
ಚಿಕ್ಕೋಡಿ (ಮಾ.9): ನಿಪ್ಪಾಣಿಯ ಐತಿಹಾಸಿಕ ಶ್ರೀರಾಮ ಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿ ಕಿಡಿಗೇಡಿಗಳು ಬರೆದಿರುವ ಪತ್ರ ದೇವಸ್ಥಾನದಲ್ಲಿ ಸಿಕ್ಕಿವೆ. ಇದೇ ಮಾ.20 ಅಥವಾ 21 ರಂದು ಶ್ರೀರಾಮ ಮಂದಿರ ಸ್ಫೋಟಿಸುವುದಾಗಿ ಪತ್ರದಲ್ಲಿ ಬರೆಯಲಾಗಿದೆ. ಈ ಘಟನೆಯಿಂದ ಹಿಂದೂ ಸಂಘಟನೆಗಳು ಕೆರಳಿದ್ದು ಆಕ್ರೋಶ ವ್ಯಕ್ತಪಡಿಸಿವೆ.
ಶ್ರೀರಾಮಮಂದಿರ ಸ್ಫೋಟಿಸುವುದಾಗಿ ಆಗುಂತಕರು ಬೆದರಿಕೆ ಹಾಕಿರುವ ವಿಚಾರವಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರತಿಕ್ರಿಯಿಸಿದ್ದು, ಇಂಥಾ ಗೊಡ್ಡು ಬೆದರಿಕೆಗಳಿಗೆ ಹಿಂದೂ ಸಮಾಜ ಹೆದರೋದಿಲ್ಲ ಎಂದು ಗುಡುಗಿದ್ದಾರೆ.
ರಾಮಂದಿರ ಸ್ಫೋಟಿಸುತ್ತೇವೆ; ಅಲ್ಲಾಹು ಅಕ್ಬರ್ ಎಂದು ಪತ್ರ ಬರೆದ ಕ್ರಿಮಿನಲ್‌ಗಳು: ಪೊಲೀಸರಿಂದ ಹೈ-ಅಲರ್ಟ್
ಇದು ಘಜನಿ, ಬಾಬರ, ಗೋರಿ, ಕಾಲವಲ್ಲ. ಭಾರತೀಯ ಮುಸ್ಲಿಂ ಸಮುದಾಯ ನಮ್ಮ ಜೊತೆಗಿದ್ದಾರೆ. ಹಿಂದೂ ದೇವಾಲಯಗಳನ್ನು ಪೂಜಿಸುವಂತೆ ನಾವು ಹೇಳೋದಿಲ್ಲ. ಇತರ ಧರ್ಮಗಳನ್ನು ಗೌರವಿಸುವುದನ್ನು ಕಲಿಯಬೇಕು. ಈ ಪ್ರಕರಣವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ರಾಮೇಶ್ವರಂ ಕೆಫೆ ಬಾಂಬರ್ ಕ್ಲಿಯರ್ ಪಿಕ್ಚರ್ ಬಿಡುಗಡೆ ಮಾಡಿದ ಎನ್‌ಐಎ!
ನಿಪ್ಪಾಣಿ ಶ್ರೀರಾಮಮಂದಿರದ ಒಂದೇ ಒಂದು ಕಲ್ಲು ಮುಟ್ಟುವುದಕ್ಕೆ ಆಗುವುದಿಲ್ಲ. ನಿಮಗೆ ತಾಕತ್ತು ಇದ್ದರೆ ಮುಟ್ಟಿನೋಡಿ, ಮುಂದೆ ಏನಾಗುತ್ತೆ ಎಂಬುದನ್ನು ನೋಡುವಿರಂತೆ. ನಮ್ಮ ಕಾರ್ಯಕರ್ತರು ಹಿಂದೂ ದೇವಾಲಯಗಳ ರಕ್ಷಣೆಗೆ ಮುಂದಾಗಬೇಕು. ಸರ್ಕಾರ ಕೂಡ ಶ್ರೀರಾಮ್ ಮಂದಿರಗಳಿಗೆ ರಕ್ಷಣೆ ನೀಡಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ