ಸುಪ್ರೀಂ ತೀರ್ಪು : ಇಬ್ಬರು ಅನರ್ಹರ ಸ್ಥಿತಿ ಅತಂತ್ರ

By Suvarna News  |  First Published Nov 14, 2019, 7:41 AM IST

ರಾಜರಾಜೇಶ್ವರಿ ನಗರ, ಮಸ್ಕಿ ಕ್ಷೇತ್ರಗಳ ಅನರ್ಹ ಶಾಸಕರಾದ ಮುನಿರತ್ನ, ಪ್ರತಾಪ್‌ಗೌಡ ಪಾಟೀಲ್ ಭವಿಷ್ಯ ಇನ್ನೂ ತ್ರಿಶಂಕು ಸ್ಥಿತಿಯಲ್ಲಿದೆ. 
 


ಬೆಂಗಳೂರು [ನ.14]:  ಸ್ಪರ್ಧಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದರೂ, ತಾಂತ್ರಿಕ ಕಾರಣದಿಂದಾಗಿ ಉಪಚುನಾವಣೆ ಘೋಷಣೆ ಆಗದ ರಾಜರಾಜೇಶ್ವರಿ ನಗರ, ಮಸ್ಕಿ ಕ್ಷೇತ್ರಗಳ ಅನರ್ಹ ಶಾಸಕರಾದ ಮುನಿರತ್ನ, ಪ್ರತಾಪ್‌ಗೌಡ ಪಾಟೀಲ್ ಭವಿಷ್ಯ ಇನ್ನೂ ತ್ರಿಶಂಕು ಸ್ಥಿತಿಯಲ್ಲಿದೆ. 

ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಅನರ್ಹ ಶಾಸಕರಾದ ಮುನಿರತ್ನ ಹಾಗೂ ಪ್ರತಾಪ್‌ಗೌಡ ಪಾಟೀಲ್ ಅವರ ರಾಜಕೀಯ ಭವಿಷ್ಯ ಇನ್ನೂ ತ್ರಿಶಂಕು ಸ್ಥಿತಿಯಲ್ಲಿದೆ. 

Tap to resize

Latest Videos

ಬೇಗ್ ಬಿಟ್ಟು ಉಳಿದೆಲ್ಲ ಅನರ್ಹರು ಬಿಜೆಪಿ ಸೇರ್ಪಡೆ...

ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ಈ ಎರಡು ಕ್ಷೇತ್ರಗಳಿಗೆ ತಾಂತ್ರಿಕ ಕಾರಣದಿಂದಾಗಿ ಉಪಚುನಾವಣೆಯೇ ಘೋಷಣೆಯಾಗಿಲ್ಲ. ಇಬ್ಬರ ವಿರುದ್ಧವೂ ಪರಾಜಿತ ಬಿಜೆಪಿ ಅಭ್ಯರ್ಥಿ ಗಳು ದಾಖಲಿಸಿದ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿದೆ. 

ಆ ಪ್ರಕರಣಗಳ ಇತ್ಯರ್ಥವಾಗಬೇಕು ಅಥವಾ ಅರ್ಜಿದಾರರು ಕೇಸು ವಾಪಸ್ ಪಡೆಯಬೇಕು. ಈ ನಿಟ್ಟಿನಲ್ಲಿ ಎರಡೂ ಕ್ಷೇತ್ರಗಳಲ್ಲಿನ ಬಿಜೆಪಿಯ ಪರಾಜಿತ ಅಭ್ಯರ್ಥಿಗಳ ಮನವೊಲಿಕೆ ಕಾರ್ಯ ಮುಂದುವರೆದಿದೆ. ಅದು ಯಶಸ್ವಿಯಾದ ನಂತರವೇ ಉಪಚುನಾವಣೆ ಘೋಷಣೆ ಯಾಗಲಿದೆ.

click me!