
ಬೆಂಗಳೂರು, (ಆ.24): ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ಇಂದು (ಆ.24) ವಿಧಾನಸೌಧದ ಕಚೇರಿಯಲ್ಲಿ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಅಧಿಕಾರಿಗಳೊಂದಿಗೆ ಹಲವಾರು ವಿಷಯಗಳ ಕುರಿತು ಚರ್ಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಸಂಬಂಧ ಯಾವುದೇ ಚರ್ಚೆ ಮಾಡಿಲ್ಲ ಸ್ಪಷ್ಟಪಡಿಸಿದರು.
ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಸಾರಿಗೆ ಸಚಿವ ಶ್ರೀರಾಮುಲು
ಇಷ್ಟು ದೊಡ್ಡ ನಷ್ಟಕ್ಕೆ ಕಾರಣ ಡೀಸಲ್ ದರ ಹೆಚ್ಚಳ. ಪ್ರಯಾಣಿಕರ ಸಂಖ್ಯೆ ಕಡಿಯಾದಾಗಲೂ ನಷ್ಟವಾಗುತ್ತದೆ. ಹೀಗಾಗಿ ಡೀಸಲ್ ಬೆಲೆ ಮಾತ್ರವಲ್ಲ. ಖಾಲಿ ವಾಹನ ಚಲಾಯಿಸುವಿದರಿಂದಲೂ ನಷ್ಟವಾಗುತ್ತಿದೆ. ಎಲೆಕ್ಟ್ರಾನಿಕ್ ಬಸ್ಗಳ ಬಳಕೆ ಹೆಚ್ಚಿಸುವುದರಿಂದ ನಷ್ಟ ಕಡಿಮೆ ಮಾಡಬಹುದು. ಇಂಧನ ಬೆಲೆ ಇಡೀ ದೇಶದಲ್ಲಿದೆ, ಕಡಿಮೆ ಮಾಡಿ ಅಂತ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಜನರಿಗೆ ಹೊರೆಯಾಗದ ರೀತಿ ಲಾಭವಾಗಿ ಮಾಡಬೇಕಿದೆ. ಸೇವೆಯ ಜೊತೆಯಲ್ಲಿ ಲಾಭದಾಯಕವಾಗಿ ಮಾಡಬೇಕು. ಇದಕ್ಕಾಗಿ ಜನರಿಗೆ ಅನುಕೂಲ ಅಗುವ ರೀತಿ ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ. ಟೆಕ್ನಾಲಜಿ ಬಳಸಿ ಕ್ಯಾಶ್ ಲೆಸ್ ಟಿಕೆಟ್ ದೊರೆಯುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಎಂದು ತಿಳಿಸಿದರು.
KSRTC 427 ಕೋಟಿ, BMTC 548 ಕೋಟಿ, NWKSRTC 389 ಕೋಟಿ, ಕಲ್ಯಾಣ ಕರ್ನಾಟಕ 191 ಕೋಟಿ ರೂ. ಒಟ್ಟು 1121 ಕೋಟಿ ರೂ ನಷ್ಟವಾಗಿದೆ ಎಂದು ಶ್ರೀರಾಮುಲು ಮಾಹಿತಿ ನೀಡಿದರು.
ಸಾರಿಗೆ ನೌಕರರ ವೇತನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾರಿಗೆ ನೌಕರರಿಗೆ ಈವರೆಗೂ ಸರ್ಕಾರದಿಂದ ಹಣ ಬಿಡುಗಡೆ ಮಾಡಿ ವೇತನ ನೀಡಲಾಗಿದೆ. ಕಳೆದ ವರ್ಷ 1,953 ಕೋಟಿ. ಈ ವರ್ಷ 597 ಕೋಟಿ. ಒಟ್ಟರೆ 2,551 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು,
ಇನ್ನು ಶಾಲೆಗಳು ಆರಂಭವಾಗಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಬಸ್ ಪಾಸ್ ಬಗ್ಗೆ ಪ್ರತಿಕ್ರಿಯಿಸಿ, ಇಂದಿನಿಂದಲೇ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆದುಕೊಳ್ಳಬಹುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ