ಅಂಗನವಾಡಿ ಶಿಕ್ಷಕರ 65000 ಮೊಬೈಲ್‌ಗೆ ಕರೆನ್ಸಿಯೇ ಇಲ್ಲ!

Published : May 08, 2022, 04:45 AM IST
 ಅಂಗನವಾಡಿ ಶಿಕ್ಷಕರ 65000 ಮೊಬೈಲ್‌ಗೆ ಕರೆನ್ಸಿಯೇ ಇಲ್ಲ!

ಸಾರಾಂಶ

- 3 ತಿಂಗಳಿಂದ ಮೊಬೈಲ್ ಗಳು ಸ್ತಬ್ಧ - ಮೊಬೈಲ್‌ ಕೊಟ್ಟು ರೀಚಾರ್ಜ್ ಮಾಡಿಸದ ಸರ್ಕಾರ - ಅಧಿಕಾರಿಗಳ ಮಟ್ಟದಲ್ಲಿ ಆಗಿದ್ದ ಆರ್ಯಕ್ರಮ  

ಸಿ.ಎ.​ಇ​ಟ್ನಾ​ಳ​ಮ​ಠ

ಅಥಣಿ (ಮೇ. 8): ಸ್ಥಳೀಯ ಮಟ್ಟದ ಮಾಹಿತಿಗಳನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ನೀಡುವ ಸಲುವಾಗಿ ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿರುವ 65 ಸಾವಿರಕ್ಕೂ ಅಧಿಕ ಅಂಗನವಾಡಿ ಶಿಕ್ಷಕರಿಯರಿಗೆ (anganwadi teachers) ಒದಗಿಸಲಾಗಿದ್ದ ಮೊಬೈಲ್‌ ಸೇವೆಗಳು (Moblise Service) ರಿಚಾರ್ಜ್ (Recharge) ಮಾಡದ ಹಿನ್ನೆಲೆಯಲ್ಲಿ 3 ತಿಂಗಳಿಂದ ಸಂಪೂರ್ಣ ಸ್ತಬ್ಧಗೊಂಡಿವೆ.

2021 ಡಿಸೆಂಬರ್‌ ತಿಂಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ (Women and Child development) ಅಂಗನವಾಡಿ ಶಿಕ್ಷಕಿಯರಿಗೆ ಮೊಬೈಲ್‌ ಒದ​ಗಿ​ಸಲಾಗಿತ್ತು. ಅಲ್ಲದೆ, ಪ್ರತಿ​ಯೊಬ್ಬ ಶಿಕ್ಷ​ಕಿ​ಯ​ರಿಗೆ ನೀಡ​ಲಾ​ಗಿದ್ದ ಮೊಬೈಲ್‌ಗೆ ಮೇಲ​ಧಿ​ಕಾ​ರಿ​ಗಳೇ ಪ್ರಿಪೇ​ಡ್‌ ಕರೆನ್ಸಿ ಹಾಕಿ​ಸುವ ಜವಾ​ಬ್ದಾರಿಯನ್ನು ಹೊತ್ತು​ಕೊಂಡಿ​ದ್ದರು. ಆದರೆ, ಕಳೆದ ಮೂರ್ನಾಲ್ಕು ತಿಂಗ​ಳಿಂದ ಕರೆ​ನ್ಸಿ​ಯನ್ನು ಮೊಬೈ​ಲ್‌ಗೆ ಹಾಕಿಯೇ ಇಲ್ಲ.

ಏಕೆ ನೀಡ​ಲಾ​ಗಿತ್ತು ಮೊಬೈ​ಲ್‌?: ರಾಜ್ಯ ಸರ್ಕಾ​ರಕ್ಕೆ ಸ್ಥಳೀಯ ಮಟ್ಟದ ಅದ​ರಲ್ಲೂ ತಳ​ಮ​ಟ್ಟ​ದ​ಲ್ಲಿ​ರುವ ಮಾಹಿ​ತಿ​ ಪಡೆ​ದು​ಕೊ​ಳ್ಳಲು ಇರು​ವುದು ಇದೇ ಅಂಗ​ನ​ವಾಡಿ ಶಿಕ್ಷ​ಕಿ​ಯರು. ಅವರು ನಿತ್ಯ ಸರ್ಕಾರಕ್ಕೆ ಸ್ಥಳೀಯ ಮಟ್ಟದ ಮಾಹಿತಿಯನ್ನು ಮೊಬೈಲ್‌ ಮೂಲಕ ತಮ್ಮ ಮೇಲಧಿಕಾರಿಗಳಿಗೆ ತಿಳಿಸಬೇಕು. ನಿತ್ಯ ಮಕ್ಕಳ ಹಾಜರಾತಿ, ಬಾಣಂತಿಯರ ಆರೋಗ್ಯದ ಸ್ಥಿತಿಗತಿ, ಗ್ರಾಮದಲ್ಲಿ ಶಿಶು ಮರಣ ಬಾಣಂತಿ, ಪ್ರತಿ ತಿಂಗಳು ಹುಟ್ಟಿದ ಮಗುವಿನ ಆರೋಗ್ಯದ ಸ್ಥಿತಿ ಒಳಗೊಂಡು ಎಲ್ಲ ಮಾಹಿತಿಯನ್ನು ಒದ​ಗಿ​ಸ​ಲು ರಾಜ್ಯ ಸರ್ಕಾ​ರ ಮೊಬೈಲ್‌ ಒದ​ಗಿ​ಸಿತ್ತು. ಇದರಿಂದ ಹೆಚ್ಚು ಅನು​ಕೂಲ ಕೂಡ ಆಗಿತ್ತು. ಈಗ ಮೊಬೈಲ್‌ ಸ್ಥಗಿತವಾಗಿರುವುದರಿಂದ ಮಾಹಿತಿ ಹಂಚಿಕೊಳ್ಳಲು ಕಷ್ಟವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮೊಬೈ​ಲ್‌ಗೂ ಮೊದಲು ಪರಿ​ಸ್ಥಿತಿ ಹೇಗಿ​ತ್ತು?: ಈ ಸೌಲಭ್ಯ ಮೊಬೈಲ್‌ ಸೌಲಭ್ಯ ಇಲ್ಲದ ವೇಳೆ ಪ್ರತಿ ಹದಿನೈದು ದಿನಕ್ಕೊಮ್ಮೆ ತಾಲೂಕು ಮತ್ತು ವಿಭಾಗದ ಮಟ್ಟದ ಕಂದಾಯ ಅಧಿಕಾರಿಗಳು ಪ್ರತಿ ಅಂಗನವಾಡಿ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಸಭೆ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದರು. ಮೊಬೈಲ್‌ ಒದ​ಗಿ​ಸಿ​ರು​ವುದು ಬಜೆಟ್‌ ಘೋಷಣೆ ಯೋಜನೆ ಆಗಿರಲಿಲ್ಲ. ಅಧಿಕಾರಿಗಳ ಮಟ್ಟದಲ್ಲಿ ಕೈಗೊಂಡ ನಿರ್ಣ​ಯ​ವಾ​ಗಿತ್ತು ಎಂದು ಮೂಲ​ಗಳು ಹೇಳಿವೆ.

"ಮೊಬೈಲ್‌ ಸೇವೆ ಸ್ಥಗಿತವಾಗಿದ್ದು ಸತ್ಯ. ಇದರ ಬಗ್ಗೆ ನಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಹೆಚ್ಚಿನ ವಿವರ ನಮಗೆ ಗೊತ್ತಿಲ್ಲ' ಎಂದು ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಅಭಿವೃ​ದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಎ.ಎಂ.ಬಸವರಾಜ ಹೇಳಿದ್ದಾರೆ.

Udupi Anganwadi Recruitment 2022: ಅಂಗನವಾಡಿ ಕೇಂದ್ರದ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraj bommai) ತಮ್ಮ ಚೊಚ್ಚಲ ಬಜೆಟ್​ ನಲ್ಲಿ, ನಿರೀಕ್ಷೆಯಂತೆಯೇ ಅಂಗನವಾಡಿ ಕಾರ್ಯಕರ್ತೆಯರು (Anganwadi Workers)ಮತ್ತು ಅಂಗನವಾಡಿ ಸಹಾಯಕಿಯರ (Anganwadi helper) ವೇತನ ಹಾಗೂ ಭತ್ಯೆಯನ್ನು ಹೆಚ್ಚಳ  ಮಾಡಿದ್ದರು. ಮಾತ್ರವಲ್ಲ ಆಶಾ ಕಾರ್ಯಕರ್ತರು (asha workers), ಗ್ರಾಮ ಸಹಾಯಕರು ಮತ್ತು ಬಿಸಿಯೂಟ ತಯಾರಕರಿಗೂ  ಗೌರವ ಧನ ಹೆಚ್ಚಿಸಲಾಗಿದೆ.  20 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ 1,500 ರೂ. 15 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 1,200 ರೂ. ಹಾಗೂ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ರೂ. ಗೌರವಧನ ಹೆಚ್ಚಳ ಮಾಡಲಾಗಿದೆ.

Uttara Kannada Anganwadi Recruitment 2022: ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ

ವೇತನ ಹಾಗೂ ಭತ್ಯೆ ಹೆಚ್ಚಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪ್ರತಿಭಟನೆ ನಡೆಸಿದ್ದರು. ರಾಜ್ಯ ಸರ್ಕಾರದ ನಿಯಮಾವಳಿ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ 18 ಸಾವಿರ ರು.ಕನಿಷ್ಠ ವೇತನ ಕೊಡಬೇಕು. ಆದರೆ, ಈಗಲೂ 10 ಸಾವಿರ ರೂ.ಗಳಿಗೆ ದುಡಿಸಲಾಗುತ್ತಿದೆ. ರಾಜ್ಯದಲ್ಲಿ 62 ಸಾವಿರ ಅಂಗನವಾಡಿಗಳಲ್ಲಿ 1.24 ಲಕ್ಷ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್