ರಸ್ತೆ ಮಾರ್ಗ ಕಲ್ಪಿಸುವ ಗುಂಡ್ಲುಪೇಟೆಯಲ್ಲಿ ಟೋಲ್ ನಿರ್ಮಾಣವಾಗಿದ್ದು, ಗುಂಡ್ಲುಪೇಟೆಯಿಂದ ಸುಲ್ತಾನ್ ಬಥೇರಿಗೆ ಹೋಗುವ ಮಾರ್ಗ ಮಧ್ಯೆ ಟೋಲ್ ನಿರ್ಮಾಣವಾಗಿದೆ. ಸುಮಾರು 30 ಕಿ.ಮೀ ಶಾರ್ಟ್ ಕಟ್ ರಸ್ತೆ ಇದಾಗಿದ್ದು, ಈ ಯೋಜನೆಗೆ ಕೇರಳದ ಪರಿಸರ ಸಂರಕ್ಷಣಾ ಸಂಸ್ಥೆ ಎಲಿವೇಟೆಡ್ ಕಾರಿಡಾರ್, ನೈಟ್ ಟ್ರಾಫಿಕ್ ಬ್ಯಾನ್’ಗೆ ಆಗ್ರಹಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ