
ಬೆಂಗಳೂರು : ‘ಚಿತ್ರರಂಗದ ಇತರೆ ನಟಿಯರು ಬೆಂಬಲ ಸೂಚಿಸದ ಬಗ್ಗೆ ಬೇಸರವಿಲ್ಲ. ನಾನು ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗೋದಿಲ್ಲ, ಯಾರಲ್ಲೂ ಕ್ಷಮೆ ಕೇಳೋದಿಲ್ಲ. ನಾನು ಮಾಡಿರುವ ಆರೋಪಕ್ಕೆ ನನ್ನ ಬಳಿ ಸಾಕ್ಷಿಗಳಿವೆ. ನಾನೇನು ಸುಮ್ಮನೆ ಈ ರೀತಿ ಆರೋಪ ಮಾಡುತ್ತಿಲ್ಲ’ ಎಂದು ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ.
ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಬುಧವಾರ ರಾಜ್ಯ ಮಹಿಳಾ ಆಯೋಗಕ್ಕೆ ಭೇಟಿ ನೀಡಿ ತಮ್ಮ ಹೇಳಿಕೆ ದಾಖಲಿಸಿದರು. ಶ್ರುತಿ ಹರಿಹರನ್ ಮಾಡಿದ್ದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಈ ಸಂಬಂಧ ಹೇಳಿಕೆ ನೀಡುವಂತೆ ಆಯೋಗ ಶ್ರುತಿಗೆ ಸೂಚನೆ ನೀಡಿದ ಹಿನ್ನೆಲೆ ತಮ್ಮ ವಕೀಲರೊಂದಿಗೆ ಆಗಮಿಸಿದ ಶ್ರುತಿ, ವಿಸ್ಮಯ ಚಿತ್ರೀಕರಣದ ವೇಳೆ ನಡೆದ ಘಟನಾವಳಿಗಳನ್ನು ಆಯೋಗದೊಂದಿಗೆ ಹಂಚಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರುತಿ ಹರಿಹರನ್, ಹೋರಾಟ ನಡೆಸಲು ನನಗೆ ಧೈರ್ಯ ಇದೆ. ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ಲೈಂಗಿಕ ಕಿರುಕುಳದಲ್ಲಿ ನೊಂದ ಎಲ್ಲಾ ಹೆಣ್ಣು ಮಕ್ಕಳಿಗೂ ನ್ಯಾಯ ಸಿಗಬೇಕು. ನಾನು ಸಾಕ್ಷಿ ಇಲ್ಲದೆ ಇಂತಹ ಆರೋಪ ಮಾಡಿಲ್ಲ. ನನ್ನ ಬಳಿ ಇರುವ ಸಾಕ್ಷ್ಯಾಧಾರವನ್ನು ಮಹಿಳಾ ಆಯೋಗಕ್ಕೂ ನೀಡಿದ್ದೇನೆ ಎಂದು ತಿಳಿಸಿದರು.
ನನಗೆ ಆಯೋಗದ ಅಧ್ಯಕ್ಷೆ ಜತೆಗೆ ಮಾತನಾಡಿದ್ದು ಖುಷಿ ನೀಡಿದೆ. ನಾನು ಮಾಡಿರುವ ಆರೋಪಕ್ಕೆ ನನ್ನ ಬಳಿ ಸಾಕ್ಷಿ ಇದೆ. ಅವುಗಳನ್ನು ಆಯೋಗದ ಅಧ್ಯಕ್ಷರಿಗೆ ತೋರಿಸಿದ್ದೇನೆ. ನ್ಯಾಯಾಲಯಕ್ಕೂ ಈಗಾಗಲೇ ಎಲ್ಲಾ ಸಾಕ್ಷಿಗಳನ್ನು ಸಲ್ಲಿಸಿದ್ದೇನೆ. ನನಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ