ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಶೇ.60ಕ್ಕಿಂತ ಹೆಚ್ಚಿನ ಜನರು ವಲಸಿಗರೇ ಆಗಿದ್ದಾರೆ. ಆದರೆ, ಬೆಂಗಳೂರಿಗೆ ಬಂದ ಬಹುತೇಕರ ಉದ್ದೇಶ ಏನು ಅಂತಾ ನೋಡಿದರೆ, ನಿಮ್ಮದೂ ಆದೇ ಆಗಿರುತ್ತೆ ನೋಡಿ...
ಬೆಂಗಳೂರು (ಮಾ.09): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೂಲ ನಿವಾಸಿಗಳಿಗಿಂತ ವಲಸೆ ಬಂದು ವಾಸವಾದವರ ಸಂಖ್ಯೆಯೇ ಬಹುಪಾಲಿದೆ. ಇನ್ನು ಬೆಂಗಳೂರಿಗೆ ಆಗಮಿಸುವ ಮಧ್ಯಮ ವರ್ಗದ ಬಹುಪಾಲು ಜನರು ಯಾವ ಉದ್ದೇಶಕ್ಕೆ ಬೆಂಗಳೂರಿಗೆ ಬಂದಿದ್ದಾರೆ ಎಂಬ ಪ್ರಶ್ನೆ ಕೇಳಿದರೆ, ಸಾಲ ತೀರಿಸಲು ಬಂದಿದ್ದೇವೆ ಎಂದು ಹೇಳಿದವರೇ ಹೆಚ್ಚಾಗಿದ್ದಾರೆ.
ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನಸಂಖ್ಯೆ ಅತಿವೇಗವಾಗಿ ಬೆಳೆಯುತ್ತಿದೆ. ಇಲ್ಲಿ ಜನಸಂಖ್ಯೆ ಬೆಳೆಯುವುದಕ್ಕೆ ಮುಖ್ಯ ಕಾರಣ ಜನನ ಪ್ರಮಾಣ ಹೆಚ್ಚಾಗುವುದಲ್ಲ. ಇಲ್ಲಿ ಜನಸಂಖ್ಯೆ ಹೆಚ್ಚಾಗಲು ಕಾರಣ ಮೂಲಸೌಕರ್ಯಗಳು, ವಿಪುಲ ಉದ್ಯೋಗಾವಕಾಶಗಳು ಕಾರಣ ಎಂದು ಹೇಳಬಹುದು. ಉದ್ಯೋಗ ಹುಡುಕಿಕೊಂಡು ವಲಸೆ ಬರುವ ಜನರ ಪ್ರಮಾಣವೇ ಹೆಚ್ಚಾಗಿದೆ. ಆದ್ದರಿಂದ ಬೆಂಗಳೂರಿನ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಅತಿ ವೇಗದಲ್ಲಿ ಬೆಳೆಯುತ್ತಿದೆ. ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ ಬರೋಬ್ಬರಿ 1 ಕೋಟಿ 40 ಲಕ್ಷ ಜನರು ವಾಸವಾಗಿದ್ದಾರೆ.
undefined
ಬೆಂಗಳೂರು ನಿವಾಸಿಗಳೇ ನೀರಿಗಾಗಿ ಮಾಸಿಕ 6,000 ರೂ. ಭರಿಸಲು ಸಿದ್ಧರಾಗಿ; ಇಲ್ಲವೆಂದರೆ ನೀರು ಸಿಗೊಲ್ಲ!
ಇಷ್ಟು ದೊಡ್ಡ ಮಟ್ಟದ ಜನಸಂಖ್ಯೆಯಲ್ಲಿ ಶೇ.60ಕ್ಕೂ ಹೆಚ್ಚಿನ ಜನರು ವಲಸಿಗರಾಗಿದ್ದಾರೆ. ಈ ಪೈಕಿ ಬಡ ಮತ್ತು ಮಧ್ಯಮ ವರ್ಗದ ಜನರು ಬೆಂಗಳೂರಿಗೆ ಒಂದೇ ಒಂದು ಉದ್ದೇಶವೆಂದರೆ ದುಡಿಮೆ ಎಂದು ಹೇಳಬಹುದು. ಇನ್ನು ದುಡಿಮೆಯ ಉದ್ದೇಶಗಳನ್ನೂ ಹಲವು ವಿಧಗಳಾಗಿ ವಿಂಗಡಿಸಬಹುದು. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬೆಂಗಳೂರು ಲೈಫ್ (banglore_life__) ಎಂಬ ಹೆಸರಿನ ಖಾತೆದಾರರು ನೀವು ಬೆಂಗಳೂರಿಗೆ ಯಾಕೆ ಬಂದಿದ್ದು? ಎಂದು ಕೇಳಿದ್ದಾರೆ.
1) ಎಂಜಾಯ್ ಮಾಡೋಕೆ
2) ದುಡ್ಡು ಮಾಡೋಕೆ
3) ಸಾಲ ತೀರಿಸುವುದಕ್ಕೆ ಎಂದು ಪ್ರಶ್ನೆ ಮಾಡಲಾಗಿದೆ.
ಈ ಪ್ರಶ್ನೆಗೆ ಕಮೆಂಟ್‌ಗಳ ಮೂಲಕ ನೂರಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಸಾಲ ಪಡೆಯೋಕೆ ಬಂದವರು ಈ ರೀಲ್ಸ್ ಕಮೆಂಟ್ ಮಾಡಿ ಎಂದು ಹೇಳಿದ್ದಾರೆ. ಈ ರೀಲ್ಸ್ ಅನ್ನು 7,300ಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಅಂದರೆ, ಸಾಲ ತೀರಿಸಲು ಬಂದವರ ಸಂಖ್ಯೆಯೇ ಅಧಿಕವಾಗಿದೆ ಎಂದು ತಿಳಿದುಬಂದಿದೆ. ಇನ್ನು ಕೆಲವರು ಕಮೆಂಟ್ ಮಾಡಿ ಮನೆ ಕಟ್ಟಿದ ಸಾಲ, ಅಕ್ಕ ತಂಗಿಯರ ಮದುವೆ ಮಾಡಿದ ಸಾಲ, ಜಮೀನು ಖರೀದಿಸಿದ ಸಾಲ, ವ್ಯಾಪಾರಕ್ಕೆ ಮಾಡಿದ್ದ ಸಾಲವನ್ನು ತೀರಿಸಲು ಬೆಂಗಳೂರಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.
ರಾಮೇಶ್ವರಂ ಕೆಫೆ ಬಾಂಬರ್ ಕ್ಲಿಯರ್ ಪಿಕ್ಚರ್ ಬಿಡುಗಡೆ ಮಾಡಿದ ಎನ್‌ಐಎ!
ಸಾಲ ತೀರ್ಸೋಕೆ ಬಂದ್ 3ವರ್ಷ ಆಯ್ತು, ಆದರೆ ಇನ್ನು ಅರ್ಧ ಸಾಲ ಇದೆ ಎಂದು ವೆಂಕಟೇಶ್ ಎನ್ನುವವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ದುಡ್ಡು ಮಾಡೋಕೆ ಅಂತ ಬಂದು ಸಾಲ ಮಾಡಿಕೊಂಡಿದ್ದೇನೆ. ಇನ್ನು ಕಮೆಂಟ್ ಮಾಡಿದವರಲ್ಲಿ ಬಹುತೇಕರು ಸಾಲ ತೀರಿಸುವುದಕ್ಕೆ ಎಂದು ಹೇಳಿಕೊಂಡಿದ್ದಾರೆ. ಅಂದರೆ, ಬೆಂಗಳೂರಿಗೆ ಬಂದ ದುಡಿಮೆಯ ಉದ್ದೇಶಗಳಲ್ಲಿ ಸಾಲ ತೀರಿಸಲು ಬಂದು ಕನಿಷ್ಠ ಜೀವನ ಮಾಡುವವರೇ ಹೆಚ್ಚಾಗಿದ್ದಾರೆ ಎಂದು ಹೇಳಬಹುದು.