ಈ 5 ರಾಜ್ಯಗಳಿಂದ ಬರೋ ಜನರಿಗೆ ಕರ್ನಾಟಕಕ್ಕೆ ನೋ ಎಂಟ್ರಿ: ಸಂಪುಟ ಸಭೆಯಲ್ಲಿ ತೀರ್ಮಾನ

By Suvarna NewsFirst Published May 28, 2020, 6:36 PM IST
Highlights

ಕರ್ನಾಟಕಕ್ಕೆ ಈ ಪಂಚರಾಜ್ಯಗಳಿಂದ ಬರೋರಿಗೆ ನೋ ಎಂಟ್ರಿ. ಈ ಬಗ್ಗೆ ಸಚಿವ ಸಂಪುದಲ್ಲಿ ತೀರ್ಮಾನ. ಹಾಗಾದ್ರೆ ಪಂಚರಾಜ್ಯಗಳಾವುವು..? ಎನ್ನುವ ವಿವರ ಈ ಕೆಳಗಿನಂತಿದೆ.

ಬೆಂಗಳೂರು, (ಮೇ.28): ಕೋವಿಡ್-19 ಸೋಂಕಿತರ ಪ್ರಮಾಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಅನ್ಯರಾಜ್ಯಗಳಿಂದ ಬರುವವರಿಗೆ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ.

ಹೀಗಾಗಿ ಐದು ರಾಜ್ಯಗಳಿಂದ ಜನರು ನಮ್ಮ ರಾಜ್ಯಕ್ಕೆ ಬರುವುದನ್ನು ಇನ್ನೂ 15 ದಿನಗಳ ಕಾಲ ನಿರ್ಭಂಧಿಸಲಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ತಮಿಳುನಾಡು, ರಾಜಸ್ಥಾನ ರಾಜ್ಯಗಳಿಂದ ಬರುವುದನ್ನು ಇನ್ನೂ 15 ದಿನಗಳ ಕಾಲ (ಜೂನ್ 1ರ ವರೆಗೆ) ತಡೆಹಿಡಿಯಲಾಗಿದೆ.

ದಣಿವರಿಯದ ಧೋನಿ, ನೋಟು ಮುದ್ರಣಕ್ಕೆ ಅಸ್ತು ಅಂದ್ರಾ ಪ್ರಧಾನಿ? ಮೇ.28ರ ಟಾಪ್ 10 ಸುದ್ದಿ! 

ರಾಜ್ಯ ಸಂಪುಟ ಸಭೆಯಲ್ಲಿ ಇಂದು (ಗುರುವಾರ) ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು, ಸಭೆಯ ನಂತರ ಸಚಿವ ಮಾಧುಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಈ ಮಾಹಿತಿ ನೀಡಿದರು.

ವಿಮಾನ, ರೈಲು ಅಥವಾ ರಸ್ತೆ ಮಾರ್ಗ ಸೇರಿದಂತೆ ಯಾವುದರಿಂದ ಬಂದರೂ ಅವರಿಗೆ ಕರ್ನಾಟಕಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

click me!